ನವದೆಹಲಿ:ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ಶ್ರೀರಾಮನ ಭವ್ಯ ಮಂದಿರದ ಮೊದಲ ಮಹಡಿಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ದೇವಾಲಯದ ಗರ್ಭಗುಡಿಯೂ ಬಹುತೇಕ ಸಿದ್ಧವಾಗಿದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ
ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ದೇವಾಲಯದ ಗರ್ಭಗುಡಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರಾಮಲಾಲ್ಲಾ ಗರ್ಭಗುಡಿ ಬಹುತೇಕ ಸಿದ್ಧವಾಗಿದೆ. ದೀಪಾಲಂಕಾರ ಕಾಮಗಾರಿಯೂ ಪೂರ್ಣಗೊಂಡಿದೆ. ಮುಂದಿನ ಜನವರಿ 22ರಂದು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು, ಇದರ ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ಹೇಳಿದ್ದಾರೆ. ರಾಮನಗರಿ ಅಯೋಧ್ಯೆಯನ್ನು ಅದ್ಧೂರಿಯಾಗಿ ಅಲಂಕರಿಸಲು ಸರ್ಕಾರ ತೀರ್ವನಿಸಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೂ ಮುನ್ನ ಇಡೀ ಪ್ರದೇಶದ ಪುನರುಜ್ಜೀವನದ ಪ್ರಕ್ರಿಯೆ ನಡೆಯುತ್ತಿದೆ. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಪ್ರಮುಖ ಮಾರ್ಗಗಳಲ್ಲಿ ರಾಮಾಯಣ ಕಾಲದ ಪ್ರಮುಖ ಘಟನೆಗಳ ಸುಂದರ ಚಿತ್ರಗಳನ್ನು ರಚಿಸಲು ಸಿದ್ಧತೆ ನಡೆಯುತ್ತಿದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ವತಿಯಿಂದ ಪ್ರಮುಖ ರಸ್ತೆಗಳ ಗೋಡೆಗಳ ಮೇಲೆ ಮ್ಯೂರಲ್ ಕಲಾಕೃತಿ ರಚನೆ ಮಾಡಲಾಗುತ್ತಿದೆ. ಟೆರಾಕೋಟಾ ಕಲಾಕೃತಿಗಳು ಒಂಬತ್ತು ಅಡಿ ಎತ್ತರ ಮತ್ತು 20 ಅಡಿ ಅಗಲ ಇರಲಿದೆ. 50ಕ್ಕೂ ಹೆಚ್ಚು ಮ್ಯೂರಲ್ ಶಿಲ್ಪಗಳು ಮತ್ತು ಮ್ಯೂರಲ್​ಗಳು ಇರಲಿವೆ. ರಾಮಾಯಣ ಆಧರಿಸಿ ಕಲಾಕೃತಿ ನಿರ್ಮಾಣ ಮಾಡಲಾಗುತ್ತಿದೆ.
ಮೂರ್ತಿಗಳ ಕೆತ್ತನೆ ಶೇ. 90 ಪೂರ್ಣಅಯೋಧ್ಯೆಯಲ್ಲಿನ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂದಿರದ 3 ಕಡೆ ಶ್ರೀರಾಮನ ಮಗುವಿನ ರೂಪದ 4.3 ಅಡಿಯ ಮೂರು ಮೂರ್ತಿಗಳ ಕೆತ್ತನೆ ನಡೆಯುತ್ತಿದೆ. ಮೂವರು ಕಲಾವಿದರು ಮೂರು ಬೇರೆಬೇರೆ ಶಿಲ್ಪದಲ್ಲಿ ಅವುಗಳನ್ನು ತಯಾರುಮಾಡುತ್ತಿದ್ದಾರೆ. ಆ ಪೈಕಿ ಒಂದನ್ನು ದೇವರ ಮೂರ್ತಿಯಾಗಿ ಪ್ರತಿಷ್ಠಾಪಿಸಲಾಗುವುದು. ಆ ಮೂರ್ತಿಗಳ ಕೆತ್ತನೆ ಕಾರ್ಯ ಶೇ. 90 ಪೂರ್ಣಗೊಂಡಿದೆ, ಇನ್ನೊಂದು ವಾರದಲ್ಲಿ ಮೂರ್ತಿಗಳು ಸಿದ್ಧವಾಗಲಿವೆ ಎಂದು ರೈ ತಿಳಿಸಿದ್ದಾರೆ. ಮೂರ್ತಿಯನ್ನು ನೆಲಮಹಡಿಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ನೆಲಮಹಡಿ ಬಹುತೇಕ ಪೂರ್ಣಗೊಂಡಿರುವುದರಿಂದ ಪ್ರತಿಷ್ಠಾಪನೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪ್ರತಿಷ್ಠಾಪನೆಗೆ ಕನಿಷ್ಠ 4 ಸಾವಿರ ಸಾಧುಗಳನ್ನು ಆಹ್ವಾನಿಸಲಾಗುವುದು. ಅಲ್ಲದೆ ಐವತ್ತು ದೇಶಗಳಿಂದ ಕನಿಷ್ಠ ಒಬ್ಬರನ್ನು ಪ್ರತಿನಿಧಿಯಾಗಿ ಆಹ್ವಾನಿಸುವ ಯೋಜನೆಯೂ ಇದೆ ಎಂದು ತಿಳಿಸಿದ್ದಾರೆ.
