ನವದೆಹಲಿ:ಬಡ ಹಾಗೂ ಅರ್ಹ ಕುಟುಂಬಗಳ ಆರೋಗ್ಯದ ದೃಷ್ಟಿಯಿಂದ 2018ರ ಸೆಪ್ಟೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನಾ- ಆಯುಷ್ಮಾನ್ ಭಾರತ್’ ಯೋಜನೆ ಇನ್ನೂ ಎರಡು ವರ್ಷ ಪೂರೈಸಿಲ್ಲ. ಆದರೆ ಈ ಅಲ್ಪ ಅವಧಿಯಲ್ಲಿಯೇ ಒಂದು ಕೋಟಿಗೂ ಮಿಕ್ಕಿ ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ಅವರು, ಟ್ವೀಟ್​ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಈ ಯೋಜನೆಯು ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ. ಇದು ವಿಶ್ವ ಅತಿ ದೊಡ್ಡ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆ ಒಂದು ಕೋಟಿ ಜನರನ್ನು ತಲುಪಿರುವುದು ತುಂಬಾ ಸಂತೋಷದ ವಿಷಯ ಎಂದಿರುವ ಪ್ರಧಾನಿ, ಈ ಯೋಜನೆಯ ಫಲಾನುಭವಿಗಳ ಕುಟುಂಬ ಆರೋಗ್ಯದಾಯಕವಾಗಿರಲಿ ಎಂದು ಪ್ರಾರ್ಥಿಸಿದ್ದಾರೆ. ಜನತೆಗೆ, ಈ ಯೋಜನೆಯ ಭಾಗವಾಗಿರುವ ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಅಸಾಧ್ಯ ಎಂದು ಸರ್ಕಾರವೇ ಕೈಚೆಲ್ಲಿದಾಗ, ಈ ಅಪ್ಪ-ಮಗ ಮಾಡಿ ತೋರಿಸಿದರೊಂದು ಅದ್ಭುತ!
ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಚಿಕಿತ್ಸೆ ಪಡೆದುಕೊಳ್ಳಬಹುದಾದ ಈ ಯೋಜನೆಯಿಂದಾಗಿ ದೇಶದ ಜನರಲ್ಲಿ ಭರವಸೆ ಮೂಡಿದೆ. ಈ ಬಗ್ಗೆ ನಾನು ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಫಲಾನುಭವಿಗಳ ಜತೆ ನಡೆದ ಮಾತುಕತೆಯಲ್ಲಿ ತಿಳಿದುಬಂದಿದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಯೋಧರೊಬ್ಬರ ಪತ್ನಿಗೆ ಪ್ರಧಾನಿಯವರು ಕರೆ ಮಾಡಿ ಅಭಿನಂದನೆ ಸಲ್ಲಿಸುವಾಗ ಅವರು ಕಣ್ಣೀರಾದರು. ಮೇಘಾಲಯದ ನಿವಾಸಿಯಾಗಿರುವ ಪೂಜಾ ಥಾಪಾ , ಫಲಾನುಭವಿ ಸಂಖ್ಯೆ- ಒಂದು ಕೋಟಿ. ಲಾಕ್​ಡೌನ್​ ಹಿನ್ನೆಲೆಯಲ್ಲಿ ತಾನು ಇವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿ ಅವರ ಅನುಭವ ಪಡೆದುಕೊಂಡಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ:ಕಾಶ್ಮೀರದ ವಿಚಾರದಲ್ಲಿ ಪಾಕ್​ ಜತೆ ನಾವಿಲ್ಲ, ಇತ್ತ ತಲೆನೇ ಹಾಕಲ್ಲ ಎಂದ ತಾಲೀಬಾನ್​: ಪಾಕಿಸ್ತಾನಕ್ಕಾಯ್ತು ಭಾರಿ ಮುಖಭಂಗ!
