ನೆಲ್ಲೂರು:ತರಗತಿಯೊಳಗೆ 19 ವರ್ಷದ ಯುವತಿಯೊಬ್ಬಳು ಗರ್ಭಪಾತ ಮಾಡಿಕೊಂಡಿದ್ದು, ಈ ವೇಳೆ ಉಂಟಾದ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಖಾಸಗಿ ಕಾಲೇಜೊಂದರಲ್ಲಿ ನಡೆದಿದೆ. ದ್ವಿತೀಯ ವರ್ಷದ ಬಿ.ಟೆಕ್ ವ್ಯಾಸಾಂಗ ಮಾಡುತ್ತಿದ್ದ ಯುವತಿ ಮೃತ ಯುವತಿ. ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಸಿ-ವಿಜಿಲ್​ ಆ್ಯಪ್​ನಲ್ಲಿ ದೂರುಗಳ ಸುರಿಮಳೆ! 2,389 ದೂರು ದಾಖಲು, 1,979 ಕೇಸ್​ಗಳಿಗೆ ಕ್ರಮ
ಯುವತಿ, ಸ್ನೇಹಿತರೆಲ್ಲಾ ಹೊರಗಿದ್ದಾಗ ತರಗತಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಬಳಿಕ ಯಾರಿಗೂ ಗೊತ್ತಾಗದಂತೆ ಗರ್ಭಪಾತ ಮಾಡಿಕೊಂಡಿದ್ದಾಳೆ. ಎಷ್ಟು ಹೊತ್ತಾದರೂ ತರಗತಿಯೊಳಗಿದ್ದ ಯುವತಿ ಹೊರಬಾರದಿದ್ದಾಗ ಅನುಮಾನ ಬಂದ ಸಹಪಾಠಿಗಳು ಕಾಲೇಜಿನ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿಗಳು ಬಾಗಿಲು ಮುರಿದು ತರಗತಿಯೊಳಗೆ ಪ್ರವೇಶಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ತೀವ್ರ ರಕ್ತಸ್ರಾವ ಉಂಟಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಬಾಗಿಲು ಮುರಿದು ಒಳಪ್ರವೇಶಿದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಒಂದೆಡೆ ವಿದ್ಯಾರ್ಥಿನಿ ರಕ್ತಸ್ರಾವದಿಂದ ನೆಲದಲ್ಲಿ ಬಿದ್ದುಕೊಂಡಿದ್ದರೆ, ಆಕೆಯ ಪಕ್ಕದಲ್ಲಿ ಭ್ರೂಣವೊಂದು ಪತ್ತೆಯಾಗಿದೆ. ಕೂಡಲೇ ಆಕೆಯನ್ನು ಹಾಗೂ ಅಲ್ಲಿದ್ದ ಭ್ರೂಣವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಎರಡೂ ಜೀವಗಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಚುನಾವಣಾ ಜಾಗೃತಿ ಅಭಿಯಾನಕ್ಕೆ ಎನ್​ಜಿಒ ಸಾಥ್; ​ಸಮುದ್ರ ತೀರ, ರೈಲು, ಬಸ್ಸು, ಸಂತೆಗಳಲ್ಲಿ ಮತದಾರರಿಗೆ ಮನವರಿಕೆ
ವಿದ್ಯಾರ್ಥಿನಿ ಆರು ತಿಂಗಳ ಗರ್ಭಿಣಿಯಾಗಿದ್ದಳು. ಆಕೆ ಯಾರೊಂದಿಗೆ ದೈಹಿಕ ಸಂಪರ್ಕ ಹೊಂದ್ದಿದ್ದಳು ಎಂಬುದನ್ನು ಸದ್ಯದಲ್ಲೇ ಪತ್ತೆ ಮಾಡುತ್ತೇವೆ. ಆಕೆಯ ಮೊಬೈಲ್ ಫೋನ್​​ನನ್ನು ವಶಪಡಿಸಿಕೊಂಡಿದ್ದು, ಯಾರೊಂದಿಗೆ ಮಾತನಾಡಿದ್ದಳು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಸದ್ಯ ಯುವತಿಯ ತಂದೆ ನೀಡಿದ ದೂರಿನಂತೆ ಪ್ರಕರಣದ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)
ಇದನ್ನೂ ಓದಿ:ಕಳೆದ 6 ವರ್ಷಗಳಲ್ಲಿ 10,933 ಎನ್​ಕೌಂಟರ್​! ಕ್ರಿಮಿನಲ್​ಗಳ ವಿರುದ್ಧ ಯೋಗಿ ಸರ್ಕಾರ ಕ್ರಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
