ಅಯೋಧ್ಯೆ ಮತ್ತು ಶ್ರೀರಾಮಚಂದ್ರ ಈ ದೇಶದ ಶ್ರದ್ಧಾಬಿಂದುಗಳು ಮಾತ್ರವಲ್ಲ ಆತ್ಮಶಕ್ತಿಯ ಪ್ರತೀಕವೂ ಹೌದು. ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಪರಿಸರದಲ್ಲಿ ಭವ್ಯ ಮಂದಿರ ನಿರ್ಮಾಣ ಆಗಬೇಕು ಎಂದು ಸಂಕಲ್ಪಿಸಿ ಕೈಗೊಂಡ ಹೋರಾಟ ಚಾರಿತ್ರಿಕ. ‘ರಾಮ್ ಲಲಾ ಹಮ್ ಆಯೇಂಗೇ ಮಂದಿರ್ ವಹೀ ಬನಾಯೆಂಗೇ’ ಎಂದು ಗರ್ಜಿಸುತ್ತ ಲಕ್ಷಾಂತರ ಕರಸೇವಕರು ಸಂತರು-ಸಾಧುಗಳು, ಧರ್ವಚಾರ್ಯರ ಮಾರ್ಗದರ್ಶನದಲ್ಲಿ ಸಾಗಿದರು. ಆಕ್ರಮಣದ ಕಳಂಕವನ್ನು ತೊಡೆದು ಹಾಕಲು ಶ್ರಮಿಸಿದರು. ಈ ಹೋರಾಟದ ಹಾದಿಯೇ ರಾಷ್ಟ್ರವಾದಿ ಶಕ್ತಿಗಳಿಗೆ ಪ್ರೇರಣೆ, ಪರಂಪರೆಯನ್ನು ಮರುಸ್ಥಾಪಿಸುವ ಉತ್ಸಾಹ ನೀಡಿತು.
ವಿವಾದ ಸಾಗಿಬಂದ ಹಾದಿ
1947: ಅಯೋಧ್ಯೆಯ ವಿವಾದಿತ ಸ್ಥಳದಿಂದ ದೂರ ಇರಲು ಮುಸಲ್ಮಾನರಿಗೆ ಸೂಚಿಸಿದ ಕೇಂದ್ರ ಸರ್ಕಾರ, ವಿವಾದಿತ ಕಟ್ಟಡದ ಮುಖ್ಯದ್ವಾರಕ್ಕೆ ಬೀಗ ಜಡಿಯಿತು.1949: ವಿವಾದ ತಾರಕಕ್ಕೆ.1950: ಫೈಜಾಬಾದ್ ಕೋರ್ಟ್ ಮೆಟ್ಟಿಲೇರಿದ ಪ್ರಕರಣ (ಹಿಂದುಗಳಿಂದ ಮೂರು ದಾವೆ)1961: ವಕ್ಪ್​ನ ಸುನ್ನಿ ಕೇಂದ್ರೀಯ ಮಂಡಳಿಯಿಂದ ಇನ್ನೊಂದು ದಾವೆ1964: ನಾಲ್ಕು ದಾವೆಗಳನ್ನು ಒಂದೇ ಪ್ರಕರಣದಡಿ ತಂದ ಕೋರ್ಟ್1984: ರಾಮಮಂದಿರದ ಪುನರ್ ನಿರ್ವಣಕ್ಕಾಗಿ ವಿವಾದಿತ ಜಾಗವನ್ನು ಹಿಂದೂಗಳಿಗೆ ಒಪ್ಪಿಸುವಂತೆ ವಿಶ್ವ ಹಿಂದು ಪರಿಷತ್ ಆಂದೋಲನ1986: ಕೆಲವು ದಶಕಗಳ ಬಳಿಕ ಮತ್ತೆ ಬಾಬ್ರಿ ಕಟ್ಟಡದಲ್ಲಿದ್ದ ಶ್ರೀರಾಮಚಂದ್ರನಿಗೆ ಪೂಜೆ ಮಾಡಲು ಹಿಂದುಗಳಿಗೆ ಅವಕಾಶ ನೀಡಿದ ಜಿಲ್ಲಾ ಕೋರ್ಟ್1989: ವಿವಾದಿತ ಸ್ಥಳದ ಪಕ್ಕದಲ್ಲೇ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ ವಿಹಿಂಪ1990: ಆಡ್ವಾಣಿಯವರಿಂದ ರಾಮ ರಥಯಾತ್ರೆ1991: ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಸಂಗ್ರಹ ಚಳವಳಿ1992: ವಿವಾದಿತ ಬಾಬ್ರಿ ಕಟ್ಟಡ ನೆಲಸಮ (ಡಿಸೆಂಬರ್ 6) ಘಟನೆ ತನಿಖೆಗೆ ಲಿಬರ್ಹಾನ್ ಆಯೋಗ ರಚಿಸಿದ ಕೇಂದ್ರ ಸರ್ಕಾರ1993: ಲಿಬರ್ಹಾನ್ ಆಯೋಗದಿಂದ ವಿಚಾರಣೆ ಆರಂಭ2003: ನ್ಯಾಯಾಲಯದ ಆದೇಶದ ಮೇರೆಗೆ ಪುರಾತತ್ತ್ವ ಇಲಾಖೆಯಿಂದ ವಿವಾದಿತ ಸ್ಥಳದಲ್ಲಿ ಉತ್ಖನನ.2005: ಜುಲೈ 5ರಂದು ಐವರು ಭಯೋತ್ಪಾದಕ ರಿಂದ ರಾಮಮಂದಿರ ಪರಿಸರದ ಮೇಲೆ ದಾಳಿ.2009: 17 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ವರದಿ ಸಲ್ಲಿಸಿದ ಲಿಬರ್ಹಾನ್ ಆಯೋಗ2010: ಉಚ್ಚ ನ್ಯಾಯಾಲಯದ ಲಖನೌ ಪೀಠದಲ್ಲಿ ಪ್ರಕರಣದ ವಿಚಾರಣೆ ಪೂರ್ಣ.2010: ವಿವಾದಿತ ಸ್ಥಳವನ್ನು ಶ್ರೀರಾಮಚಂದ್ರ, ನಿಮೋಹಿ ಅಖಾಡ ಮತ್ತು ಸುನ್ನಿ ವಕ್ಪ್ ಮಂಡಳಿಗೆ ಭಾಗ ಮಾಡಿ ನೀಡುವಂತೆ ಲಖನೌ ಪೀಠ ತೀರ್ಪು (ಸೆ.30).2011: ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್, ಯಥಾಸ್ಥಿತಿ ಕಾಪಾಡಲು ಆದೇಶ2017: ಪರಸ್ಪರ ಸಂಧಾನ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಆಗಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಸಲಹೆ.2017: ಸುಪ್ರೀಂನಿಂದ ಸಾಂವಿಧಾನಿಕ ಪೀಠ ರಚನೆ.2018 ಅಕ್ಟೋಬರ್: 14 ಅರ್ಜಿಗಳ ವಿಚಾರಣೆಯನ್ನು 2019ರ ಜನವರಿಯಲ್ಲಿ ನಡೆಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್.2019 ಮಾರ್ಚ್ 8: ಸಂಧಾನ ಸಮಿತಿ ರಚನೆ ಮಾಡುವ ಮೂಲಕ, ಮಾತುಕತೆಯಿಂದ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚನೆ. 8 ವಾರಗಳಲ್ಲಿ ವರದಿ ಸಲ್ಲಿಸಲು ನಿರ್ದೇಶನ.2019 ಆಗಸ್ಟ್ 1: ಸಂಧಾನ ಸಮಿತಿಯಿಂದ ವರದಿ ಸಲ್ಲಿಕೆ, ಆದರೆ ಸಂಧಾನ ವಿಫಲ.2019 ಆಗಸ್ಟ್ 1: ನಿತ್ಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ನಿರ್ಧಾರ.2019 ಅಕ್ಟೋಬರ್ 16: ಪ್ರಕರಣದ ವಿಚಾರಣೆ ಅಂತ್ಯ. ತೀರ್ಪು ಕಾಯ್ದಿರಿಸಿದ ನ್ಯಾಯಾಲಯ.2019 ನವೆಂಬರ್ 9: ಅಂತಿಮ ತೀರ್ಪು ಪ್ರಕಟ.