ಶಿಲ್ಲಾಂಗ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಪೂಜಾ, ಆಯುಷ್ಮಾನ್ ಭಾರತ್ ಯೋಜನೆ ತಮಗೆ ಹೇಗೆ ಸಹಾಯ ಮಾಡಿತು ಎಂದು ಭಾವುಕರಾಗಿ ನುಡಿದಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಪತಿ ಪಣಿಪುರಕ್ಕೆ ಬರಬೇಕಾಯಿತು. ಇದೇ ಸಂದರ್ಭದಲ್ಲಿ ನನಗೆ ಚಿಕಿತ್ಸೆ ಆಗಬೇಕಿತ್ತು. ಆದರೆ ಶಸ್ತ್ರಚಿಕಿತ್ಸೆ, ಔಷಧಿ ಯಾವುದಕ್ಕೂ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಸಾಲ ಮಾಡುವುದು ಕೂಡ ಕಷ್ಟವಾಗಿತ್ತು. ಅದಾಗಲೇ ಆಯುಷ್ಮಾನ್ ಭಾರತ್ ಯೋಜನೆಯಿಂದ ನನ್ನ ಕಷ್ಟವೆಲ್ಲಾ ದೂರವಾಯಿತು, ನಿಶ್ಚಿಂತೆಯಿಂದ ಇದ್ದೇನೆ. ನನ್ನಂಥ ಕೋಟ್ಯಂತರ ಮಂದಿಗೆ ಉಪಕಾರ ಆಗುತ್ತಿರುವ ಈ ಯೋಜನೆಯನ್ನು ಎಷ್ಟು ಹೊಗಳಿದರೂ ಸಾಲದು ಎಂದು ಪೂಜಾ ಕಣ್ಣೀರುಸುರಿಸಿದ್ದಾರೆ.
ಏನಿದು ಯೋಜನೆ: ಈ ಯೋಜನೆ ಮೂಲಕ ವಾರ್ಷಿಕವಾಗಿ ಫಲಾನುಭವಿ ಕುಟುಂಬಕ್ಕೆ 5 ಲಕ್ಷ ರೂಪಾಯಿವರೆಗೂ ವೈದ್ಯಕೀಯ ನೆರವು ಸಿಗುತ್ತದೆ. 10 ಕೋಟಿ ಬಡ ಕುಟುಂಬಗಳಿಗೆ ಇದರಿಂದ ನೆರವಾಗುವ ಉದ್ದೇಶವನ್ನು ಯೋಜನೆ ಹೊಂದಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿ ಪ್ರತಿಯೊಂದು ರೋಗಕ್ಕೂ ಒಂದು ದರ ನಿಗದಿಪಡಿಸಲಾಗಿದೆ. ಈ ದರ ಪಟ್ಟಿಯಂತೆ ನೇರವಾಗಿ ಆಸ್ಪತ್ರೆಗಳಿಗೆ ಹಣ ಪಾವತಿಯಾಗುತ್ತದೆ.
ಇದನ್ನೂ ಓದಿ:ಮಠದಲ್ಲಿ ಕಳ್ಳತನಕ್ಕೆ ಯತ್ನ- ತಡೆಯಲು ಯತ್ನಿಸಿದ ಗಂಗಾಧರ ಸ್ವಾಮೀಜಿ ಮೇಲೆ ತೀವ್ರ ಹಲ್ಲೆ: ಆಸ್ಪತ್ರೆಗೆ ದಾಖಲು
ಮೊದಲ ಹಂತವಾಗಿ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಮೊದಲ ಹಂತದಲ್ಲಿ ಈ ಯೋಜನೆ ಛತ್ತೀಸ್​​ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ದಮನ್ ಮತ್ತು ದಿಯು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜಾರಿಯಾಗಿದೆ.(ಏಜೆನ್ಸೀಸ್​)
It would make every Indian proud that the number of Ayushman Bharat beneficiaries has crossed 1 crore. In less than two years, this initiative has had a positive impact on so many lives. I congratulate all the beneficiaries and their families. I also pray for their good health.
— Narendra Modi (@narendramodi)May 20, 2020

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 − 1 =
Remember me
