ನವದೆಹಲಿ:ನೊಬೆಲ್ ಪ್ರಶಸ್ತಿ ವಿಜೇತ,ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್ (89 )ಇಂದು ಇಹಲೋಕ ತ್ಯಜಿಸಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್​​​ ಮೀಡಿಯಾದಲ್ಲಿ ಹರಿದಾಡುತ್ತಿತ್ತು.  ಅಮರ್ತ್ಯ ಸೇನ್‌ ನಿಧನ ಸುದ್ದಿಯನ್ನು ಸೇನ್ ಪುತ್ರಿ ನಂದನಾ ದೇಬ್ ಸೇನ್ ನಿರಾಕರಿಸಿದ್ದಾರೆ.
ಬ್ರಿಟನ್ ದೇಶದಲ್ಲಿ ವಾಸವಿದ್ದ89 ವರ್ಷದ ಅಮೃರ್ತ್ಯ ಸೇನ್ ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲಿದ್ದರು.ಇದೀಗ ಸೇನ್ ನಿಧನರಾಗಿದ್ದಾರೆ ಎಂದು ಅಮೆರಿಕನ್ ಪ್ರೋಫೆಸರ್ ಕ್ಲಾಡಿಯಾ ಗೋಲ್ಡಿನ್ ಸೋಶಿಯಲ್​​​ ಮೀಡಿಯಾದಲ್ಲಿ ತಿಳಿಸಿದ್ದರು. ಆದರೆ ಈ ಸುದ್ದಿ ಸುಳ್ಳು ಎಂದು ಖುದ್ದು ಅಮೃರ್ತ್ಯ ಸೇನ್ ಪುತ್ರಿ ಸ್ಪಷ್ಟಪಡಿಸಿದ್ದಾರೆ.
ಕ್ಲಾಡಿಯಾ ಗೋಲ್ಡಿನ್ ಹೆಸರಿನ ನಕಲಿ ಎಕ್ಸ್ ಖಾತೆಯಲ್ಲಿ ಈ ಸುದ್ದಿ ಹರಡಲಾಗಿದೆ. ಭಾರತ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಪುತ್ರಿ ನಂದನಾ ದೇಬ್ ಸೇನ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇದೇ ವೇಳೆ ಈ ರೀತಿ ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದಾರೆ.
‘ಸ್ನೇಹಿತರೆ, ನಿಮ್ಮ ಕಾಳಜಿಗೆ ಧನ್ಯವಾದ. ಆದರೆ, ಇದು ಸುಳ್ಳು ಸುತ್ತಿ. ಬಾಬಾ (ತಂದೆ) ಚೆನ್ನಾಗಿದ್ದಾರೆ. ಕೇಂಬ್ರಿಡ್ಜ್​ನಲ್ಲಿ ಈ ವಾರ ನಾವು ಕುಟುಂಬದವರು ಚೆನ್ನಾಗಿ ಮಜಾ ಮಾಡಿದೆವು. ಕಳೆದ ರಾತ್ರಿ ಅವರನ್ನು ಬಿಟ್ಟು ಬರುವಾಗ ಅವರ ಅಪ್ಪುಗೆ ಎಂದಿನಂತೆ ಗಾಢವಾಗಿತ್ತು. ಹಾರ್ವರ್ಡ್​ನಲ್ಲಿ ಅವರು ವಾರಕ್ಕೆ ಎರಡು ಕೋರ್ಸ್ ಪಾಠ ಮಾಡುತ್ತಿದ್ದಾರೆ. ಪುಸ್ತಕ ಬರೆಯುತ್ತಿದ್ದಾರೆ. ಎಂದಿನಂತೆ ಅವರು ಬ್ಯುಸಿಯಾಗಿದ್ದಾರೆ’ ಎಂದು ನಂದನಾ ದೇಬ್ ಸೇನ್ ಅವರು ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಟ್ವೀಟ್ ಮಾಡಿದ್ದಾರೆ.
Friends, thanks for your concern but it’s fake news: Baba is totally fine. We just spent a wonderful week together w/ family in Cambridge—his hug as strong as always last night when we said bye! He is teaching 2 courses a week at Harvard, working on his gender book—busy as ever!pic.twitter.com/Fd84KVj1AT
— Nandana Sen (@nandanadevsen)October 10, 2023

ಅಮರ್ತ್ಯ ಸೇನ್ ಅವರು 1933 ನವೆಂಬರ್​​ 3 ರಂದು ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಜನಿಸಿದರು. ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 1998ರಲ್ಲಿ ನೊಬೆಲ್​​ ಪ್ರಶಸ್ತಿ ಲಭಿಸಿದೆ.
https://twitter.com/profCGoldin/status/1711701739861057965
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 16 =
Remember me