ಇತಿಹಾಸದ ಪುಟಗಳು: ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ರಾಮನ ಭವ್ಯ ಮಂದಿರವಿತ್ತೆಂದು ಇತಿಹಾಸದ ಅನೇಕ ಪುರಾವೆಗಳು ಸ್ಪಷ್ಟವಾಗಿ ಹೇಳಿವೆ. ವಿಕ್ರಮಾದಿತ್ಯ ಕಟ್ಟಿಸಿದ್ದ ಏಳು ಅಂತಸ್ತಿನ ಭವ್ಯ ಮಂದಿರವನ್ನು 1528ರಲ್ಲಿ ದಾಳಿಕೋರ ಬಾಬರನ ಸೇನಾಧಿಪತಿ ಮೀರ್​ಬಾಕಿ ಕೆಡವಿ, ಅದೇ ಸ್ಥಳದಲ್ಲಿ ‘ಜನ್ಮಸ್ಥಾನ್ ಮಸ್ಜೀದ್’ ನಿರ್ವಿುಸಿದ. 1528ರಿಂದ 1934ರವರೆಗೆ 76 ಬಾರಿ ಸೋಲು-ಗೆಲುವಿನ ಕದನಗಳು ಉಭಯ ಕೋಮುಗಳ ಮಧ್ಯೆ ನಡೆದು, ಮೂರು ಲಕ್ಷ ಹಿಂದುಗಳು ಶ್ರೀರಾಮ ಜನ್ಮಭೂಮಿ ಮುಕ್ತಿಗಾಗಿ ಬಲಿದಾನಗೈದರು!ಅಂದಹಾಗೆ, ವಿವಾದಿತ ಕಟ್ಟಡ ಬಾಬರ್ ನಿರ್ವಿುಸಿದ್ದಲ್ಲ. ಬ್ರಿಟಿಷರು ನಿರ್ವಿುಸಿದ್ದು! 1934ರಲ್ಲಿ ‘ಜನ್ಮಸ್ಥಾನ್ ಮಸ್ಜೀದ್’ನ ಬಹುಪಾಲು ಜಖಂಗೊಂಡಿತು. ಇಂತಹ ಹಾನಿಗೀಡಾದ ಕಟ್ಟಡವನ್ನು ಫೈಜಾಬಾದಿನ ಅಂದಿನ ಜಿಲ್ಲಾ ಕಲೆಕ್ಟರ್ ಜೆ.ವಿ.ನಿಕ್ಸಲನ್ ಹಿಂದೂ-ಮುಸ್ಲಿಂರ ಮಧ್ಯೆ ಸದಾ ಘರ್ಷಣೆ ಇರಲೆಂಬ ದುರುದ್ದೇಶದಿಂದ ದುರಸ್ತಿಗೊಳಿಸಿದ. ಹಾಗಾಗಿ, ‘ಬಾಬ್ರಿ ಮಸೀದಿ’ ಎಂದು ಉಲ್ಲೇಖಗೊಳ್ಳುತ್ತಿರುವ ಕಟ್ಟಡ ಬಾಬರ್ ನಿರ್ವಿುತವಲ್ಲ; ಬ್ರಿಟಿಷ್ ನಿರ್ವಿುತ.
ಸ್ವಾತಂತ್ರ್ಯ ಪ್ರಾಪ್ತಿ ಬಳಿಕ: ಭಾರತ 1947ರಲ್ಲಿ ಸ್ವತಂತ್ರಗೊಂಡ ಬಳಿಕ ಹಿಂದೂ ಧಾರ್ವಿುಕ ಕೇಂದ್ರಗಳು ದಾಳಿಕೋರರಿಂದ ವಿಮೋಚನೆ ಪಡೆಯುತ್ತವೆ ಎಂಬ ಆಶಯ ಈಡೇರಲೇ ಇಲ್ಲ. 1948ರಲ್ಲಿ ಕೆ.ಕೆ.ನಯ್ಯಾರ್ ಫೈಜಾಬಾದಿನ ಜಿಲ್ಲಾಧಿಕಾರಿಯಾಗಿದ್ದರು. ಆಗ ಶ್ರೀ ಗೋರಕ್ಷಾ ಪೀಠದ ವಿಜಯನಾಥರು ಶ್ರೀರಾಮ ಜನ್ಮ ಭೂಮಿ ವಿಮೋಚನೆಗಾಗಿ ಆಗ್ರಹಿಸಿದರು.
