ಮುಂಬೈ:ಕರೊನಾ, ಲಾಕ್​ಡೌನ್​ ಎಲ್ಲವೂ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಭಾರಿ ಹೊಡೆತವನ್ನೇ ಕೊಟ್ಟಿದೆ. ಲಾಕ್​ಡೌನ್​ ಸಮಯದಲ್ಲಿ ಅನೇಕ ಮಂದಿ ಮನೆಯೊಳಕ್ಕೆ ಏನು ಮಾಡಬೇಕು ಎಂದು ತಿಳಿಯದೇ ಖಿನ್ನತೆಗೆ ಜಾರಿದ್ದರೆ ಇನ್ನು ಕೆಲವರು ಸಿಕ್ಕ ಸಮಯವನ್ನೇ ಸದುಪಯೋಗಪಡಿಸಿಕೊಂಡು ತಮ್ಮ ಬಹುವರ್ಷಗಳ ಕನಸುಗಳನ್ನು ಈಡೇರಿಸಿಕೊಂಡಿದ್ದಾರೆ.
ಇರುವ ಪರಿಸ್ಥಿತಿಯನ್ನೇ ಉಪಯೋಗಿಸಿಕೊಳ್ಳುವುದರಲ್ಲಿಯೇ ಇರುವುದು ಟ್ಯಾಲೆಂಟ್​. ಅಂಥದ್ದೇ ಒಂದು ಸಕತ್​ ಒಳ್ಳೆಯ ತಲೆ ಓಡಿಸಿದೆ ಕಾರುಗಳ ವಿನ್ಯಾಸವನ್ನು ತ್ವರಿತವಾಗಿ ಬದಲಿಸುವುದರಲ್ಲಿ ಪ್ರಖ್ಯಾತಿ ಪಡೆದಿರುವ ಡಿಸಿ2 ಡಿಸೈನ್‌ ಕಂಪನಿ, ಅಂಬಾಸಿಡರ್‌ ಕಾರನ್ನು ವಿದ್ಯುತ್‌ ಚಾಲಿತ ಮಾಡುವ ಮೂಲಕ ಹೊಸದೊಂದು ಟ್ರೆಂಡ್​ ಸೃಷ್ಟಿಸಿದ್ದು ಇದೇ ಕಂಪನಿ. ಇದೀಗ ಹೊಸತೊಂದು ಆವಿಷ್ಕಾರ ಮಾಡಿದೆ. ಅದೇ ಕರೊನಾ ಕಾರ್​!
ಇದನ್ನೂ ಓದಿ:ಅಮೆರಿಕದಲ್ಲಿ ಶೇ.47ರಷ್ಟು ಉದ್ಯೋಗಿಗಳು ಪ್ಯಾಂಟೇ ಹಾಕಲ್ವಂತೆ, ಉಳಿದವರು ಇನ್ನೇನು ಮಾಡ್ತಾರೆ ನೋಡಿ…
ಹೌದು. ಈ ಕರೊನಾ ಯುಗದಲ್ಲಿ ಏನಿದ್ದರೂ ಸಾಮಾಜಿಕ ಅಂತರ, ಸ್ಯಾನಿಟೈಸರ್​ ಇದರದ್ದೇ ಮಾತು. ಇದನ್ನೇ ಬಳಸಿಕೊಂಡು ಹೊಸತೇನಾದರೂ ಪ್ರಯೋಗ ಮಾಡಬಹುದಾ ಎಂಬ ಯೋಚನೆ ಬಂದದ್ದೇ ತಡ, ಕಾರಿನ ಒಳಾಂಗಣದಲ್ಲಿ ಕೆಲವೊಂದು ಕರೊನಾ ತಡೆ ಸುರಕ್ಷತೆಯನ್ನು ಒದಗಿಸಲು ಮುಂದಾಗಿದೆ.
ಹಾಗಿದ್ದರೆ ಈ ಕರೊನಾ ಕಾರ್​ ವಿಶೇಷತೆ ಏನಪ್ಪಾ ಎಂದರೆ, ಇದರೊಳಗೆ ಸೋಷಿಯಲ್​ ಡಿಸ್​ಟೆನ್ಸ್​ ರೂಪಿಸಲಾಗುವುದು. ಅಂದರೆ ವಾಹನ ಚಾಲಕ ಹಾಗೂ ಪ್ರಯಾಣಿಕರ ನಡುವೆ ಕನಿಷ್ಠ 6.2 ಅಡಿ ಅಂತರವಿರುವಂತೆ ಸೀಟನ್ನು ಅಡ್ಜ್​ಸ್ಟ್​ ಮಾಡಲಾಗುವುದು. ಅಷ್ಟೇ ಅಲ್ಲ, ಚಾಲಕ ಮತ್ತು ಪ್ರಯಾಣಿಕರ ನಡುವೆ ಅಂತರ ಕಾಯ್ದುಕೊಳ್ಳಲು ಚರ್ಮ ಮತ್ತು ಗಾಜಿನ ಪರದೆಯನ್ನೂ ಅಳವಡಿಸಲಾಗುವುದು.
ಇದನ್ನೂ ಓದಿ:ದಾವಣಗೆರೆಯಲ್ಲಿ ಕರೊನಾಗೆ 4ನೇ ಬಲಿ- ನಿಮ್ಮ ಜಿಲ್ಲೆಯಲ್ಲಿ ಹೇಗಿದೆ ಸ್ಥಿತಿ?
