ನವದೆಹಲಿ:ದೇಶದ ಪ್ರಧಾನಿಯಾಗಿ ಮೂರನೇ ಬಾರಿ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ 18ನೇ ಲೋಕಸಭೆ ಅಧಿವೇಶನವನ್ನು ಉದ್ಧೇಶಿಸಿ ಮಾತನಾಡಿದ್ದು, ತಮ್ಮ ಮಾತಿನ ಮೂಲಕವೇ ವಿಪಕ್ಷ ನಾಯಕ ರಾಹುಲ್​ ಗಾಂಧಿ ಹಾಗೂ ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಚಾಟಿ ಬೀಸಿದ್ದಾರೆ. ಲೋಕಸಭಾ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಂದನಾ ನಿರ್ಣಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ವಿಪಕ್ಷಗಳ ಗದ್ದಲದ ನಡುವೆಯೇ ಹಲವು ವಿಚಾರಗಳ ಕುರಿತು ಮಾತನಾಡಿದ್ದು, ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ.
ವಿಪಕ್ಷ ಸಂಸದರ ನಿರಂತರ ಗದ್ದಲ ಹಾಗೂ ಘೋಷಣೆಗಳ ನಡುವೆಯೇ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿಗಳು ನಮಗೆ ಮತ್ತು ದೇಶಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಅದಕ್ಕಾಗಿ ಹೃದಯಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ. ನಿನ್ನೆ ಮತ್ತು ಇಂದು ಬಹಳಷ್ಟು ನಾಯಕರು ಈ ಭಾಷಣದ ಮೇಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಅನುಭವಿಗಳ ರೀತಿ ಮಾತನಾಡುವ ಮೂಲಕ ಸದನದ ಗೌರವವನ್ನು ಹೆಚ್ಚಿಸಿದ್ದಾರೆ.
ವಿಶ್ವದ ಅತಿದೊಡ್ಡ ಚುನಾವಣೆ ಭಾರತದಲ್ಲಿ ನಡೆದಿದೆ. ದೇಶದ ಜನರು ಈ ಚುನಾವಣಾ ಅಭಿಯಾನದಲ್ಲಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾನು ಕೆಲವರ ನೋವು ಅರ್ಥ ಮಾಡಿಕೊಳ್ಳಬಲ್ಲೇ ಸಾಕಷ್ಟು ಪ್ರಯತ್ನದ ಬಳಿಕ ಸೋತಿದ್ದಾರೆ. ಭಾರತದ ಜನರು ಮೂರನೇ ಬಾರಿಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಸಾಕಷ್ಟು ಯೋಚಿಸಿಯೇ ದೇಶದ ಜನರು ಜನಾದೇಶ ನೀಡಿದ್ದಾರೆ. ಹತ್ತು ವರ್ಷಗಳ ಟ್ರ್ಯಾಕ್ ರೆಕಾರ್ಡ್ ನೋಡಿದ್ದಾರೆ. ಬಡವರ ಕಲ್ಯಾಣಕ್ಕಾಗಿ ಹೇಗೆ ಕೆಲಸ ಮಾಡಿದ್ದೇವೆ ಎಂದು ಜನರು ಗಮನಿಸಿದ್ದಾರೆ. 25ಕೋಟಿ ಜನರನ್ನು ಬಡತನದಿಂದ ಹೊರ ತಂದಿದ್ದೇವೆ. ಸ್ವಾತಂತ್ರ್ಯದ ಬಳಿಕ ಇಷ್ಟು ದೊಡ್ಡ ಮಟ್ಟದಲ್ಲಿ ಬಡತನ ನಿರ್ಮೂಲಕ ಮಾಡುವ ಯತ್ನ ನಡೆದಿಲ್ಲ. 2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರದ ವಿರುದ್ಧ 0% ಸಹಿಷ್ಣುತೆ ಹೊಂದಿದ್ದೇವೆ ಅಂತಾ ಹೇಳಿದ್ದೇವೆ. ಅದರಂತೆ ಭ್ರಷ್ಟಾಚಾರ ವಿರುದ್ಧ ನೀತಿಗಳನ್ನು ನಮ್ಮ ಸರ್ಕಾರ ರೂಪಿಸಿದೆ.
