ಅಹಮದಾಬಾದ್​:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಬರಲಿದ್ದಾರೆ. ಮೊದಲ ಬಾರಿಗೆ ಭಾರತಕ್ಕೆ ಬರುತ್ತಿರುವ ಟ್ರಂಪ್​ ಫೆ.24 ಮತ್ತು 25ರಂದು ಎರಡು ದಿನಗಳ ಪ್ರವಾಸವನ್ನು ಕೈಗೊಳ್ಳಲಿದ್ದು, ಅಹಮದಾಬಾದ್​ನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್​ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆಂದು ಮಾಡುತ್ತಿರುವ ಖರ್ಚಿನ ವರದಿ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ.
ಅಹಮದಾಬಾದ್​ನ ಮೊಟೆರೋದಲ್ಲಿ ಕ್ರೀಡಾಂಗಣ ಉದ್ಘಾಟನೆ ಕಾರ್ಯಕ್ರಮಕ್ಕೆಂದು ಸರಿಸುಮಾರು 100 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗುತ್ತಿದೆ. ಇದು ಗುಜರಾತ್​ ಸರ್ಕಾರ ಪ್ರತಿ ವರ್ಷ ಮಂಡಿಸುವ ಮಂಡಿಸುವ ಬಜೆಟ್​ನ 1.5 ಭಾಗದಷ್ಟಾಗಿದೆ.
ಟ್ರಂಪ್​ಗೆ ಭಾರತ ಸುಂದರ ದೇಶವಾಗಿ ಕಾಣಬೇಕೆಂಬ ಕಾರಣಕ್ಕಾಗಿ ಅನೇಕ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಟ್ರಂಪ್​ ಅಹಮದಾಬಾದ್​ನ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮ ತಲುಪಲಿದ್ದು ಅಲ್ಲಿಂದ ರೋಡ್​ ಶೋ ಮುಖಾಂತರವಾಗಿ ಮೊಟೆರಾ ತಲುಪಲಿದ್ದಾರೆ. ಟ್ರಂಪ್​ ಓಡಾಡುವ 18 ರಸ್ತೆಗಳನ್ನೂ (22ಕಿ.ಮೀ) ಸಹ ವಿಸ್ತರಿಸಲಾಗುತ್ತಿದ್ದು, ರಸ್ತೆಯ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ರಸ್ತೆ ವಿಸ್ತರಣೆಗೆಂದೇ 300 ಮಿಲಿಯನ್​ ಹಣ ಖರ್ಚು ಮಾಡಲಾಗಿದೆ. ರೋಡ್​ ಶೋ ಹೋಗುವ ದಾರಿಯಲ್ಲಿ ಕಾಣ ಸಿಗುವ ಸ್ಲಂ ಟ್ರಂಪ್​ಗೆ ಕಾಣದಿರಲಿ ಎಂಬ ಕಾರಣದಿಂದ 7 ಅಡಿ ಎತ್ತರದ ಗೋಡೆ ಕಟ್ಟಲಾಗಿದೆ. ಮೊಟೆರಾದ ಕ್ರೀಡಾಂಗಣದ ಸುತ್ತಮುತ್ತ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ಟ್ರಂಪ್​ನ ಈ ಕಾರ್ಯಕ್ರಮಕ್ಕೆ ಸುಮರು 800ರಿಂದ 850 ಮಿಲಿಯನ್​ ಹಣ ಬೇಕಾಗಬಹುದು ಎಂದು ಅಂದಾಜಿಲಾಗಿತ್ತು. ಆದರೆ ಈಗ ಅಷ್ಟು ಸಾಕಾಗುವುದಿಲ್ಲ ಎನ್ನಲಾಗಿದೆ. ನಗರದ ಅಲಂಕಾರಕ್ಕಾಗಿ ಇನ್ನೂ 60 ಮಿಲಿಯನ್​ ಹಣ ಬೇಕಾಗುತ್ತದೆ ಎನ್ನಲಾಗಿದೆ. ಟ್ರಂಪ್​ ಅಹಮದಾಬಾದ್​ನಲ್ಲಿ ಕೇವಲ 3 ಗಂಟೆಗಳ ಕಾಲ ಇರಲಿದ್ದು ಅದಕ್ಕಾಗಿ 100 ಕೋಟಿ ಹಣ ಖರ್ಚು ಮಾಡುತ್ತಿರುವ ಬಗ್ಗೆ ಸಾಕಷ್ಟು ಚರ್ಚೆ ಉಂಟಾಗಿದೆ.
ಕ್ರೀಡಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. 50 ಸಾವಿರ ಜನರು ರೋಡ್ ಶೋನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಟ್ರಂಪ್​ ಅಹಮದಾಬಾದ್​​ನ ಜತೆ ಆಗ್ರಾಕ್ಕೂ ಭೇಟಿ ನೀಡಲಿದ್ದು ಆಗ್ರಾದಲ್ಲಿಯೂ ಸಹ ಭಾರೀ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + twenty =
Remember me
