ಅಯೋಧ್ಯೆ:ರಾತ್ರಿ ದೃಷ್ಟಿಯ ಸಾಧನ (ನೈಟ್​ ವಿಷನ್​ ಡಿವೈಸ್​)ದಿಂದ ಹಿಡಿದು ಕೃತಕ ಬುದ್ಧಿಮತ್ತೆ ಒಳಗೊಂಡ ಸಿಸಿಟಿವಿ ಕ್ಯಾಮರೆಗಳವರೆಗೂ ನಾಳೆ ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಉತ್ತರ ಪ್ರದೇಶದ ಅಯೋಧ್ಯೆ ಭದ್ರಕೋಟೆಯಂತೆ ಸಿದ್ಧವಾಗಿದೆ. ಅಲ್ಲದೆ, ಸಾವಿರಾರು ಕೆಜಿಗಷ್ಟು ಹೂಗಳು ಹಾಗೂ ಕಲರ್​ಫುಲ್​ ಲೈಟ್​ಗಳಿಂದ ರಾಮ ಮಂದಿರವನ್ನು ಸಿಂಗರಿಸಿದ್ದು, ಧರೆಗಿಳಿದ ಕೈಲಾಸದಂತೆ ಕಾಣುತ್ತಿದೆ.
ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಆಹ್ವಾನಿತರು ಇಂದಿನಿಂದಲೇ ಆಗಮಿಸಲು ಆರಂಭಿಸಿದ್ದಾರೆ. ಒಂದು ಕಾಲದಲ್ಲಿ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ರಾಮ ಜನ್ಮಭೂಮಿ ಇದೀಗ ಹೊಸ ಮೂಲಸೌಕರ್ಯ ಮತ್ತು ಧಾರ್ಮಿಕ ಉತ್ಸಾಹದಿಂದ ಹೊಸ ಹುರುಪಿನೊಂದಿಗೆ ಕಂಗೊಳಿಸುತ್ತಿದೆ. ಭಾರತದ ರಾಜಕೀಯ ಮತ್ತು ಧಾರ್ಮಿಕ ಇತಿಹಾಸದಲ್ಲಿ ಐತಿಹಾಸಿಕ ಘಟನೆಗೆ ಅಯೋಧ್ಯೆ ಸಾಕ್ಷಿಯಾಗುತ್ತಿದೆ.
ಬಹುವರ್ಣದ ಹೂವುಗಳು ಅಯೋಧ್ಯೆ ಪಟ್ಟಣವನ್ನು ಅಲಂಕರಿಸಿವೆ ಮತ್ತು ಅಲ್ಲಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳಿಂದ ರಾಮ ನಾಮ ಜಪ ಮೊಳಗುತ್ತಿದೆ. ಭಗವಾನ್ ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನ್ ವೇಷಗಳನ್ನು ಧರಿಸಿದ ಜನರು ಅಯೋಧ್ಯೆಯ ಬೀದಿ, ಬೀದಿಗಳಲ್ಲಿ ಸಂಚರಿಸುತ್ತಿದ್ದಾರೆ.
ಹೂವಿನ ಮಾದರಿಗಳಲ್ಲಿ ‘ಜೈ ಶ್ರೀ ರಾಮ್’ ಹೆಸರನ್ನು ಚಿತ್ರಿಸುವ ವಿದ್ಯುಕ್ತ ದ್ವಾರಗಳು ಮತ್ತು ರಾತ್ರಿಯಲ್ಲಿ ಗೋಚರಿಸುವ ವಿದ್ಯುತ್​ ಪ್ರಕಾಶವು ಪ್ರಾಚೀನ ನಗರದ ಮೇಲಿನ ಸೆಳೆತವನ್ನು ಹೆಚ್ಚಿಸುತ್ತದೆ. ಇಡೀ ದೇಶವೇ ರಾಮನ ಹೆಸರನ್ನು ಜಪಿಸುತ್ತಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಅಯೋಧ್ಯೆಯ ಬೀದಿಗಳು, ಸಣ್ಣ ಮತ್ತು ದೊಡ್ಡ ಕಟ್ಟಡಗಳ ಮೇಲ್ಛಾವಣಿಗಳು ಕೇಸರಿ ಧ್ವಜಗಳಿಂದ ಮುಚ್ಚಲ್ಪಟ್ಟಿದೆ. ಲತಾ ಮಂಗೇಶ್ಕರ್ ಚೌಕ್‌ನಲ್ಲಿ ರಾಮನ ಜೊತೆಗೆ ರಾಮಮಂದಿರದ ಕಟೌಟ್‌ಗಳನ್ನು ಹಾಕಲಾಗಿದೆ. ಅಯೋಧ್ಯೆಯೂ ಕೇಸರಿಮಯವಾಗಿದ್ದು, ಎಲ್ಲಡೆ ಜೈಶ್ರೀರಾಮ್​ ಘೋಷಣೆ ಮೊಳಗುತ್ತಿದೆ.
