ನವದೆಹಲಿ:ಶ್ರೀರಾಮಮಂದಿರ ಉದ್ಘಾಟನೆ ಸಮೀಪಿ ಸುತ್ತಿದ್ದಂತೆ ಅಯೋಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಯೋಧ್ಯೆಗೆ ಆಗಮಿಸಲಿದ್ದು, ರೋಡ್ ಶೋ ಮೂಲಕ ಸ್ಥಳೀಯರನ್ನು ಹುರಿದುಂಬಿಸುವ ಜತೆಗೆ ಬೃಹತ್ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿ, ಕೆಲವೊಂದಕ್ಕೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಅಯೋಧ್ಯೆಯಲ್ಲಿ ಶನಿವಾರ ದಿಂದಲೇ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ.
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ 15 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಿದ್ದು, ಅಯೋಧ್ಯೆಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಎನ್​ಡಿಎ ಸರ್ಕಾರದ ಬದ್ಧತೆ ಪ್ರದರ್ಶಿಸಲಿದ್ದಾರೆ. ಅಯೋಧ್ಯೆಯಲ್ಲಿ 240 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ನಿರ್ಮಾಣ ವಾಗಿರುವ ಅಯೋಧ್ಯೆ ಧಾಮ್ ಜಂಕ್ಷನ್ ರೈಲ್ವೆ ನಿಲ್ದಾಣವನ್ನು ಮೋದಿ ಉದ್ಘಾಟಿಸಲಿದ್ದಾರೆ. ಇಲ್ಲಿನ ಮೂರು ಮಹಡಿಯ ಕಟ್ಟಡ ಸಂಪರ್ಕ ಮತ್ತು ಮೂಲಸೌಕರ್ಯ ವೃದ್ಧಿಯಲ್ಲಿ ಸರ್ಕಾರದ ಸಮರ್ಪಣೆಗೆ ಸಾಕ್ಷಿ ಆಗಿರಲಿದೆ. ಇದಕ್ಕೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ) ನೀಡುವ ಹಸಿರು ಕಟ್ಟಡ ಪ್ರಮಾಣಪತ್ರ ಕೂಡ ಲಭಿಸಿದೆ. ಇಲ್ಲಿ ಲಿಫ್ಟ್, ಆಹಾರ ಮಳಿಗೆ, ಅತ್ಯಾಧುನಿಕ ವ್ಯವಸ್ಥೆ, ಮಕ್ಕಳ ಕೊಠಡಿ ಮುಂತಾದ ಸೌಲಭ್ಯಗಳಿವೆ. ಇದೇ ವೇಳೆ ಸೂಪರ್​ಫಾಸ್ಟ್ ಪ್ಯಾಸೆಂಜರ್ ರೈಲು ಅಮೃತ್ ಭಾರತ್​ಗೂ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಈ ಮೂಲಕ ಇಲ್ಲಿ 2 ಅಮೃತ್ ಭಾರತ್, 6 ವಂದೇ ಭಾರತ್ ರೈಲು ಸೌಲಭ್ಯ ಸಿಕ್ಕಂತಾಗುತ್ತದೆ. ಅಲ್ಲದೆ 2,300 ಕೋಟಿ ರೂ. ಮೊತ್ತದ ಮೂರು ರೈಲು ಯೋಜನೆಗಳನ್ನೂ ಲೋಕಾರ್ಪಣೆ ಮಾಡಲಿದ್ದಾರೆ. ಮತ್ತೊಂದೆಡೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಉದ್ಘಾಟಿಸಲಿದ್ದಾರೆ. ಒಟ್ಟು 15,700 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೋದಿ ಶನಿವಾರ ಭಾಗಿಯಾಗಲಿದ್ದಾರೆ. ಪ್ರವಾಸಿ ಸ್ಥಳಗಳ ಅಭಿವೃದ್ಧಿ, ವಶಿಷ್ಠ ಕುಂಜ ವಸತಿ ಯೋಜನೆ, ಅಯೋಧ್ಯೆ ಅರ್ಬನ್ ಲ್ಯಾಂಡ್​ಸ್ಕೇಪ್ ಎಲ್ಲವನ್ನೂ ಇದು ಒಳಗೊಂಡಿದೆ.
ಭಿಕ್ಷುಕರಿಂದ 4 ಲಕ್ಷ ರೂ. ದೇಣಿಗೆ:ಶ್ರೀರಾಮಮಂದಿರ ನಿರ್ವಣಕ್ಕೆ ಭಿಕ್ಷುಕರು 4 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ಗಾಗಿ ಆರ್​ಎಸ್​ಎಸ್ ಅಭಿಯಾನ ಹಮ್ಮಿಕೊಂಡಿದ್ದು, ಈ ವೇಳೆ ಕಾಶಿ ಮತ್ತು ಪ್ರಯಾಗ ರಾಜ್​ನ 300ಕ್ಕೂ ಅಧಿಕ ಭಿಕ್ಷುಕರು ದೇಣಿಗೆ ನೀಡಿದ್ದು, ಆ ಮೊತ್ತ 4 ಲಕ್ಷ ರೂಪಾಯಿಯಷ್ಟಿದೆ. ಈ ಭಿಕ್ಷುಕರಿಗೆ ಶ್ರಿರಾಮಲಲ್ಲಾ ಮಹಾಮಸ್ತಕಾಭಿಷೇಕ ಸಮಯದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗುವುದು ಎನ್ನಲಾಗುತ್ತಿದೆ.
