ಲಖನೌ:ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ವಣಕ್ಕಾಗಿ ಪ್ರಸ್ತಾವಿತ ಮಾದರಿ ಮತ್ತು ಗಾತ್ರವನ್ನು ವಿಸ್ತರಿಸುವುದು ಸೇರಿ ಹಲವು ಬದಲಾವಣೆಗಳ ಸಲಹೆಗಳು ಬರುತ್ತಿವೆ. ಆದರೆ ವಿಶ್ವ ಹಿಂದು ಪರಿಷತ್ (ವಿಎಚ್​ಪಿ) 30 ವರ್ಷಗಳ ಹಿಂದೆ ನೀಡಿರುವ ಮಾದರಿ ಪ್ರಕಾರವೇ ಮಂದಿರವನ್ನು ನಿರ್ವಿುಸಲಾಗುತ್ತದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸ್ಪಷ್ಟನೆ ನೀಡಿದ್ದಾರೆ.
ವಿಶ್ವ ಹಿಂದು ಪರಿಷತ್ 3 ದಶಕಗಳ ಹಿಂದೆಯೇ ಸಿದ್ಧಪಡಿಸಿರುವ ಮಂದಿರ ವಿನ್ಯಾಸವನ್ನು ತಿರಸ್ಕರಿಸುವುದು ಸೂಕ್ತವಲ್ಲ. ಅದಕ್ಕೆ ಅನುಗುಣವಾಗಿ ಮಂದಿರದ ಕಂಬಗಳ ಕೆತ್ತನೆ ಕೆಲಸ ಕೂಡ ಅರ್ಧ ಮುಗಿದಿದೆ. ಈಗ ವಿನ್ಯಾಸದಲ್ಲಿ ಬದಲಾವಣೆ ತರುವುದರಿಂದ ಮಂದಿರ ಕಾಮಗಾರಿ ಪೂರ್ಣಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ರಾಯ್ ಅಭಿಪ್ರಾಯಪಟ್ಟಿದ್ದಾರೆ. ಮಂದಿರದ ಗರ್ಭಗುಡಿ ಎಲ್ಲಿ ನಿರ್ವಿುಸಬೇಕು ಎಂಬ ಬಗ್ಗೆ ಪುರಾತತ್ವ ಮತ್ತು ವಾಸ್ತುಶಿಲ್ಪ ತಜ್ಞರೊಂದಿಗೆ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಚರ್ಚೆ ನಡೆಸಲಿದ್ದಾರೆ.
ಅರ್ಹತೆ ಮೇಲೆ ನೇಮಕ
ರಾಮಲಲ್ಲಾ ಅರ್ಚಕರಾಗುವವರಿಗೆ ರಾಮಾನಂದಿ ಸಂಪ್ರದಾಯದ ಬಗ್ಗೆ ಚೆನ್ನಾಗಿ ತಿಳಿದಿರಬೇಕು ಮತ್ತು ಸುಸಂಸ್ಕೃತರಾಗಿರಬೇಕು. ದೇವಾಲಯದ ಅರ್ಚಕರ ನೇಮಕವನ್ನು ಅವರ ಅರ್ಹತೆಯಿಂದ ನಿರ್ಣಯಿಸಲಾಗುತ್ತದೆ ಎಂದು ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
