ಚೆನ್ನೈ:ಹಾರ್ನ್​​ ಮಾಡಿ ದಾರಿ ಬಿಡುವಂತೆ ಹೇಳಿದ್ದಕ್ಕೆ ಗುಂಪೊಂದು ಆಟೋ ಚಾಲಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನ ಅಂಬತ್ತೂರು ಪ್ರದೇಶದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಕಾಮೇಶ್​(25)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಈತನ ಅಣ್ಣ ಸತೀಶ್​(29) ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಅಪ್ರಾಪ್ತ ವಯಸ್ಕರರು ಸೇರಿದಂತೆ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತರು ಸೂರ್ಯ(23), ಗೌತಮ್(22),ಅಜಯ್(22), ಅಜಯ್(22), ರಿಯಾಜ್(19), ಕತಿರೇಸನ್(19), ನವೀನ್ ಕುಮಾರ್(18) ಹಾಗೂ ಇಬ್ಬರು ಅಪ್ರಾಪ್ತ ವಯಸ್ಕರರು ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು ಘಟನೆಯೂ ರಾತ್ರಿ 11:30ರ ಸುಮಾರಿಗೆ ನಡೆದಿದ್ದು, ಸ್ನೇಹಿತನ ಜನುಮದಿನದ ನಿಮಿತ್ತ ಗುಂಪೊಂದು ಅಂಬತ್ತೂರು ಪ್ರದೇಶದ ರಸ್ತೆಯೊಂದರಲ್ಲಿ ಕೇಕ್​ ಕಟ್​ ಮಾಡುತ್ತಿದ್ದರು. ತನ್ನ ಸಹೋದರ ಸತೀಶ್​ನನ್ನು ಅಂಬತ್ತೂರಿನಿಂದ ಓರಗಡಂ ಪ್ರದೇಶಕ್ಕೆ ಬಿಟ್ಟು ಬರಲು ಕಾಮೇಶ್​ ತನ್ನ ಆಟೋದಲ್ಲಿ ತೆರಳುತ್ತಿದ್ದ.
ಇದನ್ನೂ ಓದಿ:AI ಅಪಾಯಗಳ ಬಗ್ಗೆ 40 ವರ್ಷಗಳ ಹಿಂದೆಯೇ ಎಚ್ಚರಿಸಿದ್ದೆ: ಜೇಮ್ಸ್​ ಕ್ಯಾಮರೂನ್
ಆರೋಪಿಗಳು ಅಂಬತ್ತೂರು ಪ್ರದೇಶದ ಅಯ್ಯಪ್ಪನ್​ ಸ್ಟ್ರೀಟ್​ ಜಂಕ್ಷನ್​ ಬ್ಲಾಕ್​ ಮಾಡಿ ತನ್ನ ಸ್ನೇಹಿತನೊಬ್ಬನ ಜನುಮ ದಿನವನ್ನು ಆಚರಿಸುತ್ತಿದ್ದರು. ಈ ವೇಳೆ ಕಾಮೇಶ್​ ಹಾರ್ನ್​ ಮಾಡಿದ್ದು, ಆರೋಪಿಗಳಿಗೆ ದಾರಿ ಬಿಡುವಂತೆ ಹೇಳಿದ್ದಾನೆ. ಸ್ವಲ್ಪ ಹೊತ್ತು ಕಾಯುವಂತೆ ಆರೋಪಿಗಳು ಸಂತ್ರಸ್ತನಿಗೆ ಸೂಚಿಸಿದ್ದಾರೆ.
ದಾರಿ ಬಿಡುವಂತೆ ಪುನಃ ಕೇಳಿದಾಗ ಕೆರಳಿದ ಆರೋಪಿಗಳು ಕಾಮೇಶ್​ ಹಾಗೂ ಆತನ ಅಣ್ಣನ ಮೇಲೆ ಡ್ರ್ಯಾಗರ್​ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಸತೀಶ್​ ನೆರೆಹೊರೆಯವರು ಹಾಗೂ ಸಂಬಂಧಿಕರನ್ನು ಕರೆಯುವಷ್ಟರಲ್ಲೇ ಆರೋಪಿಗಳು ಕಾಮೇಶ್​ನನ್ನು ಬರ್ಬರವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
ಸಹೋದರನನ್ನು ರಕ್ಷಿಸಲು ಮುಂದಾದ ಸತೀಶ್​ ಗಂಭೀರವಾಗಿಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಚಾರ್ಜ್​ಶೀಟ್​ ಸಿದ್ದಪಡಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
