ದೇಶದಲ್ಲಿ ಕರೊನಾ ತೀವ್ರಗತಿಯಲ್ಲಿಹರಡುತ್ತಿರುವ ನಡುವೆಯೇ ಪ್ರಧಾನಿ ಮೋದಿ ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಸಿದ್ದಾರೆ. ಕರೊನಾ ಪೀಡಿತ ರಾಷ್ಟ್ರಗಳಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಗೃಹ ಸಚಿವ ಅಮಿತ್ ಷಾ ಕೂಡ ಕರೊನಾಗೆ ತುತ್ತಾಗಿದ್ದಾರೆ. ಭದ್ರತೆಗೆ ನಿಯೋಜಿಸಿದ್ದ ಹಲವು ಸಿಬ್ಬಂದಿಗೂ ಕರೊನಾ ಪಾಸಿಟಿವ್ ಬಂದಿದೆ ಎಂದು ಅಮೆರಿಕದ ಸಿಎನ್​ಎನ್ ವರದಿ ಮಾಡಿದೆ.
ಮೂರು ತಿಂಗಳು ಮೊದಲೇ ಅಯೋಧ್ಯೆಗೆ ದೀಪಾವಳಿ ಆಗಮಿಸಿದೆ. ರಾಮ ಮಂದಿರ ವಿಚಾರ ಭಾರತದ ಇತಿಹಾಸದಲ್ಲೇ ಅತ್ಯಂತ ಭಾವನಾತ್ಮಕ ಹಾಗೂ ವಿಭಜನಕಾರಿ ಸಂಗತಿಯಾಗಿದೆ. ಶ್ರೀರಾಮನಿಗೆ ಮಂದಿರ ನಿರ್ವಿುಸುವುದು ಹಿಂದುಗಳಿಗೆ ಹೆಮ್ಮೆಯ ಸಂಕೇತವಾಗಿದೆ ಎಂದು ಬ್ರಿಟನ್​ನ ಗಾರ್ಡಿಯನ್ ವರದಿ ಮಾಡಿದೆ ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಪ್ರಧಾನಿ ಮೋದಿ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಜಾತ್ಯತೀತ ರಾಷ್ಟ್ರವನ್ನು ಹಿಂದು ರಾಷ್ಟ್ರವಾಗಿಸುವ ಮತ್ತೊಂದು ಹೆಜ್ಜೆ ಇದು. ಇದು ಇನ್ನೊಂದು ರೀತಿಯ ಭಾರತದ ಸಂವಿಧಾನದ ಶಿಲಾನ್ಯಾಸವಾಗಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಕರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದೇ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಗಿದೆ. ಭಾರತದ ಹಿಂದುಗಳು ಸಂತಸ ಗೊಂಡಿದ್ದಾರೆ. ಇನ್ನು ಸುಮಾರು ಮೂರೂವರೆ ವರ್ಷದಲ್ಲಿ ಮಂದಿರ ನಿರ್ವಣಗೊಳ್ಳಲಿದೆ. ವಿಶ್ವದ ಭವ್ಯ ಮಂದಿರಗಳಲ್ಲಿ ಇದೂ ಒಂದಾಗಲಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಅಯೋಧ್ಯೆ ಹಬ್ಬದಲ್ಲಿ ಪ್ರಧಾನಿ ಸ್ವೀಕರಿಸಿದ ಕೋದಂಡರಾಮ ವಿಗ್ರಹ ಕರ್ನಾಟಕದಲ್ಲೇ ತಯಾರಾಗಿದ್ದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
