ನಾಗಪುರ:ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಜನವರಿ 22 ರಂದು ನಡೆಯಲಿದ್ದು ರಾಮನ ಭಕ್ತರು ವಿಭಿನ್ನವಾಗಿ ಗೌರವ ತೋರುತ್ತಿದ್ದಾರೆ. ಇಲ್ಲೊಬ್ಬ 1001 ಜನರಿಗೆ ಉಚಿತವಾಗಿ ಹಚ್ಚೆ ಹಾಕಲಾಗುವುದು ಎಂದ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಬಡ ಕುಟುಂಬದ ಹುಡುಗಿಯನ್ನು ದತ್ತು ಪಡೆಯಲು ಮುಂದಾದ ಸೋನು ಗೌಡ!
ಶ್ರೀರಾಮನ ಭಕ್ತಿ ತೋರಿಸಿರುವ ಹಚ್ಚೆ ಕಲಾವಿದ ಹೆಸರು ಹೃತಿಕ್​ ದಾರೋಡ್​. ನಾಗಪುರ ಮೂಲದವರು. ಹಲವು ವರ್ಷಗಳಿಂದ ಟ್ಯಾಟೊ ಹಾಕುವುದನ್ನು ತಮ್ಮ ವೃತ್ತಿಯಾಗಿಸಿಕೊಂಡಿದ್ದಾರೆ. ರಾಮ ಮಂದಿರದ ಉದ್ಘಾಟನೆ ವಿಶೇಷ ಸಂದರ್ಭದಲ್ಲಿ ಭಕ್ತರ ಕೈಗಳ ಮೇಲೆ ಪ್ರಭು ಶ್ರೀರಾಮ ಹೆಸರಿನ ಹಚ್ಚೆಗಳನ್ನು ಹಾಕುತ್ತಿದ್ದಾರೆ.
ಮೊದಲು ನೋಂದಾಯಿಸಿಕೊಂಡ 1001 ಮಂದಿಗೆ ಉಚಿತವಾಗಿ ಹಚ್ಚೆ ಹಾಕುವುದಾಗಿ ಘೋಷಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಇವರ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ ನಿಂತು ಟ್ಯಾಟೊಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರಕ್ಕೆ ಅದ್ಭುತವಾದ ರೇಷ್ಮೆ ಬಟ್ಟೆಯನ್ನು ನೇಯ್ದ ಧರ್ಮಾವರಂ ಜಿಲ್ಲೆಯ ಕೈಮಗ್ಗ ಕಲಾವಿದ ಸತ್ಯಸಾಯಿ. ರೇಷ್ಮೆ ಬಟ್ಟೆಯಲ್ಲಿ ರಾಮಕೋಟಿ ನೇಯುವ ಮೂಲಕ ಕೈಮಗ್ಗ ಕಲಾವಿದ ನಾಗರಾಜು ಶ್ರೀರಾಮನ ಭಕ್ತಿ ಮೆರೆದಿದ್ದರು.
ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭ ಆಗುತ್ತಿದ್ದಂತೆಯೇ ಸಮರೋಪಾದಿಯಲ್ಲಿ ಸಿದ್ದತೆಗಳು ನಡೆಯುತ್ತಿವೆ. ದೇಶಾದ್ಯಂತ ಜನರು ಅಯೋಧ್ಯಾ ರಾಮನ ದರ್ಶನಕ್ಕೆ ಕಾದು ಕುಳಿತಿದ್ದಾರೆ.
BBKS10: ಫಿನಾಲೆ ಹಂತದಲ್ಲಿ ಸಂತು-ಪಂತು; ನಿರೀಕ್ಷೆ ತಲೆಕಳಗೆ ಮಾಡಿದ ಸಂತೋಷ್​ ಎಲಿಮಿನೇಷನ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
