ನವದೆಹಲಿ:ಕೋವಿಡ್​ ಲಾಕ್​ಡೌನ್​ ಅವಧಿಯಲ್ಲಿ ಅಕ್ರಮ ಮದ್ಯ ಸಾಗಿಸಿ ತಮ್ಮ ಮಾಲೀಕತ್ವದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿಯ ವಕ್ತಾರ ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯ ಅವರಿಗೆ ಯುವ ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ ನೋಟಿಸ್​ ಜಾರಿ ಮಾಡಿದ್ದಾರೆ.
ಶ್ರೀನಿವಾಸ್​ ಅವರ ಮಾಲೀಕತ್ವದ ಸ್ಕಾರ್ಪಿಯೋದಲ್ಲಿ ಯುವ ಕಾಂಗ್ರೆಸ್​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಯಲಗುಡ್ಡ ಶ್ರವಣ ರಾವ್​ ಮತ್ತು ಬೆಂಗಳೂರು ಮೂಲದ ಮನೀಶ್​ ಬಸವರಾಜ ಶಿಲ್ಲೆ ಗುರುಗ್ರಾಮದಿಂದ ದೆಹಲಿ ಮೂಲಕ ಹರಿಯಾಣಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದರು ಎಂದು ಸಂಬಿತ್​ ಪಾತ್ರಾ ಹಾಗೂ ಅಮಿತ್​ ಮಾಳ್ವೀಯ ಆರೋಪಿಸಿದ್ದರು.
ಅಲ್ಲದೆ, ಈ ಸಂಬಂಧ ಟ್ವೀಟ್​ ಮಾಡಿ, ಅದನ್ನು ರಾಹುಲ್​ ಗಾಂಧಿ ಅವರಿಗೆ ಟ್ಯಾಗ್​ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಈ ಆರೋಪಗಳನ್ನು ಅಲ್ಲಗಳೆದಿರುವ ಬಿ.ವಿ. ಶ್ರೀನಿವಾಸ್​, ಇದೊಂದು ಸುಳ್ಳು ಸುದ್ದಿ. ಕೋವಿಡ್​ ತುರ್ತು ಕಾರ್ಯದ ಪಾಸ್​ ಹೊಂದಿದ್ದ ತಮ್ಮ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಕೋರ್ಟ್​ನಲ್ಲಿ ಭೇಟಿ ಮಾಡುವುದಾಗಿ ಸಂಬಿತ್​ ಪಾತ್ರಾ ಮತ್ತು ಅಮಿತ್​ ಮಾಳ್ವೀಯ ಅವರಿಗೆ ಸವಾಲು ಹಾಕಿದ್ದಾರೆ.
See You in the Court CEO of Fake News Factory Mr.@amitmalviya& Brand Ambassador Mr.@sambitswaraj.#SeeYouInTheCourtpic.twitter.com/VsCgfLQC9L— Srinivas BV (@srinivasiyc)April 21, 2020
See You in the Court CEO of Fake News Factory Mr.@amitmalviya& Brand Ambassador Mr.@sambitswaraj.#SeeYouInTheCourtpic.twitter.com/VsCgfLQC9L
ಹಣ್ಣುಗಳ ರಾಜ ತಾ ಬಂದಾ… ಮಾವು ಟಿಕ್​, ಟಿಕ್​… ಮಾವು ಟಿಕ್​, ಟಿಕ್​… ಮಾವಿನಹಣ್ಣು ತಿನ್ನುವುದರ ಲಾಭ ಏನು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 1 =
Remember me
