ಮುಂಬೈ:ಮಕ್ಕಳ ಕನಸಿಗಾಗಿ ಅಪ್ಪ ಮನೆ, ಹೊಲವನ್ನೆಲ್ಲ ಮಾರಾಟ ಮಾಡಿ ಹಣ ಒದಗಿಸುವ ಕಥೆ ಕೇಳಿರುತ್ತೀರಿ. ಆದರೆ ಇಲ್ಲೊಂದು ಕುಟುಂಬದಲ್ಲಿ ಅಜ್ಜನೇ ಮೊಮ್ಮಗಳ ಆಸೆಗಾಗಿ ಮನೆ ಮಾರಾಟ ಮಾಡಿ, ಹಣ ಒದಗಿಸಿ, ಒಂದು ವರ್ಷದಿಂದ ಆಟೋದಲ್ಲೇ ತನ್ನ ಜೀವನ ಕಳೆಯುತ್ತಿದ್ದಾನೆ.
ಮಹಾರಾಷ್ಟ್ರದ ದೇಸರಾಜ್ ವಯಸ್ಸು ಸುಮಾರು 70ರ ಆಸುಪಾಸಿನಲ್ಲಿರಬಹುದು. ನೋಡೋದಕ್ಕೆ ಹಣ್ಣು ಹಣ್ಣು ಮುದುಕನಂತಾಗಿರುವ ದೇಸರಾಜ್​ ಪ್ರತಿದಿನ ಕಷ್ಟಪಟ್ಟು ಆಟೋ ರಿಕ್ಷಾ ಓಡಿಸುತ್ತಾರೆ. ಅದರಿಂದ ಬರುವ ಹಣದಲ್ಲಿ ಇಬ್ಬರು ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಅವರ ನೋವಿನ ಕಥೆಯನ್ನು ಕೇಳಿದರೆ ನಿಮ್ಮ ಕಣ್ಣಾಲಿ ಒದ್ದೆಯಾಗದೆ ಇರದು.
ದೇಸರಾಜ್​ಗೆ ಇಬ್ಬರು ಗಂಡು ಮಕ್ಕಳಿದ್ದು, ಅವರಿಬ್ಬರು ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಅದಾದ ನಂತರ ಪೂರ್ತಿ ಕುಟುಂಬದ ಜವಾಬ್ದಾರಿ ದೇಸರಾಜ್​ ಹೆಗಲಿಗೆ ಬಿದ್ದಿದೆ. ಆದರೆ ಎದೆಗುಂದದ ಆತ ಆಟೋರಿಕ್ಷಾ ಇಟ್ಟುಕೊಂಡೇ ಜೀವನವನ್ನು ನಡೆಸಿದ್ದಾರೆ. “ನನ್ನ ಮೊಮ್ಮಗಳು 9ನೇ ಕ್ಲಾಸಲ್ಲಿದ್ದಾಗ ಅವರ ಅಪ್ಪ ತೀರಿಕೊಂಡ. ಅಂತ್ಯಕ್ರಿಯೆ ಮುಗಿಸಿ ಬಂದಾಕ್ಷಣ ಮೊಮ್ಮಗಳು ಓಡಿ ಬಂದು, ಅಜ್ಜಾ ನಾನು ನನ್ನ ಶಾಲೆಯನ್ನು ಬಿಡಬೇಕಾ ಎಂದು ಕೇಳಿದಳು. ಆಗ ನನಗೆ ದುಃಖ ಒತ್ತರಿಸಿಬಂತು. ಇಲ್ಲ ಮಗು ನಿನಗೆ ಇಷ್ಟಬಂದಷ್ಟು ಓದು ಎಂದೆ” ಎನ್ನುತ್ತಾರೆ ದೇಸರಾಜ್​. ಅದರಂತೆ ಮೊಮ್ಮಗಳನ್ನು ಅವಳಿಷ್ಟದಂತೆ ಓದಿಸುತ್ತಲೇ ಬಂದಿದ್ದಾರೆ.
