ಲಕ್ನೋ:ಜನವರಿ 22 ರಂದು ಅದ್ದೂರಿಯಾಗಿ ನಡೆಯಲಿರುವ ರಾಮಮಂದಿರ ವಿಗ್ರಹ ಪ್ರತಿಷ್ಠಾಪನೆಗೆ ಉತ್ತರಪ್ರದೇಶ ಸಂಪೂರ್ಣವಾಗಿ ಝಗಮಗಿಸುತ್ತಿದೆ. ರಾಜ್ಯದ ಹಲವು ಪ್ರಸಿದ್ಧ ತಾಣಗಳು ಹೊಸ ರೂಪ ಪಡೆಯುತ್ತಿದೆ. ಈ ಪೈಕಿ ಇದೀಗ ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ ಮರುನಾಮಕರಣ ಮಾಡಲಾಗಿದ್ದು, “ಅಯೋಧ್ಯಾ ಧಾಮ್” ಜಂಕ್ಷನ್ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ:ಮುಂಬೈನಲ್ಲಿ ಭಾರತ-ಆಸ್ಟ್ರೇಲಿಯಾ ಮಹಿಳೆಯರ ಕಾದಾಟ: ಕನ್ನಡತಿ ಶ್ರೇಯಾಂಕಾ ಪದಾರ್ಪಣೆ ನಿರೀಕ್ಷೆ
“ಇದೇ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿರುವ ಅಯೋಧ್ಯೆ ರೈಲು ನಿಲ್ದಾಣವನ್ನು ‘ಅಯೋಧ್ಯಾ ಧಾಮ್’ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ” ಎಂದು ನಗರದ ಸಂಸದ ಲಲ್ಲು ಸಿಂಗ್ ಹೇಳಿದ್ದಾರೆ. ಸದ್ಯ ಅಯೋಧ್ಯೆ ಜಂಕ್ಷನ್ ಈಗ ಅಯೋಧ್ಯಾ ಧಾಮ ಜಂಕ್ಷನ್ ಆಗಿ ಮಾರ್ಪಟ್ಟಿದೆ.
“ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಮಾರ್ಗದರ್ಶನದಲ್ಲಿ, ಹೊಸದಾಗಿ ನಿರ್ಮಿಸಲಾದ ಭವ್ಯವಾದ ಅಯೋಧ್ಯೆ ರೈಲು ನಿಲ್ದಾಣದ ಅಯೋಧ್ಯೆ ಜಂಕ್ಷನ್ ಹೆಸರನ್ನು ಸಾರ್ವಜನಿಕ ಭಾವನೆಗಳ ನಿರೀಕ್ಷೆಯಂತೆ ಅಯೋಧ್ಯಾ ಧಾಮ್ ಎಂದು ಬದಲಾಯಿಸಲಾಗಿದೆ. ಡಿಸೆಂಬರ್ 30 ರಂದು ಇದರ ಉದ್ಘಾಟನೆ ನಡೆಯಲಿದೆ” ಎಂದು ಲಲ್ಲು ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಸಾಮಾಜಿಕ ಜಾಲತಾಣದಿಂದ ದೂರವಿರುವುದೇ ಯಶಸ್ಸಿಗೆ ಕಾರಣವೆಂದ ಕನ್ನಡಿಗ ಕೆಎಲ್​ ರಾಹುಲ್​!
ಅಯೋಧ್ಯೆ ರಾಮಮಂದಿರ ವಿಗ್ರಹ ಪ್ರತಿಷ್ಠಾಪನೆಯ ಬೆನ್ನಲ್ಲೇ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ನಡೆಯುತ್ತಿದ್ದು, ಬೃಹತ್ ರೈಲು ನಿಲ್ದಾಣದಲ್ಲಿ ಲಿಫ್ಟ್‌ಗಳು, ಪ್ರವಾಸಿ ಮಾಹಿತಿ ಕೇಂದ್ರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗಿದೆ. ಎಲ್ಲಾ ರೀತಿಯ ವ್ಯಾಪಕ ಸಿದ್ಧತೆಗಳು ಕೂಡ ಪೂರ್ಣಗೊಂಡಿವೆ. ನವೀಕರಿಸಿದ ಪ್ಲಾಟ್‌ಫಾರ್ಮ್‌ಗಳು, ಹೊಸ ಸೈನ್‌ಬೋರ್ಡ್‌ಗಳು, ಎಸ್ಕಲೇಟರ್‌ಗಳು ಮತ್ತು ಗೋಡೆಗಳ ಮೇಲೆ ಚಿತ್ರಿಸಿದ ಭಗವಾನ್ ರಾಮನ ಭಿತ್ತಿಚಿತ್ರಗಳನ್ನು ಪ್ರವಾಸಿಗರು ನೋಡಬಹುದಾಗಿದೆ,(ಏಜೆನ್ಸೀಸ್).
ಎಮರ್ಜೆನ್ಸಿ ಕೇಸ್​! ಕುಡಿದ ಅಮಲಿನಲ್ಲಿ ಆಸ್ಪತ್ರೆಗೆ ಬಂದ ವೈದ್ಯ ಮುಂದೆ ನಡೆದಿದ್ದು….?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × five =
Remember me
