ಲಖನೌ:ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣವಾಗುತ್ತಿರುವಂತೆಯೇ, ಧನ್ನಿಪುರ ಗ್ರಾಮದಲ್ಲಿ ಮಸೀದಿಯನ್ನು ನಿರ್ಮಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಿಂದೂ, ಮುಸ್ಲಿಂ ಪ್ರತಿಷ್ಠೆಯ ಭಾಗವಾಗಿ ಅಯೋಧ್ಯೆಯ ಮಸೀದಿ ಮತ್ತು ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಎರಡರಲ್ಲೂ ಸಾಕಷ್ಟು ವಿಶೇಷತೆಗಳು ನಿರ್ಮಾಣವಾಗಲಿವೆ. ಅಷ್ಟಕ್ಕೂ ಅಯೋಧ್ಯೆಯ ಮಸೀದಿಯಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ? ಯಾವ ರೀತಿಯ ಸೌಲಭ್ಯಗಳು ಅಲ್ಲಿರಲಿವೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಇದನ್ನೂ ಓದಿ:ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!
ಧನ್ನಿಪುರ ಗ್ರಾಮದಲ್ಲಿ ಆಯಾತಕಾರದ ವಿನ್ಯಾಸದಲ್ಲಿ ಮಸೀದಿ ನಿರ್ಮಾಣವಾಗಲಿದೆ. ಮಸೀದಿಯ ಜತೆ ವಿಶೇಷ ಆಸ್ಪತ್ರೆ, ಸಮುದಾಯ ಅಡುಗೆ ಮನೆ ಮತ್ತು ಬಹುಮಹಡಿಯ ವಸ್ತು ಸಂಗ್ರಹಾಲಯವೂ ಇರಲಿದೆ. ಇವೆಲ್ಲವೂ ಮಸೀದಿಯಿಂದ ಮೀಟರ್​ನಷ್ಟು ದೂರದಲ್ಲಿರಲಿದೆ. ಸುಮಾರು ಒಂದು ಶತಮಾನದಷ್ಟು ಹಳೆಯ ಸೂಫಿ ದೇಗುಲವೊಂದು ಸ್ಥಳದಲ್ಲಿರಲಿದೆ.
ಮಸೀದಿಯನ್ನು ಗೋಳಾಕಾರದಲ್ಲಿ ನಿರ್ಮಿಸಲಾಗುವುದು. ಸುಮಾರು 2000 ಜನರು ಒಂದೇ ಸಮಯದಲ್ಲಿ ನಮಾಜು ಮಾಡಲು ಅವಕಾಶವಿರಲಿದೆ. ಹಳೆಯ ಬಾಬ್ರಿ ಮಸೀದಿಗಿಂತ ನಾಲ್ಕು ಪಟ್ಟು ದೊಡ್ಡದಾಗಿ ಈ ಮಸೀದಿ ನಿರ್ಮಾಣವಾಗಲಿದೆ.
ಇದನ್ನೂ ಓದಿ:‘ಅಯ್ಯೋ ನಿಂಗೆ ಕ್ಯಾನ್ಸರ್​ ಇದೆ! ಟ್ರೀಟ್ಮೆಂಟ್​ ತಗೊಳ್ದಿದ್ರೆ ಸತ್ತೇ ಹೋಗ್ತೀಯ’ ಅಂತ ಹೇಳುತ್ತಲೇ 1.47 ಕೋಟಿ ರೂ. ವಂಚಿಸಿದ ವೈದ್ಯೆ!
ಮಸೀದಿಯ ಜತೆಯಲ್ಲಿ 300 ಹಾಸಿಗೆಗಳಿರುವ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಈ ಆಸ್ಪತ್ರೆ ಮಸೀದಿಗಿಂತ ಆರು ಪಟ್ಟು ದೊಡ್ಡದಿರಲಿದೆ. ಮಸೀದಿಗೆ ವಿದ್ಯುತ್​ ಸಂಪರ್ಕವಿರುವುದಿಲ್ಲ. ಬದಲಾಗಿ ಸಂಪೂರ್ಣ ಮಸೀದಿ ಮತ್ತು ಆಸ್ಪತ್ರೆಯನ್ನು ಸೋಲಾರ್​ ಶಕ್ತಿಯಿಂದಲೇ ನಡೆಸಲಾಗುವುದು. ಮಸೀದಿಯ ಸುತ್ತಮುತ್ತ ಹಸಿರು ಪ್ಯಾಚ್​ ಅಭಿವೃದ್ಧಿ ಪಡಿಸಲಾಗುವುದು. ಇದಕ್ಕೆಂದು ಅಮೇಜಾನ್​ ಕಾಡು, ಆಸ್ಟ್ರೇಲಿಯಾದ ಬುಷ್​ಫೈರ್​ ಸಸಿಗಳು ಭಾರತದ ಇತರ ಭೌಗೋಳಿಕ ಸ್ಥಳಗಳು ಸೇರಿದಂತೆ ಪ್ರಪಂಚದಾದ್ಯಂತ ಸಸಿಗಳನ್ನು ಸಂಗ್ರಹಿಸಲಾಗುವುದು.
ಇದನ್ನೂ ಓದಿ:ವಾಟ್ಸ್​ಆ್ಯಪ್​ ಮೆಸೇಜ್​ ಹಾಕಿ ಯುವತಿ ಸಾವು; ಸೀಮೆಎಣ್ಣೆ ಕ್ಯಾನ್​ ಕೊಟ್ಟ ಕೊಲೆಯ ಸುಳಿವು!
ಮಸೀದಿಯ ಕಾಮಗಾರಿಯನ್ನು ಜನವರಿ 26ರಿಂದ ಆರಂಭಿಸಲಾಗುವುದು. ಆದರೆ ಶಿಲಾನ್ಯಾಸ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡಲಾಗುವುದಿಲ್ಲ. ಮಸೀದಿಗೆ ಯಾವುದೇ ರಾಜ, ಬಾಬರ್​ ಅಥವಾ ಚಕ್ರವರ್ತಿಯ ಹೆಸರನ್ನು ಇಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ನಿರ್ಮಾಣಕ್ಕಾಗಿ ಹಣವನ್ನು ಸಂಗ್ರಹಿಸಲು ಎರಡು ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ರಚಿಸಲಾಗಿದೆ – ಮೊದಲನೆಯದು ಮಸೀದಿಗೆ ಮತ್ತು ಎರಡನೆಯದು ಇತರೆ ರಚನೆಗಳಿಗಾಗಿ. ಎರಡು ವರ್ಷಗಳಲ್ಲಿ ಮಸೀದಿ ಕಾಮಗಾರಿ ಮುಗಿಸುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)
ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
