ಅಹಮದಾಬಾದ್​:ನ್ಯಾಯ ಕೇಳಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಮಹಿಳೆ ನ್ಯಾಯಾಲಯಕ್ಕೆ ಕಾಂಡೋಮ್​ ಪಾರ್ಸೆಲ್​ ಕಳುಹಿಸಿಕೊಟ್ಟಿದ್ದಾಳೆ. ನ್ಯಾಯಾಲಯ ಕೊಟ್ಟ ತೀರ್ಪಿಗೆ ಇದು ನನ್ನ ಉತ್ತರ ಎಂದು ಆಕೆ ಹೇಳಿಕೊಂಡಿದ್ದಾಳೆ.
ಅಹಮದಾಬಾದ್​ನ ದೇವಶ್ರೀ ತ್ರಿವೇದಿ ಸುಮಾರು 150 ಕಾಂಡೋಮ್​ಗಳನ್ನು ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ವಿವಾದಾತ್ಮಕ ತೀರ್ಪು ನೀಡಿರುವ ನ್ಯಾಯಮೂರ್ತಿ ಪುಷ್ಪಾ ವಿ ಗಣದೇವಾಲಾ ಅವರ ಕೊಠಡಿ ಸೇರಿ ಒಟ್ಟು 12 ವಿಳಾಸಕ್ಕೆ ಈ ಕಾಂಡೋಮ್​ಗಳನ್ನು ಕಳುಹಿಸಿಕೊಡಲಾಗಿದೆ. ಪುಷ್ಪಾ ಅವರು ನೀಡಿರುವ ತೀರ್ಪಿಗೆ ಈ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ. ಫೆಬ್ರವರಿ 9ರಂದು ಕಾಂಡೋಮ್​ ಪಾರ್ಸೆಲ್​ ಮಾಡಲಾಗಿದ್ದು, ಈಗಾಗಲೇ ಹಲವು ಕಡೆ ಅದು ರಿಸೀವ್​ ಆಗಿರುವುದಾಗಿ ಸಂದೇಶ ಬಂದಿರುವುದಾಗಿ ಆಕೆ ತಿಳಿಸಿದ್ದಾರೆ.
ಜನವರಿ 19ರಂದು ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ನ್ಯಾಯಮೂರ್ತಿ ಪುಷ್ಪಾ ವಿ ಗಣದೇವಾಲಾ ಅವರು ವಿವಾದಾತ್ಮಕ ತೀರ್ಪನ್ನು ನೀಡಿದ್ದರು. ಅಪ್ರಾಪ್ತರ ದೇಹವನ್ನು ಬಟ್ಟೆ ಇದ್ದಾಗ ಮುಟ್ಟುವುದು, ಅವರೆದುರಿಗೆ ಪ್ಯಾಂಟ್​ ಜಿಪ್​ ತೆಗೆಯುವುದು, ಅವರ ಕೈ ಹಿಡಿದುಕೊಳ್ಳುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ಅವರು ತೀರ್ಪು ನೀಡಿದ್ದರು.
ಈ ತೀರ್ಪಿನಿಂದಾಗಿ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ನಡೆದ ಲೈಂಗಿಕ ದೌರ್ಜನ್ಯ ಮುಚ್ಚಿ ಹೋಗುತ್ತದೆ. ಅಪರಾಧಿಗಳು ಮತ್ತಷ್ಟು ತಪ್ಪು ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ರೀತಿಯ ತೀರ್ಪು ನೀಡಿರುವ ನ್ಯಾಯಮೂರ್ತಿ ಅಮಾನತು ಆಗಬೇಕು ಎಂದು ಹೋರಾಟನಿರತ ದೇವಶ್ರೀ ತ್ರಿವೇದಿ ಹೇಳಿದ್ದಾರೆ. (ಏಜೆನ್ಸೀಸ್​)
ಸ್ಕ್ಯಾಮ್​ 1992 ಕುಟುಂಬದಲ್ಲಿ ಮದುವೆ ಸಂಭ್ರಮ! ದಂಪತಿಯಾದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟ-ನಟಿ

ಬೆಡ್​ ಮೇಲೆ ಮಲಗಿರುವುದು ಮನುಷ್ಯನೇ ಅಲ್ಲ! ಏನಂತ ಗೆಸ್​ ಮಾಡೋದಕ್ಕೂ ನಿಮ್ಮಿಂದ ಸಾಧ್ಯ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + twelve =
Remember me
