ಲಖನೌ:ಅಯೋಧ್ಯೆಯು ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮಾಡುವ ದೇಶದ ಮೊದಲ ವೇದ ನಗರವಾಗಿ (ವೇದಿಕ್​ ಸಿಟಿ) ರೂಪುಗೊಳ್ಳಲಿದೆ. ವೇದ ಸುಸ್ಥಿರ ನಗರ ಸೂಚ್ಯಂಕ ವೇದಿಕೆಯನ್ನು ಸೃಷ್ಟಿಸಲು ದೆಹಲಿಯ ಸಂಸ್ಥೆಯೊಂದರ ಜೊತೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಒಪ್ಪಂದಕ್ಕೆ ಸಹಿ ಮಾಡಿದೆ. ಸುಸ್ಥಿರ ಆಚರಣೆಗಳ ಅನುಷ್ಠಾನಕ್ಕೆ ಅಗತ್ಯವಾದ ರ್ನಿಣಯಗಳನ್ನು ಕೈಗೊಳ್ಳುವುದು ಇದರ ಉದ್ದೇಶವಾಗಿದೆ. ಸ್ಥಳಿಯ ಜನರ ಅವಶ್ಯಕತೆಗಳನ್ನು ನಿರ್ವಹಿಸುವುದು ಕೂಡ ಅದರ ಗುರಿಯಾಗಿದೆ.
ಸುಸ್ಥಿರ ಕ್ರಮಗಳ ಮೂಲಕ ತ್ವರಿತವಾಗಿ ಅಯೋಧ್ಯೆ ಒಟ್ಟಾರೆ ಅಭಿವೃದ್ಧಿಗಾಗಿ ಉತ್ತರ ಪ್ರದೇಶದ ಯೋಗಿ ಸರ್ಕಾರ ಈ ತಿಂಗಳ ಆರಂಭದಲ್ಲಿ ಮಂಡಳಿಯೊಂದನ್ನು ರಚಿಸಿದೆ. ಅಯೋಧ್ಯಾ ಧಾಮ ತೀರ್ಥ ವಿಕಾಸ ಪರಿಷದ್​ ಎಂದು ಅದಕ್ಕೆ ಹೆಸರಿಡಲಾಗಿದೆ. ಖಾಸಗಿ ಕಂಪನಿಯೊಂದು ಸ್ಥಳಿಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮುನಿಸಿಪಲ್​ ಕಾರ್ಪೊರೇಶನ್​ಗೆ ಡಾಟಾ ಅನಲಿಟಿಕ್ಸ್​ ಪರಿಹಾರವನ್ನು ಒದಗಿಸಲಿದೆ. ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ವಾಯು, ಜಲ ಮತ್ತು ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದು ಅದರ ಗುರಿಯಾಗಿದೆ.
ಅಯೋಧ್ಯೆಯ ಬೃಹತ್​ ರಾಮ ಮಂದಿರ ಮುಂದಿನ ವರ್ಷ ಜನವರಿಯಲ್ಲಿ ಉದ್ಘಾಟನೆಯಾದ ನಂತರ, ಮಂದಿರ ನಗರಕ್ಕೆ ಪ್ರತಿ ದಿನ ಭೇಟಿ ನೀಡುವ ಜನರ ಸಂಖ್ಯೆಯನ್ನು ಎಣಿಸುವ ವ್ಯವಸ್ಥೆಯನ್ನು ಶ್ರೀವೇ ಅಳವಡಿಸುವ ನಿರೀೆಯಿದೆ. ರಾಷ್ಟ್ರ ರಾಜಧಾನಿ ವಲಯದ (ಎನ್​ಸಿಆರ್​) ಅರ್ಹಾಸ್​ ಟೆಕ್ನಾಲಜೀಸ್​ ಎಂಬ ಖಾಸಗಿ ಕಂಪನಿಯು ಜಿಯೋ&ಸ್ಪೇಷಿಯಲ್​ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಎಐ ಆಧಾರಿತ ವೇದಿಕೆಗಳನ್ನು ರೂಪಿಸುವಲ್ಲಿ ನಿಪುಣತೆ ಹೊಂದಿದೆ.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:3 × three =
Remember me