ವಾರವಿಡೀ ಆಚರಣೆ:ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಜ. 22ರಂದು ಇರುವುದಾದರೂ ಜ.16ರಿಂದಲೇ ಸತತ ಏಳು ದಿನ ಕಾರ್ಯಕ್ರಮಗಳು ಇರಲಿವೆ. ಅಂದು ಸರಯೂ ನದಿಯಲ್ಲಿ ದಶವಿಧ ಸ್ನಾನ, ವಿಷ್ಣುಪೂಜೆ, ಗೋದಾನದಿಂದ ಆರಂಭವಾಗುವ ಸಮಾರಂಭ, ಜ. 22ರಂದು ಮೃಗಶಿರ ನಕ್ಷತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನೆರವೇರುವ ಮೂಲಕ ಸಮಾಪ್ತಿ ಆಗಲಿದೆ.
ಸಹಸ್ರಪುಷ್ಪರಾಮ ಅಲಂಕಾರ:ಗುಜರಾತಿನ ಪುಷ್ಪಾಲಂಕಾರ ಉದ್ಯಮಿ ಅಶೋಕ್ ಬನ್ಸಾಲಿ ಎಂಬವರು ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸಾವಿರಾರು ಹೂವುಗಳಿಂದ ಅಲಂಕಾರ ಮಾಡಲಿದ್ದಾರೆ. ಅದರಲ್ಲೂ ಈ ಹೂವುಗಳ ದಳಗಳ ಮೇಲೆ ಶ್ರೀರಾಮನ ಚಿತ್ರ ಇರಲಿದೆ. ಹೀಗೆ ಮೋದಿ, ಯೋಗಿ ಚಿತ್ರಗಳಲ್ಲದೆ, ಜೈ ಶ್ರೀರಾಮ್ ಮೇರಾ ಭಾರತ್ ಮಹಾನ್ ಮುಂತಾದ ಬರಹಗಳೂ ಇರುವ ಹೂವುಗಳಿರಲಿವೆ. ನಾಲ್ಕು ವರ್ಷಗಳ ಪ್ರಯತ್ನದ ಮೂಲಕ ಈ ಚಿತ್ರ/ಬರಹಗಳನ್ನು ಹೂವಿನ ದಳಗಳ ಮೇಲೆ ಮುದ್ರಿಸಲಾಗಿದೆ. ಸುಮಾರು 10 ಸಾವಿರ ಇಂಥ ಹೂವುಗಳನ್ನು ಸೃಷ್ಟಿಸಲಾಗಿದೆ. ಈ ಹೂವುಗಳಿಂದ ಸಂಕೀರ್ಣ ಅಲಂಕರಿಸುವ ಜತೆಗೆ ಜೈಶ್ರೀರಾಮ್ ಮುದ್ರಿಸಿರುವ ಹೂವಿನ ದಳಗಳಿಂದ ಮೂರ್ತಿಯ ಸುತ್ತಲೂ ಅಲಂಕರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಯೋಧ್ಯೆಗೆ ಬಿಗಿಭದ್ರತೆ:ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬಿಗಿಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10.45ಕ್ಕೆ ಆಗಮಿಸಲಿರುವ ಮೋದಿ ರೈಲು- ವಿಮಾನ ನಿಲ್ದಾಣ ಉದ್ಘಾಟಿಸಿದ ಬಳಿಕ ಜನಸಭಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರೈಲು-ವಿಮಾನ ನಿಲ್ದಾಣಗಳ ಮಾರ್ಗದಲ್ಲಿ ಮೋದಿ ರೋಡ್ ಶೋ ನಡೆಯವ ಸಾಧ್ಯತೆ ಇದೆ. ಹೀಗಾಗಿ ಶನಿವಾರ 1.5 ಲಕ್ಷಕ್ಕೂ ಅಧಿಕ ಜನರು ಸೇರುವ ಅಂದಾಜು ಇರುವುದರಿಂದ ಬಿಗಿಭದ್ರತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಖರ್ಗೆ-ಸೋನಿಯಾ ಭಾಗಿ?:ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಆಹ್ವಾನ ನೀಡಲಾಗಿದೆ. ಆದರೆ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಲಿರುವ ಕುರಿತು ಸೂಕ್ತ ಸಮಯದಲ್ಲಿ ನಿರ್ಣಯಿಸಿ ತಿಳಿಸಲಾಗುವುದು ಎಂದು ಪಕ್ಷದ ವಕ್ತಾರ ಜೈರಾಂ ರಮೇಶ್ ಹೇಳಿಕೊಂಡಿದ್ದರಿಂದ, ಅಂದು ಅವರ ಉಪಸ್ಥಿತಿ ಇನ್ನೂ ಖಚಿತವಾಗಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − three =
Remember me
