ನವದೆಹಲಿ:ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಭವ್ಯ ಉದ್ಘಾಟನಾ ಸಮಾರಂಭಕ್ಕೆ ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಾಜರಾಗಲಿದ್ದಾರೆ. ಪ್ರಮುಖವಾಗಿ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್, ರಜನಿಕಾಂತ್, ಸಂಜಯ್ ಲೀಲಾ ಬನ್ಸಾಲಿ, ಚಿರಂಜೀವಿ, ಧನುಷ್ ಮತ್ತು ರಿಷಬ್ ಶೆಟ್ಟಿಗೆ ಮೊದಲೇ ಆಹ್ವಾನ ಬಂದಿದೆ.
ಇದನ್ನೂ ಓದಿ: ಕೊನೆಗೂ ಮುಂಬೈ ತಲುಪಿದ ವಿಮಾನ: 276 ಪ್ರಯಾಣಿಕರು ವಾಪಸ್​- 27 ಭಾರತೀಯರು ಇನ್ನೂ ಫ್ರಾನ್ಸ್‌ನಲ್ಲಿರುವುದೇಕೆ?
ಈಗ ಬಾಲಿವುಡ್ ಮತ್ತು ದಕ್ಷಿಣ ಚಲನಚಿತ್ರೋದ್ಯಮದಿಂದ ಆಹ್ವಾನಿತರ ದೃಢೀಕೃತ ಹೆಸರುಗಳ ಮುಂದಿನ ಪಟ್ಟಿಯಲ್ಲಿ ಬಾಲಿವುಡ್‌ನಿಂದ ರಣಬೀರ್ ಕಪೂರ್, ಆಲಿಯಾ ಭಟ್, ಅಜಯ್ ದೇವಗನ್, ಸನ್ನಿ ಡಿಯೋಲ್, ಟೈಗರ್ ಶ್ರಾಫ್ ಮತ್ತು ಆಯುಷ್ಮಾನ್ ಖುರಾನಾ ಅವರನ್ನು ಆಹ್ವಾನಿಸಲಾಗಿದೆ. ಅದೇ ರೀತಿ ದಕ್ಷಿಣದ ಪ್ಯಾನ್ ಇಂಡಿಯಾ ಸ್ಟಾರ್ಗಳಾದ ಪ್ರಭಾಸ್ ಮತ್ತು ಯಶ್ ಅವರನ್ನು ಐತಿಹಾಸಿಕ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಉತ್ತರ ಪ್ರದೇಶದ ಧಾರ್ಮಿಕ ಪಟ್ಟಣ ಅಯೋಧ್ಯೆಯಲ್ಲಿ ಜನವರಿ 22 ರಂದು ಭವ್ಯ ದೇವಾಲಯದಲ್ಲಿ ರಾಮ ಲಲ್ಲಾ(ಶ್ರೀರಾಮಚಂದ್ರ)ನ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ. ಬಳಿಕ ನಡೆಯಲಿರುವ ಸಮಾರಂಭವು ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಲಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾರಂಭಕ್ಕೆ 4,000 ಸಂತರನ್ನು ಟ್ರಸ್ಟ್ ಆಹ್ವಾನಿಸಿದೆ.
ಕರ್ನಾಟಕದಿಂದ ಎರಡು ಕಲ್ಲುಗಳಿಂದ ಕೆತ್ತಲಾಗಿರುವ ಮೂರು ವಿಗ್ರಹಗಳಲ್ಲಿ ಒಂದನ್ನು ಮತ್ತು ರಾಜಸ್ಥಾನದಿಂದ ತರಿಸಲಾಗಿರುವ ಒಂದನ್ನು ದೇವಾಲದಲ್ಲಿ ಇರಿಸಲಾಗಿದೆ. ಜನವರಿ ಮೊದಲ ವಾರ ಗರ್ಭಗುಡಿಯಲ್ಲಿ ಮೂರು ಶಿಲೆಗಳಲ್ಲಿ ಉತ್ತಮವಾದ ಒಂದು ಮೂರ್ತಿಯನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಅಯೋಧ್ಯೆ ರಾಮಮಂದಿರಕ್ಕೆ ಹೈದರಾಬಾದ್​ನಲ್ಲಿ ತಯಾರಾಗುತ್ತಿದೆ ಬಾಗಿಲುಗಳು: ವಿಶೇಷತೆ ಹೀಗಿದೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 − 1 =
Remember me