ರಾಮಲಲಾ ಆಗಮನ: 1949 ಡಿಸೆಂಬರ್ 23ರ ಮಧ್ಯರಾತ್ರಿ ವಿವಾದಿತ ಕಟ್ಟಡದಲ್ಲಿ ‘ರಾಮಲಲಾ’ ಅರ್ಥಾತ್ ಬಾಲರಾಮನ ವಿಗ್ರಹ ಕಾಣಿಸಿಕೊಂಡಿತು. ಮರುದಿನದಿಂದಲೇ ರಾಮಕೀರ್ತನೆ, ಭಜನೆ ಪ್ರಾರಂಭವಾಗಿ ಭಕ್ತರ ಆಗಮನ ಆರಂಭವಾಯಿತು. ಆಗಿನ ನೆಹರು ಸರ್ಕಾರ ಆ ಮೂರ್ತಿಯನ್ನು ತೆಗೆಸಲು ಯತ್ನಿಸಿತಾದರೂ, ವಿಫಲವಾಯಿತು. ಆದರೆ, ಹಿಂದೂ ಭಾವನೆಗೆ ವಿರುದ್ಧವಾಗಿ ಬಾಗಿಲಿಗೆ ಬೀಗ ಜಡಿಯಲಾಯಿತು. ಅರ್ಚಕರೋರ್ವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಯಿತು.
ಸಾಧು-ಸಂತರ ಯತ್ನ: 1983 ಮಾರ್ಚ್ 6ರಂದು ಮುಜಾಫರ್ ನಗರದಲ್ಲಿ ನಡೆದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ದಾವುದಯಾಳ ಖನ್ನಾ ಮುಂದಿಟ್ಟ ಕಾಶಿ, ಅಯೋಧ್ಯೆ, ಮಥುರಾ ವಿಮುಕ್ತಿಯ ಸಂಕಲ್ಪಕ್ಕೆ ಸಂತರ ಸಮ್ಮುಖದಲ್ಲಿ ಸಮ್ಮತಿ ದೊರೆಯಿತು. ದೆಹಲಿಯ ವಿಜ್ಞಾನಭವನದಲ್ಲಿ 1984 ಏಪ್ರಿಲ್ 7 ಮತ್ತು 8ರಂದು ನಡೆದ ಪ್ರಥಮ ಧರ್ಮಸಂಸತ್ತಿನ ಅಧಿವೇಶನದಲ್ಲಿ ಅಯೋಧ್ಯೆಯ ಮುಕ್ತಿಗೆ ಪ್ರಥಮಾದ್ಯತೆ ನೀಡಲು ನಿರ್ಧರಿಸಲಾಯಿತು. 1984 ಅಕ್ಟೋಬರ್ 7ರಂದು ಸರಯೂ ನದಿತೀರದಲ್ಲಿ ಸಹಸ್ರಾರು ರಾಮಭಕ್ತರು ಶ್ರೀರಾಮಜನ್ಮಭೂಮಿ ಮುಕ್ತಿಗೆ ಸಂಕಲ್ಪಗೈದರು. ಮರುದಿನವೇ ಸಾಧುಸಂತರು ಸರ್ಕಾರದ ಮೇಲೆ ಒತ್ತಡ ಹೇರಲು ಲಖನೌನವರೆಗೆ ಪಾದಯಾತ್ರೆ ನಡೆಸಿ, ಅ.14ರಂದು ಮನವಿ ಸಲ್ಲಿಸಿದರು. 1985 ಅಕ್ಟೋಬರ್ 23ರಂದು (ವಿಜಯದಶಮಿ) ಹಿಂದೂ ಜನಜಾಗೃತಿಗಾಗಿ ಉತ್ತರಪ್ರದೇಶದಲ್ಲಿ ಆರು ಮತ್ತು ಬಿಹಾರದಲ್ಲಿ ಮೂರು ರಾಮ ಜಾನಕಿ ರಥಗಳು ಸಂಚಾರ ಆರಂಭಿಸಿದವು.
