ಮಂಗಳೂರು:ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮಮಂದಿರ ಮಕರ ಸಂಕ್ರಾಂತಿ ಬಳಿಕ ಲೋಕಾರ್ಪಣೆ ಆಗಲಿದ್ದು, ಆ ಮಂದಿರದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸ್ವಾಮೀಜಿ, ಪ್ರಥಮ ಹಂತದ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ರಾಮ ಪ್ರತಿಮೆ ನಿರ್ಮಾಣ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಮುಂದಿನ ಮಕರ ಸಕ್ರಾಂತಿ ಕಳೆದ ಬಳಿಕ ಮಂದಿರ ಲೋಕಾರ್ಪಣೆ ಆಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಬೆಂಗಳೂರು-ಮೈಸೂರು ದಶಪಥ: ಅಪಘಾತದಲ್ಲಿ ಈ ತಿಂಗಳು 45 ಸಾವು!; ಸಚಿವರಿಂದ ಅಧಿಕಾರಿಗಳ ಸಭೆ, ಸದ್ಯದಲ್ಲೇ ತನಿಖೆ?
ಆಯೋಧ್ಯಾ ರಾಮಮಂದಿರದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ. ರಾಮನ ಹೆಸರಿನಲ್ಲಿ ಭಕ್ತರು ಮಾಡುವ ದಾನಗಳೇ ರಾಮನ ಸೇವೆ ಎಂದ ಸ್ವಾಮೀಜಿ, ನಮ್ಮ ಕನಸು ರಾಮಮಂದಿರ ಅಲ್ಲ, ರಾಮ ರಾಜ್ಯದ ಕನಸು. ಆ ಕನಸನ್ನು ಸಾಕಾರ ಮಾಡುವುದು ರಾಮ ದೇವರಿಗೆ ಕೊಡುವ ಕಾಣಿಕೆ ಎಂದರು.
ಇದನ್ನೂ ಓದಿ:ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?
ಬದುಕಿನಲ್ಲಿ ಒಂದು ಬಾರಿ ಅಶಕ್ತರಿಗೆ ದಾನ ಮಾಡೋಣ. ಅಯೋಧ್ಯೆಯಲ್ಲಿ ರಾಮನ ಮುಂದೆ ದಾನವನ್ನು ಅರ್ಪಿಸೋಣ. ಬಡವರಿಗೆ ಉಚಿತ ಚಿಕಿತ್ಸೆ, ಅರ್ಹ ವಿದ್ಯಾರ್ಥಿಗೆ ಚಿಕಿತ್ಸೆ, ಗೋ ದತ್ತು ಪಡೆಯುವ ಮೂಲಕ ರಾಮಸೇವೆ ಮಾಡೋಣ. ಈ ಮೂಲಕ ರಾಮ ರಾಜ್ಯದ ಕನಸನ್ನು ನನಸು ಮಾಡೋಣ ಎಂದೂ ಅವರು ಹೇಳಿದರು.
ಸರ್ಕಾರ ಗೋಹತ್ಯೆ ನಿಷೇಧ ಹಿಂಪಡೆಯುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಹಿಂದೂ ಸಂಘಟನೆಗಳು ಗೋಹತ್ಯೆಯನ್ನು ತಡೆಯಬೇಕು. ಆದರೆ ಪೊಲೀಸರ ಮೂಲಕ ಈ ಹತ್ಯೆಯನ್ನು ತಡೆಯಬೇಕು. ಭಾರತದಂತಹ ನೆಲದಲ್ಲಿ ಗೋಹತ್ಯೆ ಆಗಬಾರದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

ಮೊನ್ನೆ ಜಗ್ಗೇಶ್​ಗೆ ಕನ್ನಡ ಪಾಠ ಮಾಡಿದ್ದ ‘ಮೇಷ್ಟ್ರು’, ಇಂದು ಸಚಿವರು-ಸರ್ಕಾರಿ ಅಧಿಕಾರಿಗಳಿಗೂ ಕಿವಿಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 19 =
Remember me
