ತಿರುವನಂತಪುರ:ಲೇಡಿಸ್​ ಹಾಸ್ಟೆಲ್​ ಮುಂದೆ ಆಟೋ ನಿಲ್ಲಿಸಿ ಅಶ್ಲೀಲವಾಗಿ ವರ್ತಿಸಿದ ಚಾಲಕನನ್ನು ತಿರುವನಂತಪುರದ ಮ್ಯೂಸಿಯಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮುತ್ತುರಾಜ್​ (47) ಎಂದು ಗುರುತಿಸಲಾಗಿದೆ. ಈತ ಮೂನ್ನಮೂಡು ವಟಿಯೂರ್ಕಾವಿನ ವಯಲಿಕಾಡದ ಚಂದ್ರಿಕಾ ಭವನದ ನಿವಾಸಿ. ಭಾನುವಾರ ರಾತ್ರಿ 10.30ರ ಸುಮಾರಿಗೆ ಕಾಟನ್​ ಹಿಲ್​ ಸ್ಕೂಲ್​ ಬಳಿಯಿರುವ ಲೇಡಿಸ್​ ಹಾಸ್ಟೆಲ್​ ಮುಂದೆ ನಿಂತು ತನ್ನ ಖಾಸಗಿ ಅಂಗ ಪ್ರದರ್ಶಿಸಿ ಅಶ್ಲೀಲವಾಗಿ ವರ್ತಿಸಿದ ಆರೋಪ ಮುತ್ತುರಾಜ್​ ವಿರುದ್ಧ ಕೇಳಿಬಂದಿದೆ.
ಇದನ್ನೂ ಓದಿ:ಪೊಲೀಸರಿಂದಲೇ ಅಪಹರಣ, ಹಣಕ್ಕೆ ಬೇಡಿಕೆ?; ತಲೆಮರೆಸಿಕೊಂಡಿರುವ ಸಬ್​ ಇನ್​ಸ್ಪೆಕ್ಟರ್!
ಪೊಲೀಸರ ಪ್ರಕಾರ ಆರೋಪಿ ಮುತ್ತುರಾಜ್ ತನ್ನ ಆಟೋರಿಕ್ಷಾದಲ್ಲಿ ಹಾಸ್ಟೆಲ್​ಗೆ ತಲುಪಿದ್ದಾನೆ. ಬಳಿಕ ಮಹಡಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರಿಗೆ ತನ್ನ ಖಾಸಗಿ ಅಂಗ ಪ್ರದರ್ಶನ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಕೂಡಲೇ ವಿದ್ಯಾರ್ಥಿಗಳು ಮುತ್ತುರಾಜ್ ಅವರ ಆಟೋರಿಕ್ಷಾ ನಂಬರ್ ಅನ್ನು ಬರೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ವಿದ್ಯಾರ್ಥಿಗಳು ಹಂಚಿಕೊಂಡ ಮಾಹಿತಿ ಆಧರಿಸಿ, ತನಿಖೆ ನಡೆಸಿ ಮುತ್ತುರಾಜ್​​ನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಬೇರೆ ಯಾವುದೇ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಮ್ಯೂಸಿಯಂ ಪೊಲೀಸ್​ ಇನ್ಸ್​ಪೆಕ್ಟರ್​ ತಿಳಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.(ಏಜೆನ್ಸೀಸ್​)
ಶಿವಸೇನೆ ನಾಯಕಿಯಿಂದ ಸಿಎಂ ಬಸವರಾಜ ಬೊಮ್ಮಾಯಿಗೆ ಅಪಮಾನ

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ

ಜೋಗಪ್ಪನನ್ನು ಹುಡುಕಿ ಹೊರಟ ಸಂಜನಾ ದಾಸ್​ …

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 16 =
Remember me
