ನವದೆಹಲಿ:ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್​ಒ) ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗಾಗಿ ಸದಸ್ಯರು ತಮ್ಮ ಖಾತೆಯಿಂದ ಹಣ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸ್ವಯಂ ಕ್ಲೈಮ್‌ ಇತ್ಯರ್ಥ (ಅಟೋ ಕ್ಲೈಮ್​ ಸೆಟಲ್​ಮೆಂಟ್​) ವ್ಯವಸ್ಥೆಯನ್ನು ಘೋಷಿಸಿದೆ. ಹಣ ವಾಪಸಾತಿ ಕ್ಲೈಮ್​ಗಳ ಪ್ರಕ್ರಿಯೆಯನ್ನು ಐಟಿ ವ್ಯವಸ್ಥೆ ಮೂಲಕ ಸ್ವಯಂಚಾಲಿತವಾಗಿ ಮಾಡುವ ವ್ಯವಸ್ಥೆ ಇದಾಗಿದ್ದು, ಇದರಿಂದ 6 ಕೋಟಿ ಚಂದಾದಾರರಿಗೆ ಪ್ರಯೋಜನವಾಗಲಿದೆ.
ಅನಾರೋಗ್ಯ-ಸಂಬಂಧಿತ ಮುಂಗಡಗಳಿಗಾಗಿ ಏಪ್ರಿಲ್ 2020 ರಲ್ಲಿ ಈ ಸ್ವಯಂಚಾಲಿತ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಈಗ ಎಲ್ಲ ರೀತಿಯ ಕ್ಲೈಮ್‌ಗಳನ್ನು ನಿಭಾಯಿಸಲು ಈ ಸ್ವಯಂಚಾಲಿತ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ ಎಂದು ಇಪಿಎಫ್​ಒ ಹೇಳಿದೆ.
ಇದಲ್ಲದೆ, ಅನಾರೋಗ್ಯಕ್ಕೆ ಸಂಬಂಧಿಸಿದ ಕ್ಲೈಮ್‌ಗಳ ಮಿತಿಯನ್ನು 50,000 ರೂಪಾಯಿಯಿಂದ 1,00,000 ರೂಪಾಯಿಯವರೆಗೆ ಈಗ ಹೆಚ್ಚಿಸಲಾಗಿದೆ ಎಂದು ಇಪಿಎಫ್​ಒ ತಿಳಿಸಿದೆ.
ವಸತಿ, ಮದುವೆ ಮತ್ತು ಶಿಕ್ಷಣದ ಉದ್ದೇಶಗಳಿಗೆ ತಮ್ಮ ಖಾತೆಯಿಂದ ಹಣವನ್ನು ಕಡಿಮೆ ಸಮಯದಲ್ಲಿ ಪಡೆದುಕೊಳ್ಳಲು ಈ ಸ್ವಯಂಚಾಲಿತ ವ್ಯವಸ್ಥೆಯು ಸದಸ್ಯರಿಗೆ ನೆರವಾಗಲಿದೆ. ಶಿಕ್ಷಣ, ಮದುವೆ ಅಥವಾ ವಸತಿ ಸಂಬಂಧಿತ ಅವಶ್ಯಕತೆಗಳನ್ನು ತ್ವರಿತವಾಗಿ ಪೂರೈಸಲು ಈ ವ್ಯವಸ್ಥೆ ಗಣನೀಯವಾಗಿ ಸಹಾಯ ಮಾಡುತ್ತದೆ ಎಂದು ಇಪಿಎಫ್‌ಒ ಪ್ರಕಟಣೆಯಲ್ಲಿ ತಿಳಿಸಿದೆ.

ರಜನೀಕಾಂತ್ ಮಗಳು- ಅಳಿಯ ಇಬ್ಬರೂ ಬೇರೆಯವರ ಜತೆ ಡೇಟಿಂಗ್​ ಮಾಡಿ ಪರಸ್ಪರರಿಗೆ ಮೋಸ ಮಾಡಿದ್ದಾರೆ: ಗಾಯಕಿಯ ಆಘಾತಕಾರಿ ಹೇಳಿಕೆ

ಪ್ರೀತಿ ಜಿಂಟಾ ಹಾಗೂ ನನ್ನ ಗಂಡ ಡೇಟಿಂಗ್​ ನಡೆಸಿದ್ದರು… ನಾನು ಬಾಯ್​ಫ್ರೆಂಡ್​ ಸ್ನ್ಯಾಚರ್​ ಅಲ್ಲ.. ಹೀಗಿದೆ ನಟಿಯ ಸ್ಪಷ್ಟನೆ

ರಣಬೀರ್ ಕಪೂರ್ ಅವರ ರಾಮಾಯಣ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರ: ಇದರ ಬಜೆಟ್​ ಎಷ್ಟು ಗೊತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 19 =
Remember me