ಸ್ಯಾನಿಟೈಜರ್​ ಕೂಡ ಇದರಲ್ಲಿ ಇರಲಿದ್ದು, ಅಗತ್ಯ ಇದ್ದಾಗ ಸ್ಯಾನಿಟೈಸರ್​ ಸಿಂಪಡನೆ ಮಾಡುತ್ತದೆ. ಕಾರಿನ ಎರಡೂ ಬದಿಗಳಲ್ಲಿ, ಹಾಗೆಯೇ ಮೇಲ್ಭಾಗದಲ್ಲಿ ಯಾಂತ್ರೀಕೃತ ಕ್ರಿಮಿನಾಶಕ ವ್ಯವಸ್ಥೆಯಿದೆ. ಪ್ರತೀ 20 ನಿಮಿಷಕ್ಕೊಮ್ಮೆ ಅದು ಸಿಂಪಡಣೆಯಾಗುತ್ತಲೇ ಇರುತ್ತದೆ. ಕಾರಿನ ಒಳಗೆ ಶುಚಿ ಇಲ್ಲವೇನೋ ಎಂಬ ಸಂದೇಹವೇ ಬೇಡ ಎಂದಿರುವ ಕಂಪನಿ, ಸ್ವಚ್ಛತೆಗೋಸ್ಕರ ಹೀಗೆ ಮಾಡಲಾಗಿದೆ ಎಂದಿದೆ.
ಈ ನೂತನ ವಿನ್ಯಾಸವನ್ನು ಈಗಾಗಲೇ ಎಸ್‌ಯುವಿ ಮತ್ತು ಎಂಪಿವಿಗಳಾದ ಟೊಯೋಟಾ ಇನ್ನೋವಾ ಕ್ರಿಸ್ಟಾ, ಟೊಯೋಟಾ ಫಾರ್ಚೂನರ್, ಮರ್ಸಿಡಿಸ್ ವಿ ಕ್ಲಾಸ್, ಕಿಯಾ ಕಾರ್ನಿವಲ್, ಮಹೀಂದ್ರಾ ಕಾರುಗಳಲ್ಲಿ ಪ್ರಯತ್ನಿಸಲಾಗಿದೆ. ಐಷಾರಾಮಿ ಕಾರುಗಳಾದ ಆಡಿ ಎ 8 ಮತ್ತು ಕ್ಯೂ 7, ಮರ್ಸಿಡಿಸ್ ಜಿಎಲ್ಎಸ್, ಮೇಬ್ಯಾಕ್, ಬಿಎಂಡಬ್ಲ್ಯು ಎಕ್ಸ್ 7 ಮತ್ತು 7 ಸೆರೀಸ್ ಇಡಬ್ಲ್ಯೂಬಿ, ವೋಲ್ವೋ ಎಕ್ಸ್‌ಸಿ 90, ಜಾಗ್ವಾರ್ ಎಕ್ಸ್‌ಜೆಎಲ್, ರೇಂಜ್ ರೋವರ್ ವೋಗ್ ಮತ್ತು ಸ್ಪೋರ್ಟ್, ರೋಲ್ಸ್ ರಾಯ್ಸ್ ಇಡಬ್ಲ್ಯೂಬಿಗಳಲ್ಲೂ ಅಳವಡಿಸಿಕೊಳ್ಳಲು ಅವಕಾಶವಿದೆ ಎಂದು ಅದು ತಿಳಿಸಿದೆ.
ಇದನ್ನೂ ಓದಿ:ಅರೆ ಇದೇನಿದು ಎಡವಟ್ಟು: ಸೋಂಕಿತೆಯಲ್ಲದಿದ್ರೂ ತುಂಬು ಗರ್ಭಿಣಿಯನ್ನು ಕರೊನಾ ವಾರ್ಡ್​ಗೆ ಹಾಕಿಬಿಟ್ರಲ್ಲಾ!
ಬಾಲಿವುಡ್‌ನ ಸೆಲೆಬ್ರಿಟಿಗಳ ಒಡೆತನದ ಕಾರುಗಳಿಗೆ ಮೇಕ್ ಓವರ್ ನೀಡಲು ಡಿಸಿ 2 ಡಿಸೈನ್ ಸಿದ್ಧತೆ ನಡೆಸಿದೆ. ಈಗಾಗಲೇ ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್, ಹೃತಿಕ್​ ರೋಷನ್​ ಸೇರಿದಂತೆ ಅನೇಕ ಮಂದಿ ತಮ್ಮ ಕಾರುಗಳಿಗೆ ಈ ಸೌಲಭ್ಯ ಪಡೆಯಲು ಮುಂದೆ ಬಂದಿದ್ದು, ಅವರ ಕಾರುಗಳ ಬದಲಾವಣೆಗೆ ಸಿದ್ಧತೆ ನಡೆದಿದೆ. ಜನರು ಕೂಡ ತಮ್ಮ ಕಾರುಗಳಲ್ಲಿ ಮಾರ್ಪಾಟು ಮಾಡಿಕೊಳ್ಳಬಹುದಾಗಿದೆ. (ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − 6 =
Remember me
