ಭೋಪಾಲ್:ಸೋಂಕು ಹರಡುವಿಕೆ ಭೀತಿಯಿಂದಾಗಿ ಭಕ್ತರು ದೇವಾಲಯದಲ್ಲಿ ಗಂಟೆ ಬಾರಿಸಲೂ ಭಯ ಪಡುತ್ತಿದ್ದರು. ಈಗ ಆ ಭೀತಿ ತಪ್ಪಿಸಲು ಗಂಟೆಗೆ ಸ್ವಯಂಚಾಲಿತ ಸಂವೇದಕ ಬಂದಿದೆ.
ಕರೊನಾವೈರಸ್ ಹರಡುವಿಕೆ ವಿರುದ್ಧ ಎಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೂ ಕಡಿಮೆಯೇ. ಸ್ಪರ್ಶ ಸಂಪರ್ಕವಿಲ್ಲದೆ ಲಿಫ್ಟ್ ಬಳಕೆ, ಸ್ಯಾನಿಟೈಸರ್ ಸಿಂಪಡಿಸುವಿಕೆ ಎಲ್ಲವೂ ಬಂದದ್ದಾಯಿತು. ಇದೀಗ ದೇಗುಲಗಳಲ್ಲಿ ಗಂಟೆಯ ಸರದಿ.ಮಧ್ಯಪ್ರದೇಶದಲ್ಲಿರುವ ಮಾಂಡ್​​ಸೌರ್ ಪಶುಪತಿನಾಥ ದೇವಾಲಯದಲ್ಲಿ ಸ್ಪರ್ಶ ಸಂಪರ್ಕವನ್ನು ತಪ್ಪಿಸುವ ಸಲುವಾಗಿ ಗಂಟೆಯನ್ನು ಮುಟ್ಟದೆ ಬಾರಿಸಲು ಸಾಧ್ಯವಾಗುವಂತೆ ದೇವಾಲಯದ ಘಂಟೆಯೊಂದಿಗೆ ಸ್ವಯಂಚಾಲಿತ ಸಂವೇದಕವನ್ನು ಅಳವಡಿಸಲಾಗಿದೆ.
ಇದನ್ನೂ ಓದಿ:ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕರ್ನಾಟಕ ಸಿದ್ಧಪಡಿಸಿದ ಬಲಶಾಲಿ ಅಸ್ತ್ರಗಳಿವು
“ಸಾಂಕ್ರಾಮಿಕ ರೋಗದ ಭೀತಿಯಿರುವ ಈ ದಿನಗಳಲ್ಲಿ ಭಕ್ತರು ಗಂಟೆಯನ್ನು ಮುಟ್ಟದೆ ಅದನ್ನು ಬಾರಿಸಲು ಒಂದು ಮಾರ್ಗ ಇರಬೇಕು ಎಂದು ನಾನು ಭಾವಿಸಿದ್ದೆ, ಆದ್ದರಿಂದ ನಾನು ಈ ಸಂವೇದಕವನ್ನು ಸ್ಥಾಪಿಸಿದೆ” ಎಂದು ಸಂವೇದಕವನ್ನು ಅಳವಡಿಸಿದ ನೆಹರು ಖಾನ್ ಹೇಳಿದ್ದಾರೆ.“ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವ ಈ ಸಮಯದಲ್ಲಿ ಇದು ತುಂಬಾ ಸಹಾಯಕವಾಗಿದೆ. ನಾವು ದೇವರನ್ನು ಪ್ರಾರ್ಥಿಸುವಾಗ ಗಂಟೆ ಬಾರಿಸಿದರೆ ಮಾತ್ರ ನಮ್ಮ ಪ್ರಾರ್ಥನೆ ದೇವರಿಗೆ ಮುಟ್ಟುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ರೀತಿಯ ಸಂವೇದಕವು ಗಂಟೆಯನ್ನು ಮುಟ್ಟದೆ ಬಾರಿಸಲು ನಮಗೆ ಸುಲಭಗೊಳಿಸಿದೆ. ರೋಗ ಹರಡುವಿಕೆ ವಿರುದ್ಧ ಜಾಗರೂಕರಾಗಿ ಇರಲೂ ಇದು ತುಂಬಾ ಉಪಯುಕ್ತವಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಮಾರ್ಗೋಪಾಯಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿದೆ.
ಕ್ರಿಕೆಟ್ ದಿಗ್ಗಜರನ್ನೂ ಕಾಡುತ್ತಿರುವ ಕರೊನಾ; ಈಗ ಶಾಹಿದ್ ಅಫ್ರಿದಿ ಸರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 16 =
Remember me
