ಚೆನ್ನೈ:ತಮ್ಮ ಮನೆಯಲ್ಲೇ ಆರ್ಯವೇದಿಕ್​ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ದಂಪತಿಯನ್ನು ಕ್ಷುಲಕ ಕಾರಣಕ್ಕೆ ಸಿಟ್ಟಿಗೆದ್ದ ರೋಗಿಯೊಬ್ಬ, ಬರ್ಬರವಾಗಿ ಹತ್ಯೆಗೈದ ಘಟನೆ ಚೆನ್ನೈನ ಗಾಂಧಿನಗರದ, ಮಿಟ್ಟನಮಲ್ಲಿಯಲ್ಲಿ ವರದಿಯಾಗಿದೆ. ನಗರದಲ್ಲಿ ಬಹಳ ಪ್ರಖ್ಯಾತಿ ಹೊಂದಿದ್ದ ಈ ವೈದ್ಯ ಜೋಡಿಯ ಬಳಿ ಬರುತ್ತಿದ್ದ ರೋಗಿಗಳಿಗೆ ಇದೀಗ ದಂಪತಿಗಳ ಕೊಲೆ ಘಟನೆ ಬೆಚ್ಚಿಬೀಳಿಸಿದೆ.
ಇದನ್ನೂ ಓದಿ:ಇಂದಿನಿಂದ ಸಮುದಾಯ ಜೀವನ ಶಿಬಿರ: ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯದಿಂದ ತುಂಬಕೆರೆಯಲ್ಲಿ ಮೂರು ದಿನ ಆಯೋಜನೆ..!
ಶಿವನ್ ನಾಯರ್ (72) ಮತ್ತು ಪ್ರಸನ್ನ ಕುಮಾರಿ (62) ಎಂಬ ಆಯುರ್ವೇದಿಕ್​ ದಂಪತಿಯನ್ನು ಅವರ ಮನೆಯಲ್ಲೇ ರೋಗಿಯೊಬ್ಬ ಭೀಕರವಾಗಿ ಹತ್ಯೆಗೈದು, ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಆರೋಪಿ ಮಾಗೇಶ್​ನನ್ನು ಇದೀಗ ಪೊಲೀಸರು ಬಂಧಿಸಿದ್ದು, ಕೊಲೆ ಮಾಡಲು ಉದ್ದೇಶವೇನು? ಎಂದು ಕೇಳಿದ್ದಕ್ಕೆ, ಆತ ಕೊಟ್ಟ ಕಾರಣ ಕೇಳಿ ಶಾಕ್ ಆಗಿದ್ದಾರೆ.
ಘಟನೆಯ ವಿವರ:ಆರೋಪಿ ಮಾಗೇಶ್ 2019ರಿಂದ ವೈದ್ಯ ಜೋಡಿಯ ಬಳಿ ತನಗಿದ್ದ ಗ್ಯಾಸ್ಟ್ರಿಕ್ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ. ಕ್ಲಿನಿಕ್​ ಸಮಯವನ್ನು ಬಿಟ್ಟು, ಬೇರೆ ಸಮಯದಲ್ಲಿ ಮನೆಗೆ ಬಂದು ಔಷಧಿ ಕೇಳುವುದು, ಸುಖಾಸುಮ್ಮನೆ ಜಗಳ ಮಾಡುವುದು ಮಾಡುತ್ತಿದ್ದನು ಎಂದು ಮೃತ ಪ್ರಸನ್ನ ಕುಮಾರಿ, ಈ ಹಿಂದೆಯೇ ತಮ್ಮ ಮಗನಿಗೆ ತಿಳಿಸಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ:ಕಾರ್ಯಕ್ರಮ ಆಯೋಜಕರ ಮಹಾ ಎಡವಟ್ಟು: ವೇದಿಕೆ ಮೇಲೆಯೇ ಕಣ್ಣೀರಿಟ್ಟ ನವ್ಯಾ ನಾಯರ್​!
ಸದ್ಯ ಆರೋಪಿ ಮಾಗೇಶ್​ನನ್ನು ಕಸ್ಟಡಿಯಲ್ಲಿ ಬಂಧಿಸಿರುವ ಪೊಲೀಸರು, ಹತ್ಯೆಗೆ ಕಾರಣವೇನು ಎಂದಿದ್ದಕ್ಕೆ, ಅವರು ಇತರೆ ರೋಗಿಗಳ ಮುಂದೆ ನನ್ನನ್ನು ಅವಮಾನ ಮಾಡಿ, ಅಲ್ಲಿಂದ ಕಳಿಸಿದ್ರು, ಅದನ್ನು ಸಹಿಸಲಾರದೆ ದಂಪತಿಗಳನ್ನು ಕೊಲೆ ಮಾಡಿದೆ ಎಂದು ಆತ ಹೇಳಿಕೊಂಡಿದ್ದಾನೆ. ಘಟನೆಯಿಂದ ತೀವ್ರ ಮನನೊಂದ ಗ್ರಾಮಸ್ಥರು, ದಂಪತಿಗಳು ಯಾರೊಬ್ಬರಿಗೂ ನೋವು ಮಾಡದವರು. ತಮ್ಮ ರೋಗಿಗಳೊಡನೆ ಬಹಳ ಸಜ್ಜನಿಕೆಯಿಂದ, ಸರಳತೆಯಿಂದಲೇ ಮಾತನಾಡಿಸುತ್ತಿದ್ದರು. ಅಂತವರಿಗೆ ಇಂತಹ ಪರಿಸ್ಥಿತಿ ಬಂದಿದ್ದು, ತೀವ್ರ ಆಘಾತ ಉಂಟುಮಾಡಿದೆ. ಆರೋಪಿಗೆ ತಕ್ಕ ಶಿಕ್ಷೆ ವಿಧಿಸಿ ಎಂದು ಮನವಿ ಮಾಡಿದ್ದಾರೆ,(ಏಜೆನ್ಸೀಸ್).
ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fifteen =
Remember me