#WATCH| PM Narendra Modi says, "This is the third biggest defeat in the history of Congress. It would have been better if Congress had accepted its defeat and respected the mandate of the people but they are busy doing some 'Sirsasana' and Congress and its ecosystem are trying…pic.twitter.com/G6IsTyZUBV
ಇದನ್ನೂ ಓದಿ:ವಿನ್ನಿಂಗ್​ ಅಮೌಂಟ್​ ನನ್ನ ತಾಯಿಯ ಅಕೌಂಟ್​ಗೆ ಹಾಕಿ; ಬಿಸಿಸಿಐಗೆ ಹಾರ್ದಿಕ್​ ಮನವಿ ಮಾಡಲು ಕಾರಣವೇನು?
ತುಷ್ಟೀಕರಣ ರಾಜಕಾರಣವನ್ನು ದೇಶ ಬಹುಕಾಲ ನೋಡಿದೆ. ನಾವು ತುಷ್ಟಿಕರಣವನ್ನಲ್ಲ ಸಂತುಷ್ಟಿಕರಣವನ್ನು ಅನುಸರಿಸಿದ್ದೇವೆ. ಎಲ್ಲರಿಗೂ ನ್ಯಾಯ ಎಂಬುದು ನಮ್ಮ ಧ್ಯೇಯ. ಇದು ಕಾಂಗ್ರೆಸ್‌ನ ಇತಿಹಾಸದಲ್ಲಿ ಮೂರನೇ ಅತಿ ದೊಡ್ಡ ಸೋಲು. ಕಾಂಗ್ರೆಸ್ ತನ್ನ ಸೋಲನ್ನು ಒಪ್ಪಿಕೊಂಡು ಜನರ ಆದೇಶವನ್ನು ಗೌರವಿಸಿದ್ದರೆ ಅದು ಉತ್ತಮವಾಗಿರುತ್ತಿತ್ತು. ಆದರೆ, ಕಾಂಗ್ರೆಸ್​ನವರೇ ನಮ್ಮನ್ನು ಸೋಲಿಸಿದ್ದಾರೆ ಎಂದು ದೇಶದ ಜನರ ಮನಸ್ಸಿನಲ್ಲಿ ಅಭಿಪ್ರಾಯ ಮೂಡಿಸುವ ಹೇಳಿಕೆಗಳನ್ನು ನೀಡುತ್ತಾ ಓಡಾಡುತ್ತಿದ್ದಾರೆ. ಕಾಂಗ್ರೆಸ್​ನವರು ನೀಡುತ್ತಿರುವ ಹೇಳಿಕೆ ನೋಡಿದರೆ ಅವರ ಸಂಗಡಿಗರು ನೀವು ಈಗಾಗಲೇ ಗೆದ್ದಿದ್ದೀರಿ ಎಂದು ಹೇಳುತ್ತಿದ್ದಾರೆ. ಇದನ್ನು ನೋಡಿದರೆ ನನಗೆ ಮಗುವೊಂದು ಸೈಕಲ್​ ಹತ್ತಿ ಹೊರಟಿದ್ದು, ಆಯತಪ್ಪಿ ಕೆಳಗೆ ಬಿದ್ದಾಗ ದೊಡ್ಡವರು ಅಳುತ್ತಿರುವ ಮಗುವಿಗೆ ನೀನು ಬಿದ್ದಿಲ್ಲ ಇರುವೆ ಸತ್ತಿದೆ ನೋಡು ಎಂದು ಹೇಳಿ ಸಮಾಧಾನ ಮಾಡುವ ಮೂಲಕ ಮಗುವಿನ ಗಮನವನ್ನು ಬೇರೆಡೆ ಸೆಳೆಯುತ್ತಾರೆ. ಕಾಂಗ್ರೆಸ್​ ಹಾಗೂ ಇಂಡಿಯಾ ಮೈತ್ರಿಕೂಟದ ಪರಿಸ್ಥಿತಿ ನೋಡಿದರೆ ಮಗುವಿಗೆ ಮನರಂಜನೆ ನೀಡುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.