ಪಂಡಿತ್ ಲಕ್ಷ್ಮೀಕಾಂತ ನೇತೃತ್ವನವದೆಹಲಿ: ಅಯೋಧ್ಯೆಯಲ್ಲಿ ನಿರ್ವಣವಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರದಲ್ಲಿನ ಪ್ರತಿಷ್ಠಾಪನೆ ನೇತೃತ್ವವನ್ನು ಶಿವಾಜಿ ಪುರೋಹಿತರ ವಂಶಸ್ಥ, ವಾರಾಣಸಿಯ ವೈದಿಕ ಸಂಪ್ರದಾಯದ ವಿದ್ವಾಂಸ, 86 ವರ್ಷದ ಹಿರಿಯ ಪಂಡಿತ್ ಲಕ್ಷ್ಮೀಕಾಂತ ಮಥುರನಾಥ ದೀಕ್ಷಿತ್ ವಹಿಸಲಿದ್ದಾರೆ. ಇವರು ಹದಿನೇಳನೇ ಶತಮಾನದಲ್ಲಿ ಕಾಶಿಯ ಪ್ರಸಿದ್ಧ ವಿದ್ವಾಂಸ, ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ ನೇತೃತ್ವ ವಹಿಸಿದ್ದ ಗಂಗಾಭಟ್ಟ ಅವರ ವಂಶಸ್ಥರು. ಅಯೋಧ್ಯೆಯ ರಾಮಮಂದಿರದಲ್ಲಿ 2024ರ ಜ. 22ರಂದು ನೆರವೇರಲಿರುವ ರಾಮ ಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ಕಾರ್ಯದ ಮುಂದಾಳತ್ವವನ್ನು ಲಕ್ಷ್ಮೀಕಾಂತ ದೀಕ್ಷಿತ್ ವಹಿಸಲಿದ್ದಾರೆ. ಈ ಪ್ರತಿಷ್ಠಾಪನೆಯಲ್ಲಿ ದೇಶಾದ್ಯಂತದ ವಿವಿಧ ಭಾಗಗಳ ವೇದಪರಿಣತ 121 ವಿದ್ವಾಂಸರು ಭಾಗಿಯಾಗಲಿದ್ದು, ಆ ಪೈಕಿ ವಾರಾಣಸಿಯ 40ಕ್ಕೂ ಅಧಿಕ ವಿದ್ವಾಂಸರು ಇರಲಿದ್ದಾರೆ. ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಜ. 16ರಂದೇ ಕೆಲವೊಂದು ಪೂಜೆ ಆಚರಣೆಗಳು ಆರಂಭವಾಗಲಿವೆ. ಜ. 17ರಂದು ಜಲಯಾತ್ರೆ, ತೀರ್ಥ, ಕಲಶ ಪೂಜೆ, ಕಲಶಯಾತ್ರೆಗಳು ನಡೆಯಲಿವೆ. ಜ. 22ರ ಧಾರ್ವಿುಕ ವಿಧಿ-ವಿಧಾನಗಳಲ್ಲಿ ಲಕ್ಷ್ಮೀಕಾಂತ ಮಥುರನಾಥ ದೀಕ್ಷಿತ್ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಆರ್ಟ್ ಆಫ್ ಲಿವಿಂಗ್​​ ವತಿಯಿಂದ ಸಿರಿಧಾನ್ಯ ಮೇಳ: ಸಾವಿರಾರು ಜನರು 180 ಮಳಿಗೆಗಳಿಗೆ ಭೇಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
