ನವದೆಹಲಿ:ಕಳೆದ ಒಂದು ವಾರದಲ್ಲಿ ಮುಂಬೈ ಪೊಲೀಸರಿಗೆ ಮೇಲಿಂದ ಮೇಲೆ ಬೆದರಿಕೆ ಕರೆ ಬರುತ್ತಿದ್ದು, ಇದೀಗ ಭಾರತದಲ್ಲೂ ಸೊಮಾಲಿಯಾ ಮಾದರಿಯ ದಾಳಿ ನಡೆಸುವುದಾಗಿ ಅನಾಮಿಕ ಕರೆಯ ಮೂಲಕ ಸವಾಲೊಡ್ಡಿದ್ದಾರೆ.
ವಾರದಲ್ಲಿ ನಾಲ್ಕು ಸಲ ಈ ಥರದ ಕರೆ ಬಂದಿದ್ದು, ಇಂದು ಬಂದಿರುವ ಕರೆಯಲ್ಲಿ ಸೊಮಾಲಿಯಾ ಮಾದರಿಯ ದಾಳಿ ನಡೆಸುವುದಾಗಿ ಯಾರೋ ಸವಾಲೆಸೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಇನ್ನಷ್ಟು ಎಚ್ಚರಿಕೆ ವಹಿಸಿ, ನಿಗಾ ಇರಿಸುವಂತಾಗಿದೆ.
ದಕ್ಷಿಣ ಆಫ್ರಿಕದ ಸೊಮಾಲಿಯಾದ ರಾಜಧಾನಿ ಮೊಗಡಿಶುವಲ್ಲಿನ ಹಯಾತ್ ಹೋಟೆಲ್​ನಲ್ಲಿ ಆ. 19ರ ರಾತ್ರಿ ಗುಂಡಿನ ದಾಳಿ ನಡೆದಿದ್ದು, 20 ಮಂದಿ ಸಾವಿಗೀಡಾಗಿ ಸುಮಾರು 40 ಮಂದಿ ಗಾಯಗೊಂಡಿದ್ದರು. ಶಸ್ತ್ರಧಾರಿಗಳು ಹೋಟೆಲ್​ಗೆ ಪ್ರವೇಶಿಸುವ ಮೊದಲು ಹೋಟೆಲ್​ ಮುಂಭಾಗದಲ್ಲಿ ಸ್ಫೋಟ ಕೂಡ ನಡೆಸಿದ್ದರು. ತೀವ್ರಗಾಮಿ ಸಂಘಟನೆ ಅಲ್​-ಶಬಾಬ್​ ಈ ದಾಳಿಗೆ ಕಾರಣವೆಂದು ಘೋಷಿಸಿಕೊಂಡಿತ್ತು. ಈ ಸಂಘಟನೆ ಅಲ್​-ಖೈದ ಜತೆ ಸಂಪರ್ಕವನ್ನು ಹೊಂದಿದೆ. ಮುಂಬೈ ಪೊಲೀಸರಿಗೆ ಕರೆ ಮಾಡಿದವರು ಕೂಡ ಇದೇ ಮಾದರಿ ದಾಳಿ ಭಾರತದಲ್ಲಿ ನಡೆಸಲಿರುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. –ಏಜೆನ್ಸೀಸ್
ಹೋಟೆಲ್​​ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿ: ಕನಿಷ್ಠ 20 ಮಂದಿ ಸಾವು, ಸುಮಾರು 40 ಜನರಿಗೆ ಗಾಯ..

ಆಪರೇಷನ್​ ವೇಳೆ ಸಾವಿಗೀಡಾದ ಬಾಲಕಿ; ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಕುಟುಂಬಸ್ಥರ ಆಕ್ರೋಶ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