ಕೆಲ ವರ್ಷಗಳ ಹಿಂದೆ ಹೆಂಡತಿಯ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದ್ದು, ಔಷಧ ತಂದುಕೊಡಲೂ ಹಣವಿಲ್ಲದೆ ಒದ್ದಾಡುವ ಪರಿಸ್ಥಿತಿ ಬಂದೊದಗಿತ್ತಂತೆ. ಈ ಮಧ್ಯೆ 2019ರಲ್ಲಿ ಅವರ ಮೊಮ್ಮಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 80 ಅಂಕ ಗಳಿಸಿ ಬಂದು ಸಂತೋಷದಿಂದ ವಿಷಯ ಹಂಚಿಕೊಂಡಳಂತೆ. ಅದನ್ನು ಕೇಳಿದ ದೇಸರಾಜ್​ ಆ ಕ್ಷಣಕ್ಕೆ ನನ್ನೆಲ್ಲ ದುಃಖ ಮರೆಯಾಗಿ ಆಗಸದಲ್ಲೇ ತೇಲುತ್ತಿದ್ದೆ ಎನ್ನುತ್ತಾರೆ.
ಪಿಯು ಪಾಸ್​ ಆದ ಮೊಮ್ಮಗಳು ಬಿಎಡ್​ ಮಾಡಬೇಕೆಂದು ಆಸೆ ಹೇಳಿಕೊಂಡಿದ್ದಾಳೆ. ಮಹಾರಾಷ್ಟ್ರದಿಂದ ದೆಹಲಿಗೆ ತೆರಳಿ ಅಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸುವುದಾಗಿ ಹೇಳಿದ್ದಾಳೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ದೇಸರಾಜ್​ಗೆ ಮೊಮ್ಮಗಳ ಆಸೆ ಕೇಳಿ ಏನು ಮಾಡಬೇಕೆಂದು ತಿಳಿಯಲಿಲ್ಲವಂತೆ. ಹೆಂಡತಿ ಮತ್ತು ಸೊಸೆಯನ್ನು ಊರಿನ ಮನೆಗೆ ಕಳುಹಿಸಿಕೊಟ್ಟು, ನಗರದಲ್ಲಿ ವಾಸವಿದ್ದ ಮನೆಯನ್ನು ಮಾರಾಟ ಮಾಡಿ ವಿದ್ಯಾಭ್ಯಾಸಕ್ಕೆ ಹಣ ಒದಗಿಸಿದರಂತೆ. ಅದಾದ ಮೇಲೆ ತಮಗೆ ಇರಲು ಸೂರಿರದ ಹಿನ್ನೆಲೆಯಲ್ಲಿ ಆಟೋವನ್ನೇ ತನ್ನ ಮನೆಯಾಗಿ ಮಾಡಿಕೊಂಡಿದ್ದಾರೆ. ಹಗಲು ಹೊತ್ತಿನಲ್ಲಿ ಆಟೋ ಬಾಡಿಗೆ ಮಾಡಿ ರಾತ್ರಿ ಹೊತ್ತಲ್ಲಿ ಅದರಲ್ಲೇ ಮಲಗಿ ಜೀವನ ಕಳೆಯುತ್ತಿದ್ದಾರೆ.
ವೃದ್ಧನ ನೋವಿನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅವರ ನೋವಿಗೆ ಸ್ಪಂದಿಸಿ ಹಲವರು ಸಹಾಯಕ್ಕೆ ಮುಂದೆ ಬಂದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)
ಪ್ರೇಮಿಗಳ ದಿನಕ್ಕೆ ಹೆಂಡತಿಗೆ ಕಿಡ್ನಿಯನ್ನೇ ಗಿಫ್ಟ್​ ನೀಡಿದ ಗಂಡ! ಪ್ರೀತಿ ಎಂದರೆ ಇದೇ ಅಲ್ಲವೇ?

ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + fourteen =
Remember me
