ನವದೆಹಲಿ:ಆಟೋ ಚಾಲಕನೋರ್ವನಿಗೆ ಪೊಲೀಸರು 10,000 ರೂಪಾಯಿ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್​ ಚುನಾವಣಾ ಆಯೋಗಕ್ಕೆ, ದೆಹಲಿ ಸರ್ಕಾರಕ್ಕೆ ಮತ್ತು ಪೊಲೀಸರಿಗೆ ನೋಟಿಸ್ ನೀಡಿದೆ.
ಆಟೋ ಚಾಲಕ ರಾಜೇಶ್ ಎಂಬುವರು ತಮಗೆ ಪೊಲೀಸರು ದಂಡ ವಿಧಿಸಿದ್ದರ ವಿರುದ್ಧ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆಟೋದ ಮೇಲೆ ಐ ಲವ್​ ಕೇಜ್ರಿವಾಲ್​ ಎಂದು ಬರೆಸಿದ್ದಕ್ಕೆ ನನಗೆ 10,000 ರೂಪಾಯಿ ದಂಡ ಹಾಕಲಾಗಿದೆ. ನನ್ನ ಆಟೋದ ಮೇಲೆ ಇರುವ ಬರಹ, ಪೋಸ್ಟರ್​ಗಳು ಕಳೆದ ವರ್ಷ ಸೆಪ್ಟೆಂಬರ್​ ಮತ್ತು ಅಕ್ಟೋಬರ್​ನಲ್ಲಿ ಹಾಕಿದ್ದು. ಅದೂ ನನ್ನ ಸ್ವಂತ ಇಚ್ಛೆಯಿಂದ ಹಾಕಿದ್ದು ಹೊರತು ಯಾವುದೇ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗಿ ಬರೆದಿಲ್ಲ. ಆದರೆ ಜನವರಿ 15ರಂದು ಪೊಲೀಸರು ಇದೇ ಕಾರಣಕ್ಕೆ ದಂಡ ವಿಧಿಸಿದ್ದಾರೆ. ಐ ಲವ್​ ಕೇಜ್ರಿವಾಲ್​ ಎಂದು ಬರೆಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ರಾಜೇಶ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಜ.15ರಂದು ಕಾಲಿಂದಿ ಕುಂಜ್​ನಿಂದ ಅಪೋಲೋ ಆಸ್ಪತ್ರೆಯೆಡೆಗೆ ನಾನು ಪ್ರಯಾಣ ಮಾಡುತ್ತಿದ್ದೆ. ಆಗ ನನ್ನನ್ನು ತಡೆದ ಟ್ರಾಫಿಕ್​ ಪೊಲೀಸರು, ಆಟೋದ ಹಿಂದೆ ಆಮ್​ ಆದ್ಮಿ ಪಕ್ಷದ ಜಾಹೀರಾತುಗಳುಳ್ಳ ಪೋಸ್ಟರ್​ ಹಾಕಿದ್ದರ ಬಗ್ಗೆ ಪ್ರಶ್ನಿಸಿ ದಂಡ ವಿಧಿಸಿದ್ದಾರೆ. ಅದು ಜಾಹೀರಾತು ಅಲ್ಲ ಎಂದು ಹೇಳಿದರೂ ಕೇಳಲಿಲ್ಲ. ಪೊಲೀಸರ ಈ ಕ್ರಮದಿಂದ ನಾಗರಿಕ ಹಕ್ಕು ಉಲ್ಲಂಘನೆಯಾಗಿದೆ ಎಂದು ರಾಜೇಶ್​ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಾಧೀಶ ನವೀನ್​ ಚಾವ್ಲಾ, ದೆಹಲಿ ಸರ್ಕಾರ, ಪೊಲೀಸ್​ ಇಲಾಖೆ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ. ಮಾರ್ಚ್​ 3ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 11 =
Remember me