ರಾಮನವಮಿ ಸಂಭ್ರಮ: 1987 ಏಪ್ರಿಲ್ 14ರಂದು ಅಯೋಧ್ಯೆಯಲ್ಲಿ ಶ್ರೀರಾಮ ನವಮಿ ‘ನ ಭೂತೋ’ ಎಂಬಂತೆ ನಡೆಯಿತು. ಅದೇ ತಿಂಗಳ 29ರಂದು ಅಯೋಧ್ಯೆಯಲ್ಲಿ 3 ಲಕ್ಷ ಹಿಂದೂಗಳ ಬೃಹತ್ ಸಭೆ ನಡೆದು, ಜನ್ಮಭೂಮಿ ಮತ್ತು ತಡೆಹಿಡಿದ ರಾಮಜಾನಕಿ ರಥಯಾತ್ರೆಗಳನ್ನು ಬಂಧಮುಕ್ತಗೊಳಿಸಲು ಕರೆ ನೀಡಲಾಯಿತು. 1988ರ ಅಕ್ಟೋಬರ್​ನಲ್ಲಿ ಸರ್ಕಾರ ರಾಮಜಾನಕಿ ರಥಗಳನ್ನು ಮರಳಿಸಿತು. 1989 ನವೆಂಬರ್ 9ರಂದು ಮಧ್ಯಾಹ್ನ 1.55ಕ್ಕೆ ಶ್ರೀರಾಮ ಮಂದಿರದ ಶಿಲಾನ್ಯಾಸ ಜರುಗಿತು
ವಿವಾದಿತ ಕಟ್ಟಡ ಧ್ವಂಸ : 1992ರಲ್ಲಿ ಅಯೋಧ್ಯೆಯಲ್ಲಿ ಎರಡನೇ ಬಾರಿಗೆ ಕರಸೇವೆ ಆಯೋಜಿಸಲಾಯಿತು. ಈ ಕರಸೇವೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 4ರಂದೇ ಅಯೋಧ್ಯೆಯಲ್ಲಿ ಲಕ್ಷಾಂತರ ರಾಮಭಕ್ತರು ಜಮಾಯಿಸಿದ್ದರು. ಡಿ.6ರಂದು ನಿಗದಿಯಂತೆ ಕರಸೇವೆ ನಡೆಯುತ್ತಿತ್ತು. ಅಂದು ಪೂರ್ವಾಹ್ನ 11 ಗಂಟೆಯವರೆಗೂ ಎಲ್ಲ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುತ್ತಿದ್ದವು, ನಿಗದಿಯಂತೆ ವಿಹಿಂಪ ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಅಷ್ಟೊತ್ತಿಗಾಗಲೇ ಕೆಲ ಯುವ ಕರಸೇವಕರು ವಿವಾದಿತ ಬಾಬ್ರಿ ಕಟ್ಟಡದ ಗುಂಬಜನ್ನು ಏರಿ ನೋಡುನೋಡುತ್ತಿದ್ದಂತೆ ಅದನ್ನು ಧ್ವಂಸಗೊಳಿಸಿದರು. ಇದರಿಂದ ಭಾವೋದ್ರೇಕಕ್ಕೆ ಒಳಗಾದ ಸಾವಿರಾರು ಕಾರ್ಯಕರ್ತರು ಕೆಲ ಹೊತ್ತಲ್ಲೇ ವಿವಾದಿತ ಕಟ್ಟಡವನ್ನು ಇಡಿಯಾಗಿ ನೆಲಸಮ ಮಾಡಿದ್ದರು. ಇತ್ತ ಲಾಲಕೃಷ್ಣ ಆಡ್ವಾಣಿ, ಸಾಧಿ್ವ ಉಮಾಭಾರತಿ ಸೂಚನೆ ನೀಡುತ್ತಿದ್ದರೂ ಅದಕ್ಕೆ ಕಿವಿಗೊಡದೆ ಕರಸೇವಕರ ಪಡೆ ಸಂಜೆ 7 ಗಂಟೆ ಹೊತ್ತಿಗೆ ಆ ಕಟ್ಟಡವನ್ನು ಧ್ವಂಸಗೊಳಿಸಿಯೇ ನಿರಾಳವಾಯಿತು.
