ನವದೆಹಲಿ:ಜನವರಿ 22 ರಂದು ಅಯೋಧ್ಯೆ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಲಿದೆ. ಇದಕ್ಕೂ ಮುನ್ನ ಹಲವು ಕಂಪನಿಗಳು ಪ್ರಸಾದ ವಿತರಣೆ ಬಗ್ಗೆ ಹೇಳಿಕೊಳ್ಳುತ್ತಿವೆ. ಹೆಚ್ಚಿನ ಸಂಖ್ಯೆಯ ಭಕ್ತರು ಅನೇಕ ವೆಬ್‌ಸೈಟ್‌ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡುತ್ತಿರುವುದನ್ನು ಕಾಣಬಹುದು. ರಾಮಮಂದಿರದ ಪ್ರಸಾದವನ್ನು ವೆಬ್‌ಸೈಟ್ ಮೂಲಕ ಮನೆಗೆ ತಲುಪಿಸಲಾಗುತ್ತದೆಯೇ? ಇಲ್ಲಿದೆ ನೋಡಿ ಉತ್ತರ…
ಕೆಲವು ದಿನಗಳ ಹಿಂದೆ, ಖಾದಿ ಆರ್ಗ್ಯಾನಿಕ್ ಎಂಬ ವೆಬ್‌ಸೈಟ್ ಅಯೋಧ್ಯೆ ರಾಮಮಂದಿರದ ಉಚಿತ ಪ್ರಸಾದ ವಿತರಣೆಯ ಕುರಿತು ಪ್ರಕಟಿಸಿತು. ಇದನ್ನು ನೋಡಿದ ಅನೇಕ ಭಕ್ತರು ತಮಗಾಗಿ ಪ್ರಸಾದವನ್ನೂ ಕಾಯ್ದಿರಿಸಿದ್ದರು. ಇಷ್ಟೇ ಅಲ್ಲ, ಅನೇಕ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ದೇವಸ್ಥಾನದ ಪ್ರಸಾದಕ್ಕಾಗಿ ಹಲವರು ಜಾಹೀರಾತು ನೀಡಿದ್ದಾರೆ. ಆದರೆ ಇದೆಲ್ಲಾ ಸುಳ್ಳು. ಏಕೆಂದರೆ ಪ್ರಸಾದ ವಿನಿಯೋಗದ ಬಗ್ಗೆ ಯಾವುದೇ ಘೋಷಣೆಯಾಗಿಲ್ಲ.
ಕಂಪನಿಗಳು ಶ್ರೀರಾಮ ಜನ್ಮಭೂಮಿ ತೀರ್ಥಯಾತ್ರೆ ಟ್ರಸ್ಟ್‌ನೊಂದಿಗೆ ಯಾವುದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿಲ್ಲ. ಟ್ರಸ್ಟ್ ‘ಎಕ್ಸ್’ ಖಾತೆಯಲ್ಲಿ ಅಂತಹ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದೀಗ ವಿಶ್ವ ಹಿಂದೂ ಪರಿಷತ್‌ನ ವಕ್ತಾರ ವಿನೋದ್ ಬನ್ಸಾಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಕ್ತರು ಇಂತಹ ಜಾಹೀರಾತು, ಪ್ರಕಟಣೆಗಳಿಂದ ದೂರವಿರಿ ಎಂದು ಮನವಿ ಮಾಡಿದ್ದಾರೆ. ಟ್ರಸ್ಟ್ ಇಂತಹ ಕೆಲಸಕ್ಕೆ ಯಾರನ್ನೂ ನೇಮಿಸಿಲ್ಲ. ಆದ್ದರಿಂದ ಯಾವುದೇ ಪ್ರಲೋಭನೆಗೆ ಬೀಳಬೇಡಿ. ವೆಬ್‌ಸೈಟ್‌ನಲ್ಲಿ ಕಂಡುಬರುವ ಜಾಹೀರಾತು ಸುಳ್ಳು. ಅದನ್ನು ತಕ್ಷಣವೇ ತೆಗೆದುಹಾಕಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಸ್ಟ್ ಮಾಡಿದ್ದಾರೆ.
कभी VIP दर्शन तो कभी घर बैठे प्रसाद के नाम अनेकों विज्ञापन राम भक्तों को दिगभ्रमित कर, छल कपट का प्रयास कर रहे हैं।@amazonजैसी वेबसाइट पर भी इस तरह के अनेक विज्ञापन देखे जा रहे हैं! समाज को इनसे सावधान रहना होगा।@ShriRamTeerthने किसी को भी इन कामों के लिए अधिकृत नहीं किया…pic.twitter.com/tyXHg7vDxs
— विनोद बंसल Vinod Bansal (@vinod_bansal)January 16, 2024

ಪ್ರಸಾದ ವಿತರಿಸುವುದಾಗಿ ಹೇಳಿಕೊಂಡಿದ್ದ ಖಾದಿ ಆರ್ಗ್ಯಾನಿಕ್ ವೆಬ್‌ಸೈಟ್ ಕೂಡ ಜಾಹೀರಾತು ತೆರವುಗೊಳಿಸಿದೆ. ಶ್ರೀರಾಮ ಜನ್ಮಸ್ಥಳಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಸಹ ತೆಗೆದುಹಾಕಲಾಗಿದೆ.
ರಾಮನ ವಿಗ್ರಹದ ಫೋಟೋ ಹಂಚಿಕೊಂಡ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಂತಸ ವ್ಯಕ್ತಪಡಿಸಿದ್ದು ಹೀಗೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 − 1 =
Remember me
