ನಾಗಪುರ:ತನ್ನ ದುಡಿಮೆಗೆ ಆಧಾರವಾಗಿದ್ದ ಆಟೋವನ್ನು ಬಿಡಿಸಿಕೊಳ್ಳಲು ಬಡ ಆಟೋ ಚಾಲಕನೊಬ್ಬ ತನ್ನ ಮಗನ ಪಿಗ್ಗಿ ಬ್ಯಾಂಕಿನ ನಾಣ್ಯಗಳನ್ನು ತಂದೊಪ್ಪಿಸಿದ ಮನ ಕಲಕುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಈ ದೃಶ್ಯವನ್ನು ನೋಡಿದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಆತನ ಮೇಲಿದ್ದ ದಂಡದ ಮೊತ್ತವನ್ನು ತಾವೇ ಕಟ್ಟಿ ಮಾನವೀಯತೆ ಮೆರೆದಿದ್ದಾರೆ.
ನಾಗಪುರ ನಗರದ ಆಟೋ ಚಾಲಕ ರೋಹಿತ್​ ಖಡ್ಸೆ ಆಗಸ್ಟ್​ 8 ರಂದು ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಆಟೋ ಮೇಲೆ 200 ರೂ.ಗಳ ಚಲನ್​ ಇಶ್ಯೂ ಮಾಡಲಾಗಿತ್ತು. ನಂತರ ಆತನ ಆಟೋದ ಮೇಲೆ ಹಿಂದಿನ ದಂಡಗಳ ಮೊತ್ತಗಳು ಸೇರಿ 2000 ರೂ.ಗಳ ದಂಡ ಬಾಕಿ ಇದ್ದ ಕಾರಣ, ವಾಹನವನ್ನು ಜಪ್ತಿ ಮಾಡಲಾಗಿತ್ತು.
ಇದನ್ನೂ ಓದಿ:ಮುಂದುವರಿದ ಸಂಪುಟ ಕ್ಯಾತೆ: ಮತ್ತೆ ದೆಹಲಿಯತ್ತ ಸಿಎಂ ಬೊಮ್ಮಾಯಿ!
ವಾಹನವಿಲ್ಲದೆ ದುಡಿಮೆ ನಿಲ್ಲುವ ಭಯಕ್ಕೆ ಖಡ್ಸೆ, ಮಗನ ಹಣದ ಗುಲ್ಲಕವನ್ನು ಒಡೆದು ನಾಣ್ಯಗಳನ್ನು ಕವರಿನಲ್ಲಿ ತುಂಬಿಕೊಂಡು ದಂಡ ಕಟ್ಟಲು ಸೀತಾಬರ್ದಿ ಸಾರಿಗೆ ಕಛೇರಿಗೆ ಹೋಗಿದ್ದಾನೆ. ಇದನ್ನು ಕಂಡ ವಪೋನಿಯ ಹಿರಿಯ ಇನ್ಸ್​ಪೆಕ್ಟರ್​ ಅಜಯ್​ ಕುಮಾರ್​ ಮಾಳವೀಯ ಅವರು ತಮ್ಮ ಜೇಬಿನಿಂದ ದುಡ್ಡು ಕಟ್ಟಿ ಚಲನ್​ ತೀರಿಸಿದ್ದಾರೆ. ಹೀಗೆ ವಾಹನವನ್ನು ಬಿಡುಗಡೆ ಮಾಡಿಸಿದ್ದಲ್ಲದೆ, ಮಗುವಿನ ಗುಲ್ಲಕದ ದುಡ್ಡನ್ನು ವಾಪಸ್​ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.(ಏಜೆನ್ಸೀಸ್)
ಕ್ರಿಕೆಟ್​ ಪಟು ಧೋನಿಯನ್ನು ಕಾಣಲು 16 ದಿನ ನಡೆದು ಬಂದ ಅಭಿಮಾನಿ!

ಹೊಲದಲ್ಲಿ ದಿಢೀರ್​ ಪ್ರತ್ಯಕ್ಷವಾದ ‘ಐ ಲವ್​​ ಪಾಕಿಸ್ತಾನ್​’ ಎಂಬ ಬಲೂನು, ಪಾಕಿಸ್ತಾನಿ ಧ್ವಜ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:14 − 3 =
Remember me