ಸಾಹಿತ್ಯದಲ್ಲಿ ಉಲ್ಲೇಖ: ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಬಾಡ್ಲಿಯನ್ ಗ್ರಂಥಾಲಯದಲ್ಲಿ ಕಾಯ್ದಿರಿಸಿದ್ದ ‘ಅಯೋಧ್ಯಾ ಮಹಾತ್ಮ್ಯ’ದ ಹಸ್ತಪ್ರತಿ ಹಲವು ಮಹತ್ವದ ಮಾಹಿತಿಗಳನ್ನು ಒಳಗೊಂಡಿದೆ. ಸಂಶೋಧಕರಾದ ಹನ್ಸ್ ಬಕ್ಕರ್ 1986ರಲ್ಲಿ ‘ಅಯೋಧ್ಯಾ’ ಕೃತಿಯಲ್ಲಿ ಈ ಹಸ್ತಪ್ರತಿಯನ್ನು ಉಲ್ಲೇಖಿಸಿದ್ದಾರೆ. ಅಯೋಧ್ಯಾ ಮಹಾತ್ಮೆಯಲ್ಲಿ ಪಾರ್ವತಿ ಶಿವನನ್ನು ಅಯೋಧ್ಯೆಯಲ್ಲಿದ್ದ ಒಂದು ಕಟ್ಟಡದ ಕುರಿತಂತೆ ಪ್ರಶ್ನಿಸುತ್ತಾಳೆ. ಈ ಕಟ್ಟಡವೇ ಸೀತೆಯ ಅಡುಗೆಮನೆ! ‘ಸೀತೆಯ ಅಡುಗೆಮನೆಯ ವೈಶಿಷ್ಟ್ಯವೇನು’ ಎಂಬ ಪಾರ್ವತಿಯ ಪ್ರಶ್ನೆಗೆ ಶಿವ, ಸದಾ ಆಹಾರವಸ್ತುಗಳಿಂದಲೇ ತುಂಬಿರುವ ಅಡುಗೆಮನೆಯದು ಎಂತಲೂ ಅದರ ದರ್ಶನಮಾತ್ರದಿಂದಲೇ ಎಲ್ಲ ಬಗೆಯ ವಾಂಛೆಗಳಿಂದ ವ್ಯಕ್ತಿ ಮುಕ್ತನಾಗುತ್ತಾನೆ ಎಂತಲೂ ಹೇಳುತ್ತಾನೆ. ಕ್ಷತ್ರಿಯರನ್ನು ಕೊಂದ ಪಾಪದಿಂದ ಪರಶುರಾಮ ಬಿಡುಗಡೆ ಹೊಂದಿದ್ದೂ ಇದರಿಂದಲೇ ಎಂಬುದನ್ನೂ ಹೇಳುತ್ತಾನೆ. ಈ ಸೀತೆಯ ಅಡುಗೆಮನೆ ರಾಮ ಹುಟ್ಟಿದ ಸ್ಥಳದ ವಾಯವ್ಯ ದಿಕ್ಕಿನಲ್ಲಿದೆ ಎಂಬ ಮಾಹಿತಿಯನ್ನೂ ಶಿವ ಕೊಡುತ್ತಾನೆ. ಈ ಸೀತೆಯ ಅಡುಗೆಮನೆ ಅಥವಾ ಸೀತಾ ರಸೋಯಿ 1992ರ ಡಿಸೆಂಬರ್ 6ರಂದು ಅಲ್ಲಿದ್ದ ಮಸೀದಿಯಂತಹ ಕಟ್ಟಡವೊಂದನ್ನು ಉರುಳಿಸುವವರೆಗೂ ಇತ್ತು. ಅಯೋಧ್ಯಾ ಮಹಾತ್ಮೆಯ ಮುಂದಿನ ಭಾಗದಲ್ಲಿಯೇ ರಾಮ ಜನ್ಮಸ್ಥಳದ ಆಗ್ನೇಯ ದಿಕ್ಕಿನಲ್ಲಿ ಸೀತಾಕೂಪ ಎಂಬ ಹೆಸರಿನ ಬಾವಿ ಇರುವುದನ್ನು ಉಲ್ಲೇಖಿಸಲಾಗಿದೆ. ಜ್ಞಾನಕೂಪ ಎಂದೂ ಕರೆಯಲ್ಪಡುವ ಈ ಸ್ಥಳ ಈಗಲೂ ನೋಡಲು ಸಿಗುತ್ತದೆ!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − ten =
Remember me
