ನವದೆಹಲಿ:ಎರಡು ತಿಂಗಳ ಹಿಂದೆ ಬಾಬಾ ಕಾ ಡಾಬಾ ಹೆಸರಿನ ಸಣ್ಣ ಅಂಗಡಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿತ್ತು. 80 ವರ್ಷದ ಬಡ ವೃದ್ಧನೊಬ್ಬ ತನ್ನ ಪತ್ನಿಯೊಂದಿಗೆ ಸಣ್ಣ ಹೋಟೆಲ್​ ರೀತಿಯ ಅಂಗಡಿ ನಡೆಸುತ್ತಿದ್ದು, ಲಾಕ್​ಡೌನ್​ನಲ್ಲಿ ಜನರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಿಕೊಂಡಿದ್ದ ಆ ವಿಡಿಯೋಕ್ಕೆ ನೆಟ್ಟಿಗರ ಮನಸ್ಸು ಕರಗಿತ್ತು. ವಿಡಿಯೋ ಅಪ್​ಲೋಡ್​ ಆಗಿ 24 ಗಂಟೆಗಳಲ್ಲೇ ಬಾಬಾ ಕಾ ಡಾಬಾದ ಮುಂದೆ ಜನ ಕ್ಯೂ ನಿಂತು ಊಟ ಖರೀದಿಸಿದ್ದರು. ಈ ರೀತಿ ರಾತ್ರೋರಾತ್ರಿ ಫೇಮಸ್​ ಆದ ಬಾಬಾ ಕಾ ಡಾಬಾ ಈಗ ಹೇಗಿದೆ ಎಂದು ಗೊತ್ತಾದರೆ ನೀವು ಶಾಕ್​ ಆಗ್ತೀರ.
ಇದನ್ನೂ ಓದಿ:ಕರೊನಾ ಲಸಿಕೆ ವಿಜ್ಞಾನಿಯ ದುರಂತ ಅಂತ್ಯ! 14ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟರಾ ವಿಜ್ಞಾನಿ?
ದೆಹಲಿಯ ಮಾಲ್ವಿಯಾ ನಗರದ ಬಾಬಾ ಕಾ ಡಾಬಾದ ಸಣ್ಣ ಅಂಗಡಿ ಈಗ ಅಲ್ಲಿಲ್ಲ. ಬದಲಾಗಿ ಅದೇ ಏರಿಯಾದಲ್ಲಿ ಬಾಬಾ ದಾ ಡಾಬಾ ಹೆಸರಿನ ದೊಡ್ಡ ರೆಸ್ಟೋರೆಂಟ್​ ಒಂದು ಆರಂಭವಾಗಿದೆ. ಅಂದ ಹಾಗೆ ಈ ರೆಸ್ಟೋರೆಂಟ್​ನ ಮಾಲೀಕರು ಕೂಡ ಅದೇ ಬಾಬಾ ಕಾ ಡಾಬಾದ ವೃದ್ಧ ದಂಪತಿ ಕಾಂತಾ ಪ್ರಸಾದ್​ ಮತ್ತು ಬಾದಮಾ ದೇವಿ.
ಇದನ್ನೂ ಓದಿ:ಹೊಸ ಪಕ್ಷ ಸ್ಥಾಪಿಸಲು ಹೊರಟ ರಜನಿಕಾಂತ್​ಗೆ ಸಮನ್ಸ್​! ಕಾರಣವೇನು ಗೊತ್ತಾ?
ವಿಡಿಯೋ ನೋಡಿದ್ದ ಜನರು ಬಾಬಾ ಕಾ ಡಾಬಾಕ್ಕೆ ಬಂದು ಸಾಲುಗಟ್ಟಿ ನಿಂತು ವ್ಯಾಪಾರ ಮಾಡಿದ್ದರು. ಅನೇಕ ದಾನಿಗಳು ಬಂದು ದಂಪತಿಗೆ ಸಹಾಯ ಮಾಡಿ ಹೋಗಿದ್ದರು. ಆ ಎಲ್ಲ ಹಣವನ್ನು ಉಳಿಸಿಕೊಂಡ ದಂಪತಿ ಈಗ ಅದೇ ಹಣದಲ್ಲಿ ರೆಸ್ಟೋರೆಂಟ್​ ತೆರೆದಿದ್ದಾರೆ. ದೇವರ ದಯೆಯಿಂದ ನಾವು ಇಂದು ಯಾವುದೇ ಕಷ್ಟವಿಲ್ಲದೆ ನೆಮ್ಮದಿಯಿಂದ ಇದ್ದೇವೆ ಎನ್ನುತ್ತಾರೆ ಕಾಂತಾ ಪ್ರಸಾದ್​ ಅವರು. (ಏಜೆನ್ಸೀಸ್​)
Delhi: Kanta Prasad, the 80-year-old owner of 'Baba Ka Dhaba', starts a new restaurant in Malviya Nagar.
"We're very happy, god has blessed us. I want to thank people for their help, I appeal to them to visit my restaurant. We will serve Indian & Chinese cuisine here," he says.pic.twitter.com/Rg8YAaJ1zk
— ANI (@ANI)December 21, 2020

ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿಯಾಗಿದ್ದು ಹೇಗೆ? ಹೊಟ್ಟೆ ಹಿಂದಿನ ಸತ್ಯ ಬಿಚ್ಚಿಟ್ಟ ಗಾಯಕಿ!

ಸೆಕ್ಸ್​ ವರ್ಕರ್​ ಇರಲಿಲ್ಲ, ಹೋಟೆಲ್​ ಸಿಬ್ಬಂದಿಯನ್ನೇ ರೇಪ್​ ಮಾಡಿಬಿಟ್ಟರು! ವಿಚಾರಣೆ ವೇಳೆ ಹೊರಬಿತ್ತು ಭಯಾನಕ ರಹಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 12 =
Remember me