ನಿನ್ನೆ (ಜುಲೈ 01) ಸದನದಲ್ಲಿ ಮಗುವೊಂದು ಬಾಲಕ್​ ಬುದ್ದಿಯನ್ನು ಕೆಲವರು ಪ್ರದರ್ಶಿಸಿದರು. ಅದು ಹೇಗಿತ್ತು ಎಂದರೆ ಮಗುವೊಂದು ಶಾಲೆಯಿಂದ ಮನೆಗೆ ಹೋದ ಬಳಿಕ ತನ್ನ ತಾಯಿ ಬಳಿ ಅಳುತ್ತಾ ನನಗೆ ಇಂದು ಶಾಲೆಯಲ್ಲಿ ಹೊಡೆದರು ಎಂದು ಹೇಳುತ್ತದೆ. ಇದನ್ನು ಕೇಳಿಕೊಂಡು ಗಾಬರಿಯಾದ ತಾಯಿ ಏಕೆ ಎಂದು ಕೇಳಿದಾಗ ಆ ಮಗು ಏನನ್ನೂ ಹೇಳುವುದಿಲ್ಲ. ಆದರೆ, ಶಾಲೆಯಲ್ಲಿ ಅದೇ ಮಗು ಶಿಕ್ಷಕರಿಗೆ ಬೈದು, ಸಹಪಾಠಿಗಳ ಪುಸ್ತಕವನ್ನು ಹರದಿಉ ಎಲ್ಲರಿಗೂ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತದೆ. ನಾವು ನಿನ್ನೆ ಸನದಲ್ಲಿ ಅದನ್ನೇ ನೋಡಿದ್ದೇವೆ. ನಿಮ್ಮಿಂದ ಏನು ಆಗುವುದಿಲ್ಲ ಎಂದು ಜನರು ಅರಿತಿದ್ದಾರೆ. ಅದಕ್ಕೆ ನಮಗೆ ಮತ ನೀಡಿದ್ದು.
#WATCH| Prime Minister Narendra Modi says, "…'Kal yaha 'Baalak buddhi ka vilaap chal raha tha. Mujhe isne maara, mujhe usne maara, yaha maara waha maara, yahi chal raha tha…' I will tell you a story, a child came back from school and started crying loudly in front of his…pic.twitter.com/xYeocEX09W
ಮಾತನಾಡುವ ವೇಳೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರನ್ನು ಮಗು ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ, 1984ರ ಚುನಾವಣೆಯನ್ನು ನೆನಪಿಸಿಕೊಳ್ಳೋಣ. ಆ ಚುನಾವಣೆಗಳ ನಂತರ ಈ ದೇಶದಲ್ಲಿ 10 ಲೋಕಸಭೆ ಚುನಾವಣೆಗಳು ನಡೆದವು, ಆದರೆ ಒಮ್ಮೆಯೂ ಕಾಂಗ್ರೆಸ್ 250ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಬಾರಿ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿತು. ಇದು ನನಗೆ ಮಗುವಿನ ಕತೆಯನ್ನು ನೆನಪಿಗೆ ತರುತ್ತದೆ. ಮಗುವೊಂದು ತಾನು 99 ಅಂಕಗಳನ್ನು ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳಿಕೊಂಡು ಖುಷಿ ಪಡುತ್ತಿತ್ತು. ಅದನ್ನು ಕೇಳಿ ಎಲ್ಲರೂ ಆ ಮಗುವಿನ ಬೆನ್ನು ತಟ್ಟುತ್ತಿದ್ದರು. ಆಗ ಬಂದ ಟೀಚರ್ ಆ ಮಗುವಿನ ಬಳಿ ನೀನೇಕೆ ಸ್ವೀಟ್ ಹಂಚುತ್ತಿದ್ದೀಯ ಎಂದು ಕೇಳಿದರು. ವಾಸ್ತವದ ವಿಷಯ ಏನೆಂದರೆ ಆ ಮಗು 100ಕ್ಕೆ 99 ಅಂಕ ಪಡೆದಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆ ಮಗುವಿಗೆ 543ರಲ್ಲಿ 99 ಅಂಕ ಪಡೆದಿತ್ತು. ಆ ಮಗು ವಿಫಲತೆಯಲ್ಲೂ ವಿಶ್ವದಾಖಲೆಯನ್ನು ನಿರ್ಮಿಸಿದೆ ಎಂಬ ವಿಚಾರವನ್ನು ಅರ್ಥ ಮಾಡಿಸುವವರು ಯಾರು ಎಂದು ಪರೋಕ್ಷವಾಗಿ ರಾಹುಲ್​ ಗಾಂಧಿ ಅವರನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಲೇವಡಿಯಾಡಿದ್ದಾರೆ.
#WATCH| PM Narendra Modi says, "I remember an incident, there was a boy who scored 99 marks and he used to show it to everyone. When people heard 99, they used to encourage him a lot. Then a teacher came and said why are you distributing sweets? He did not score 99 out of 100…pic.twitter.com/bfYYMKB1id
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 17 =
Remember me