ನಾಳಿನ ಮುಖ್ಯ ಸಮಾರಂಭವು ಮಧ್ಯಾಹ್ನ 12.20ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಬಳಿಕ ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ 7,000 ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇಡೀ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.
ನಾಳೆ ತುಂಬಾ ಭದ್ರತೆ ಸಹ ಏರ್ಪಡಿಸಲಾಗಿದೆ. ಕಣ್ಗಾವಲು ಡ್ರೋನ್‌ಗಳು, ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ನಿರಂತರವಾಗಿ ಸ್ಕ್ಯಾನ್ ಮಾಡುತ್ತಿರುತ್ತವೆ. ಅಯೋಧ್ಯೆಯ ‘ಹಳದಿ ವಲಯ’ವು ಮುಖ ಗುರುತಿಸುವ ತಂತ್ರಜ್ಞಾನದೊಂದಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾಗಳನ್ನು ಹೊಂದಿದೆ. ತುರ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಹೆಚ್ಚಿಸಲು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ. SDRF ತಂಡಗಳು ಸರಯೂ ನದಿಯಲ್ಲಿ ದೋಣಿ ಗಸ್ತು ನಡೆಸಲಿವೆ.
ಉತ್ತರ ಪ್ರದೇಶದ ವಿಶೇಷ ಭದ್ರತಾ ಪಡೆ (SSF) ಯಿಂದ ಡ್ರೋನ್-ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ. ಸಂಭಾವ್ಯ ವೈಮಾನಿಕ ಬೆದರಿಕೆಗಳ ವಿರುದ್ಧ ಹೆಚ್ಚುವರಿ ಭದ್ರತೆಯನ್ನು ಇದು ಒಳಗೊಂಡಿದೆ. ಅಯೋಧ್ಯೆಯಲ್ಲಿ ಭದ್ರತೆಯನ್ನು ಹೆಚ್ಚಿಸುವ ಸಂಘಟಿತ ಪ್ರಯತ್ನಗಳ ಭಾಗವಾಗಿ ಅಯೋಧ್ಯೆಯು ಗಣಿ ವಿರೋಧಿ ಡ್ರೋನ್‌ಗಳ ಜೊತೆಗೆ AI ಹೊಂದಿದ ಡ್ರೋನ್‌ಗಳ ಕಣ್ಗಾವಲಿನಲ್ಲಿವೆ. ಈ ಗಣಿ ವಿರೋಧಿ ಡ್ರೋನ್‌ಗಳು ನೆಲದಿಂದ ಒಂದು ಮೀಟರ್ ಎತ್ತರದಲ್ಲಿ ಹಾರುತ್ತವೆ ಮತ್ತು ಭೂಗತ ಸ್ಫೋಟಕಗಳನ್ನು ಪತ್ತೆಹಚ್ಚಲು ಸ್ಪೆಕ್ಟ್ರೋಮೀಟರ್ ತರಂಗಾಂತರ ಪತ್ತೆಯಂತಹ ಸುಧಾರಿತ ತಂತ್ರಜ್ಞಾನವನ್ನು ಹೊಂದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ರಾಮಲಲ್ಲಾ ವಿಗ್ರಹವನ್ನು ಇಂದು ದೇವಾಲಯದ ಒಳಗೆ ಇರಿಸಲಾಯಿತು. ನಾಳೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು, ಇಡೀ ದೇಶವೇ ಐತಿಹಾಸಿಕ ಕ್ಷಣಕ್ಕೆ ನಾಳೆ ಸಾಕ್ಷಿಯಾಗಲಿದೆ.(ಏಜೆನ್ಸೀಸ್​)
ಹೊಸ ಬಾಲರಾಮ ದೇವರ ವಿಗ್ರಹದ ಮುಂದೆ ಹಳೆಯ ವಿಗ್ರಹ ಇಡಲಾಗುವುದು: ರಾಮಮಂದಿರ ಟ್ರಸ್ಟ್ ಸ್ಪಷ್ಟನೆ

ಉದ್ಯಮಿ ಜತೆ ಅಫೇರ್​; ಪತಿಗೆ ಡಿವೋರ್ಸ್​ ಕೊಡಲು ಮುಂದಾದ ನಮಿತಾ!? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

ಮೂಗುತಿ ಸುಂದರಿ ಸಾನಿಯಾ ಬಗ್ಗೆ ವರ್ಷದ ಹಿಂದೆಯೇ ಫ್ರೆಂಡ್ಸ್​ ಹೇಳಿದ್ದ ಮಾತು ಕೊನೆಗೂ ನಿಜವಾಯ್ತು​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + two =
Remember me
