ನವದೆಹಲಿ:ಪತಂಜಲಿ ಸಂಸ್ಥೆಯ ಕರೊನಿಲ್​ ಕಿಟ್ ಅದೆಷ್ಟರ ಮಟ್ಟಿಗೆ ವಿವಾದ ಸೃಷ್ಟಿಸಿದೆ ಎಂಬುದು ಇಡೀ ದೇಶವೇ ನೋಡಿದೆ. ಯೋಗ ಗುರು ಬಾಬಾ ರಾಮ್​ ದೇವ್​, ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ.
ಅದಾದ ಬಳಿಕ ಇಂದು ಸುದ್ದಿಗೋಷ್ಠಿ ನಡೆಸಿದ ಬಾಬಾ ರಾಮ್​ ದೇವ್​ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದರು. ನಮ್ಮ ಪತಂಜಲಿ ಸಂಸ್ಥೆ ಮತ್ತು ಆಯುಷ್​ ಇಲಾಖೆ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಇವತ್ತಿನಿಂದಲೇ ಕರೊನಿಲ್​ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಿದ್ದರು.ಇದನ್ನೂ ಓದಿ:ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಪತಂಜಲಿಯ ‘ಕರೊನಿಲ್’​: ಬಾಬಾ ರಾಮ್​ದೇವ್​
ಕರೊನಿಲ್​ಗೆ ಈ ಹಿಂದೆ ತಡೆ ನೀಡಿದ್ದ ಆಯುಷ್​ ಇಲಾಖೆ ಇಂದು ಅದರ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ ಒಂದು ಷರತ್ತನ್ನೂ ವಿಧಿಸಿದೆ. ಕರೊನಿಲ್​ನಿಂದ ಕರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ಪ್ರಚಾರ ಮಾಡಬಾರದು. ಬದಲಿಗೆ ಕರೊನಿಲ್​ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಮಾರಾಟ ಮಾಡಬೇಕು ಎಂದು ಆಯುಷ್​ ಇಲಾಖೆ ಹೇಳಿದೆ.
ಈ ಬಗ್ಗೆ ಸಚಿವಾಲಯವೇ ಸ್ಪಷ್ಟಪಡಿಸಿದ್ದು, ಪತಂಜಲಿ ಸಂಸ್ಥೆ ಕರೊನಿಲ್​ ಔಷಧಿಯನ್ನು ಮಾರಾಟ ಮಾಡಬಹುದು. ಆದರೆ ಅದು ಕೊವಿಡ್​-19 ನಿವಾರಣೆ ಮಾಡುತ್ತದೆ ಎಂದು ಪ್ರತಿಪಾದಿಸಬಾರದು. ಇಮ್ಯೂನಿಟಿ ಬೂಸ್ಟರ್​ ಎಂದೇ ಹೇಳಬೇಕು ಎಂದು ತಿಳಿಸಿದೆ.ಕರೊನಿಲ್​ ಮಾತ್ರೆಗಳ ಕ್ಲಿನಿಕಲ್​ ಟೆಸ್ಟ್​ನ ದಾಖಲೆಗಳನ್ನು ಪತಂಜಲಿ ಸಂಸ್ಥೆ ಆಯುಷ್​ ಇಲಾಖೆಗೆ ಸಲ್ಲಿಸಿತ್ತು. (ಏಜೆನ್ಸೀಸ್​)
ಕರೊನಾ ಔಷಧ ಖರೀದಿ ಕುರಿತ ಟ್ರಂಪ್‌ ಈ ಹೇಳಿಕೆಗೆ ನಲುಗಿದ ವಿಶ್ವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
