ಲಖನೌ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭರದಿಂದ ಸಾಗಿದೆ. ಅದೇ ರೀತಿ ಅಯೋಧ್ಯೆಯ ಮಸೀದಿ ನಿರ್ಮಾಣಕ್ಕೂ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಮಸೀದಿಯ ಬ್ಲೂ ಪ್ರಿಂಟ್​ನ್ನು ಮಸೀದಿಯ ಟ್ರಸ್ಟ್​ ಇಂದು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಎನ್​ಎಸ್​ಯುಐಗೆ ಗುಡ್​ ಬೈ ಹೇಳಿದ ರಾಹುಲ್​ ಗಾಂಧಿ ಆಪ್ತೆ! ಪಕ್ಷದಲ್ಲಿ ಬದಲಾವಣೆ ಅಗತ್ಯತೆಯಿದೆ ಎಂದ ನಾಯಕಿ
ಸುಂದರವಾದ ಉದ್ಯಾನವನ, ಗಾಡಿನ ಗುಮ್ಮಟ, ಅದರ ಹಿಂದೆಯೇ ಬೃಹದಾಕಾರದ ಆಸ್ಪತ್ರೆ ಸೇರಿ ಅನೇಕ ವಿಶೇಷತೆಗಳನ್ನು ಬ್ಲೂಪ್ರಿಂಟ್​ನಲ್ಲಿ ಪ್ರದರ್ಶಿಸಲಾಗಿದೆ. 2021ರ ಆರಂಭದಲ್ಲಿಯೇ ಮಸೀದಿ ಕಾಮಗಾರಿ ಆರಂಭ ಮಾಡುವ ಸಾಧ್ಯತೆ ಇದೆ. ಮಸೀದಿಗೆ ಇನ್ನೂ ಯಾವ ಹೆಸರನ್ನೂ ನಿರ್ಧರಿಸಿಲ್ಲ. ಆದರೆ ಯಾವುದೇ ಚಕ್ರವರ್ತಿ ಅಥವಾ ರಾಜನ ಹೆಸರನ್ನು ಇಡಲಾಗುವುದಿಲ್ಲ ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್ ತಿಳಿಸಿದೆ.

ಇದನ್ನೂ ಓದಿ:ಕೃಷಿ ಕಾಯ್ದೆ ವಿಚಾರದಲ್ಲಿ ಮುನಿಸಿಕೊಂಡು ರಾಜೀನಾಮೆ ನೀಡಿದ ಮೈತ್ರಿ ನಾಯಕ!
ಸದ್ಯಕ್ಕೆ ಮೊದಲನೇ ಹಂತದ ಕಾಮಗಾರಿ ಆರಂಭವಾಗಲಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ಆಸ್ಪತ್ರೆಯನ್ನು ವಿಸ್ತರಿಸಲಾಗುವುದು. ಪ್ರಪಂಚದಾದ್ಯಂತದ ಹಲವಾರು ಸಮಕಾಲೀನ ಮಸೀದಿಗಳ ವಿನ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಈ ಬ್ಲೂ ಪ್ರಿಂಟ್​ ತಯಾರಿಸಲಾಗಿದೆ. ಮುಂಬರುವ ದಿನಗಳಲ್ಲಿ ವಸ್ತು ಸಂಗ್ರಹಾಲಯ ಸೇರಿ ಕೆಲ ಸೇರ್ಪಡೆ ಮಾಡಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್​)

ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 5 =
Remember me
