ತಿರುವನಂತಪುರ:ದಿನವಿಡೀ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಚಾಲಕನೊಬ್ಬನಿಗೆ ಇದೀಗ ಭಾಗ್ಯದ ಬಾಗಿಲು ತೆರೆದಿದೆ. ಅದರಲ್ಲೂ ಆತನ ಅದೃಷ್ಟ ಸಾಮಾನ್ಯದ್ದಲ್ಲ. ಏಕೆಂದರೆ ಆತನಿಗೆ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂ. ಬಂದಿದೆ.
ಕೇರಳ ಸರ್ಕಾರದ ಓಣಂ ವಿಶೇಷ ಲಾಟರಿಯಲ್ಲಿ ತಿರುವನಂತಪುರದ ಆಟೋಚಾಲಕ ಅನೂಪ್​ 25 ಕೋಟಿ ರೂ. ಬಂಪರ್ ಬಹುಮಾನಕ್ಕೆ ಪಾತ್ರನಾಗಿದ್ದಾನೆ. ಈತ ಪತ್ನಿ, ಮಗು ಹಾಗೂ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದು, ಇದೀಗ ಲಾಟರಿ ಬಂಪರ್ ಬಹುಮಾನದಿಂದಾಗಿ ಈ ಕುಟಂಬದ ಭಾಗ್ಯದ ಬಾಗಿಲು ತೆರೆದಂತಾಗಿದೆ.
ಸ್ಥಳೀಯ ಪಝವಂಗಡಿ ಗಣೇಶ ದೇವಸ್ಥಾನ ಬಳಿಯ ಏಜೆಂಟ್​​ನಿಂದ ಈತ ಟಿಕೆಟ್ ಖರೀದಿಸಿದ್ದು, ಟಿಕೆಟ್ ಕೊಟ್ಟ ಸಬ್​ ಏಜೆಂಟ್ ಈತನ ಹತ್ತಿರದ ಸಂಬಂಧಿ. ತೆರಿಗೆ ಮೊತ್ತ ಕಡಿತದ ಬಳಿಕ ಅನೂಪ್​ ಸುಮಾರು 15 ಕೋಟಿ ರೂ. ಬಹುಮಾನವಾಗಿ ಪಡೆಯಲಿದ್ದಾನೆ. ಕಳೆದ ವರ್ಷದ ಓಣಂ ಬಂಪರ್ ಪ್ರೈಜ್​ ಕೂಡ ಆಟೋಚಾಲಕನ ಪಾಲಾಗಿತ್ತು. ಪಿ.ಆರ್. ಜಯಪಾಲನ್ ಎಂಬಾತ ಬಂಪರ್​ ಬಹುಮಾನ ಗಳಿಸಿದ್ದ.
ರಾಜ್ಯಾದ್ಯಂತ ಮಕ್ಕಳ ಕಳ್ಳರು?; ಜನರ ಕೈಗೆ ಸಿಕ್ಕಿಹಾಕಿಕೊಂಡ ಇಬ್ಬರ ಪೈಕಿ ಒಬ್ಬನ ಜೇಬಲ್ಲಿದ್ದವು ಮಕ್ಕಳ ಫೋಟೋಗಳು!

ಯೂಟ್ಯೂಬ್​ನಲ್ಲಿ ಉಪ್ಪಿ ಹವಾ: ‘ಕಬ್ಜ’ ಟೀಸರ್​ ನಂ. 1 ಟ್ರೆಂಡಿಂಗ್​; 24 ಗಂಟೆಗಳಲ್ಲಿ 1 ಕೋಟಿಗೂ ಅಧಿಕ ವ್ಯೂಸ್..

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:13 + fifteen =
Remember me
