ನವದೆಹಲಿ:ಕರೊನಾ ವೈರಸ್​ ಬಿಕ್ಕಟ್ಟು ಹಿನ್ನೆಲೆಯಲ್ಲಿ 9 ರಾಜ್ಯಗಳ ಸಿಎಂ, 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿ, ಲಾಕ್​ಡೌನ್​ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟರು.
ಕರೊನಾ ನಿಯಂತ್ರಿಸಲು ಎಲ್ಲರು ಒಗ್ಗಟಾಗಿ ಕೆಲಸ ಮಾಡಬೇಕು. ಕರೊನಾ ವಾರಿಯರ್ಸ್​ಗೆ ಸ್ಫೂರ್ತಿ ತುಂಬಿರಿ. ನಿಮ್ಮ ಸ್ಫೂರ್ತಿದಾಯಕ ಮಾತುಗಳಿಂದ ವಾರಿಯರ್ಸ್​ಗೆ ವಿಶ್ವಾಸ ಹೆಚ್ಚುತ್ತದೆ. ಕರೊನಾ ನಿಯಂತ್ರಿಸಲು ಯಾವುದೇ ಮಾರ್ಗವಿದ್ದರೂ ಅದನ್ನು ಅಳವಡಿಸಿಕೊಳ್ಳಿ ಎಂದ ಪ್ರಧಾನಿ ಮೋದಿ ನಿಮ್ಮ ಕೆಲಸ ಇತರರಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕೆಲಸವನ್ನು ಶ್ಲಾಘಿಸಿದರು.
ಇದೇ ವೇಳೆ ಕರೊನಾ ನಿಯಂತ್ರಿಸಲು ಮೂರು T ಸೂತ್ರಗಳ ಸಲಹೆ ನೀಡಿದ ಪ್ರಧಾನಿ ಮೋದಿ, ಟ್ರೇಸಿಂಗ್​, ಟೆಸ್ಟಿಂಗ್​ ಮತ್ತು ಟ್ರೀಟ್ಮೆಂಟ್​ ಮೂಲಕ ಕರೊನಾ ನಿಯಂತ್ರಿಸಬಹುದು ಎಂದರು.
ಪ್ರತಿಯೊಬ್ಬರ ಜೀವ ಉಳಿಸುವುದು ನಮ್ಮ ಕರ್ತವ್ಯ. ನಿಮ್ಮ ಜಿಲ್ಲೆಗಳಲ್ಲಿ ತೆಗೆದುಕೊಂಡ ಕ್ರಮ ಬೇರೆ ಜಿಲ್ಲೆಗಳಿಗೂ ಮಾದರಿ. ಹೀಗಾಗಿ ಲಾಕ್​ಡೌನ್​ ನಿರ್ಧಾರವನ್ನು ಜಿಲ್ಲಾಧಿಕಾರಿಗಳೇ ತೆಗೆದುಕೊಳ್ಳಬಹುದೆಂದು ಪ್ರಧಾನಿ ಮೋದಿ ಹೇಳಿದರು.
ಇತರೆ ಜಿಲ್ಲೆಗಳಲ್ಲೂ ಕರೊನಾ ನಿಯಂತ್ರಿಸಲು ಸಹಕರಿಸಿ, ಕರೊನಾ ತಡೆಗಟ್ಟಲು ಲಸಿಕೆಯೇ ಪ್ರಬಲ ಅಸ್ತ್ರವೆಂದರು. ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸುತ್ತಾ ಕರೊನಾ ವಿಚಾರದಲ್ಲಿ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳುತ್ತಾ ಜಿಲ್ಲಾಧಿಕಾರಿಗಳಿಗೆ ಫ್ರೀ ಹ್ಯಾಂಡ್​ ಕೊಟ್ಟರು. ಡಿಸಿಗಳೇ ಫೀಲ್ಡ್​ ಮಾರ್ಷಲ್​ಗಳು ಎಂದು ಹೊಗಳಿದರು. ಇದೇ ವೇಳೆ ಕರೊನಾ ಸಂಬಂಧ ಯಾವುದಾದರೂ ಸಲಹೆಗಳಿದ್ದರೆ ಹಂಚಿಕೊಳ್ಳಲು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
