ಕೋಲ್ಕತ್ತಾ:ಆರ್​ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಈ ಅಮಾನವೀಯತೆ ಘಟನೆಯನ್ನು ಖಂಡಿಸಿ ಕವಿತೆ ಬರೆದು ಓದಿದ್ದಾರೆ. ಇದರ ವೀಡಿಯೋ ಮನ ಕಲಕುವಂತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.
ಇದನ್ನೂ ಓದಿ:ಬಾಂಗ್ಲಾ ಹಿಂದೂಗಳಿಗೆ ಭದ್ರತೆ ನೀಡಲು ಬಯಸ್ತಾರೆ ಭಾರತೀಯರು: ಪ್ರಧಾನಿ ಮೋದಿ
”ನಾನು ಹುಡುಗನಾಗಿದ್ದರೆ ರೂಮಿನ ಬಾಗಿಲು ಹಾಕದೆ ಮಲಗಬಹುದು, ನಿರಾಳವಾಗಿ ಓಡಬಹುದು, ರಾತ್ರಿಯೆಲ್ಲಾ ಸ್ನೇಹಿತರ ಜೊತೆ ನಿರ್ಭಯವಾಗಿ ತಿರುಗಾಡಬಹುದು. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಎಲ್ಲರು ಹೇಳುತ್ತಾರೆ. ತೀರಾ ಕಷ್ಟಪಟ್ಟು ಓದಿ ವೈದ್ಯೆಯಾದರೂ, ಕಣ್ಣುರೆಪ್ಪೆಯನ್ನು ರಕ್ಷಿಸಿಕೊಳ್ಳುವಂತೆ ಸದಾ ಜಾಗೃತಳಾಗಿರಬೇಕು. ಅದೇ ನಾನು ಹುಡುಗನಾಗಿದ್ದರೆ ಎಂದು ಅವರು ಅಬಲೆಯ ಅಳಲನ್ನು ಭಾವುಕರಾಗಿ ಹೇಳಿದ ರೀತಿ ಎಂಥವರ ಕಣ್ಣಲ್ಲಿಯೂ ನೀರು ತರಿಸುವಂತಿದೆ.
“ಇವತ್ತು ನನ್ನ ಮೇಲೆ ಅತ್ಯಾಚಾರವಾಗಿದೆ. ದುಷ್ಕರ್ಮಿಯ ಕ್ರೌರ್ಯವನ್ನು ನಾನು ನೋಡಿದ್ದೇನೆ. ಸಿಸಿಟಿವಿ ಇಲ್ಲದಿದ್ದರೆ ಏನಾಯಿತು ಎಂದು ಯಾರಿಗೂ ತಿಳಿಯುವುದಿಲ್ಲ. ಪುರುಷ ಭದ್ರತಾ ಸಿಬ್ಬಂದಿ ಇದ್ದರೂ, ಅವನು ತನ್ನ ಕರ್ತವ್ಯವನ್ನು ಸ್ವಚ್ಛವಾಗಿ ನಿರ್ವಹಿಸುತ್ತಿದ್ದನೇ? ನಾನು ಹುಡುಗನಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಇಂದು ಬದುಕಿರುತ್ತಿದ್ದೆ ಎಂದು ಹೇಳುತ್ತಾ ಆಯುಷ್ಮಾನ್ ಮೃತಳ ಸಂಕಟವನ್ನು ತೋಡಿಕೊಂಡಿದ್ದಾರೆ.
ನಿಮ್ಮ ಮಾತುಗಳು ಎಷ್ಟೋ ಹೃದಯಗಳನ್ನು ತಟ್ಟುತ್ತಿವೆ. ಎಲ್ಲರೂ ನಿಮ್ಮಂತೆ ಯೋಚಿಸಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನೆಟಿಜನ್ಸ್​ ಕಾಮೆಂಟ್ಸ್ ಮಾಡುತ್ತಿದ್ದಾರೆ.
‘ನನ್ನೊಂದಿಗೆ ನಿಲ್ಲುವುದು ಸುಲಭವಲ್ಲ’: ಕಂಗನಾ ಹೀಗೆನ್ನಲು ಕಾರಣವಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − four =
Remember me
