ನವದೆಹಲಿ:ಎಂಬಿಬಿಎಸ್‌ ವೇತನವನ್ನು ಪಡೆಯಲು ಆಯುರ್ವೇದ ವೈದ್ಯರೂ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.
ಎಂಬಿಬಿಎಸ್‌ ವೈದ್ಯರಷ್ಟೇ ಸಮಾನವಾಗಿ ಆಯುರ್ವೇದ ಡಾಕ್ಟರ್​​​ಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ.
ಗುಜರಾತ್​ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಮಸುಬ್ರಮಣಿಯನ್​ ಹಾಗೂ ಪ,ಮಕಜ್​ ಮಿತ್ತಲ್​ ಅವರಿದ್ದ ದ್ವಿ ಸದಸ್ಯ ಪೀಠವು ಎರಡು ವರ್ಗದ ವೈದ್ಯರು ಸಮಾನ ವೇತನಕ್ಕೆ ಅರ್ಹರೆಂದು ಪರಿಗಣಿಸಲು ಕೆಲಸವನ್ನು ಸಮಾನವಾಗಿ ಮಾಡುತ್ತಿಲ್ಲ ಎಂದು ಅಂಶವನ್ನು ನಾವು ಮರೆಯಬಾರದು.
ಪ್ರತಿಯೋಂದು ಔಷಧಿಗೂ ತನ್ನದೇ ಆದ ಸ್ಥಾನ ಇರುತ್ತದೆ ಮತ್ತು ದೇಶದಲ್ಲಿ ಇದಕ್ಕೆ ಪ್ರಚಾರ ಮಾಡಬೇಕು. ಎರಡು ವಿಭಾಗಗಳ ಮೆಡಿಸಿನ್‌ ಅಭ್ಯಾಸ ಮಾಡುವವರನ್ನು ಸಂಬಳದ ವಿಷಯದಲ್ಲಿ ಸಮಾನವಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಪೀಠ ಹೇಳಿದೆ.
ಇದನ್ನೂಓದಿ:ಕುಡಿಯುವುದಕ್ಕೆ ಹಣ ಕೊಡಲು ನಿರಾಕರಣೆ; ಇಟ್ಟಿಗೆಯಿಂದ ತಂದೆಯನ್ನು ಹತ್ಯೆ ಮಾಡಿದ ಮಗ
ಸರ್ಕಾರಿ ಆಸ್ಪತ್ರೆಗಳಲ್ಲಿನ ಎಂಬಿಬಿಎಸ್ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ನಡೆಸುವಂತಹ ಶಾಸನಬದ್ಧ ಕರ್ತವ್ಯವನ್ನು ನಿರ್ವಹಿಸಬೇಕು. ಆದರೆ, ಆಯುರ್ವೇದ ವೈದ್ಯರಿಗೆ ಇದನ್ನು ಮಾಡಲು ಅನುಮತಿಸಲಾಗುವುದಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ಎಂಬಿಬಿಎಸ್‌ ವೈದ್ಯರು ನೂರಾರು ಓಪಿಡಿ ರೋಗಿಗಳನ್ನುಅಟೆಂಡ್‌ ಮಾಡಬೇಕು. ಆದರೆ ಆಯುರ್ವೇದ ವೈದ್ಯರಿಗೆ ಹಾಗಲ್ಲ ಎಂದು ಸುಪ್ರೀಂಕೋರ್ಟ್‌ ಉಲ್ಲೇಖಿಸಿದೆ.
ಆಯುರ್ವೇದ ವೈದ್ಯರು ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಶಸ್ತ್ರಚಿಕಿತ್ಸಕರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ MBBS ವೈದ್ಯರು ಸಹಾಯ ಮಾಡಬಹುದು.
ಆಯುರ್ವೇದ ವೈದ್ಯರು ಕೂಡ ಎಂಬಿಬಿಎಸ್‌ ವೈದ್ಯರಂತೆ ಟಿಕ್ಕು ವೇತನ ಆಯೋಗದ ಶಿಫಾರಸಿನಂತೆ ವೇತನ ಪ್ರಯೋಜನಗಳನ್ನು ಪಡೆಯಲು ಅರ್ಹರು ಎಂದು 2013ರಲ್ಲಿ ಗುಜರಾತ್​ ಹೈ ಕೋರ್ಟ್​ ನೀಡಿ್ದ ತೀರ್ಪನ್ನು ಸುಪ್ರೀಂ ಕೋರ್ಟ್​ ತರಿಸ್ಕರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 14 =
Remember me
