ನವದೆಹಲಿ:ಬಾಬಾ ಕಾ ಡಾಬಾ ನಿಮಗೆಲ್ಲರಿಗೂ ನೆನಪಿನಲ್ಲಿರಬಹುದು. ದೆಹಲಿಯಲ್ಲಿ ರಸ್ತೆ ಬದಿಯಲ್ಲಿ ಸಣ್ಣದೊಂದು ಡಾಬಾ ರೀತಿಯಲ್ಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅಜ್ಜನ ಜೀವನವನ್ನೇ ಅದೊಂದು ವಿಡಿಯೋ ಬದಲಾಯಿಸಿಬಿಟ್ಟಿತ್ತು. ಸೆಲೆಬ್ರಿಟಿಗಳೂ ಡಾಬಾಕ್ಕೆ ಭೇಟಿ ಕೊಟ್ಟು, ಧನ ಸಹಾಯ ಮಾಡಿದ ಬೆನ್ನಲ್ಲೇ ಡಾಬಾದ ತಾತ ದೊಡ್ಡದೊಂದು ರೆಸ್ಟೋರೆಂಟ್​ ಅನ್ನೇ ತೆರೆದುಬಿಟ್ಟಿದ್ದರು. ಆದರೆ ಬೇಸರದ ಸಂಗತಿಯೇನೆಂದರೆ ಇದೀಗ ಆ ತಾತ ಮತ್ತೆ ಹಿಂದಿನ ಪರಿಸ್ಥಿತಿಗೇ ಮರಳಿದ್ದಾರೆ. ರೆಸ್ಟೋರೆಂಟ್​ನ್ನೂ ಮುಚ್ಚಿ ರಸ್ತೆ ಬದಿಯ ಡಾಬಾದಲ್ಲೇ ವ್ಯಾಪಾರ ಪುನರರಾಂಭಿಸಿದ್ದಾರೆ.
ತುಶಾಂತ್ ಅದ್ಲಾಖಾ ಎನ್ನುವವರು ಬಾಬಾ ಕಾ ಡಾಬಾದ ಮಾಲೀಕ ಕಾಂತ ಪ್ರಸಾದ್ ಬಳಿ ರೆಸ್ಟೋರೆಂಟ್ ಮಾಡುವ ಆಫರ್​ ಕೊಟ್ಟಿದ್ದರಂತೆ. ರೆಸ್ಟೋರೆಂಟ್​ನ ಸಂಪೂರ್ಣ ಜವಾಬ್ದಾರಿ ತಮ್ಮದು ಎಂದಿದ್ದರಂತೆ. ಆದರೆ ಅವರು ರೆಸ್ಟೋರೆಂಟ್ ಕಡೆ ಗಮನವೇ ಕೊಡಲಿಲ್ಲ. ನಾನು 5 ಲಕ್ಷ ರೂಪಾಯಿ ಹಾಕಿ ರೆಸ್ಟೋರೆಂಟ್ ಮಾಡಿದೆ. ಆದರೆ ತಿಂಗಳಿಗೆ 40 ಸಾವಿರ ದುಡಿಮೆಯೂ ಆಗಲಿಲ್ಲ. ರೆಸ್ಟೋರೆಂಟ್ ಮುಚ್ಚಿದಾಗ ಅದರಲ್ಲಿದ್ದ ಕುರ್ಚಿ, ಅಡುಗೆ ಸಾಮಾಗ್ರಿಗಳನ್ನು ಮಾರಾಟ ಮಾಡಿದ್ದಕ್ಕೆ 36 ಸಾವಿರ ರೂಪಾಯಿ ಬಂದಿತಷ್ಟೇ ಎಂದಿದ್ದಾರೆ ಕಾಂತ ಪ್ರಸಾದ್.
ಆದರೆ ರೆಸ್ಟೋರೆಂಟ್ ಫೇಲ್​ ಆಗಲು ಕಾರಣ ಕಾಂತ ಪ್ರಸಾದ್ ಮತ್ತು ಆತನ ಮಕ್ಕಳೇ ಎಂದು ತುಶಾಂತ್ ಅದ್ಲಾಖಾ ಹೇಳಿದ್ದಾರೆ. ಅಂದ ಹಾಗೇ ರಸ್ತೆ ಬದಿ ಡಾಬಾಕ್ಕೆ ವಾಪಸಾಗಿರುವ ಕಾಂತ ಪ್ರಸಾದ್​ಗೆ ಈಗ ವ್ಯಾಪಾರವೂ ಅಷ್ಟು ಚೆನ್ನಾಗಿಲ್ಲವಂತೆ. ಲಾಕ್​ಡೌನ್​ಗೂ ಮೊದಲು ದಿನವೊಂದಕ್ಕೆ 3,500 ರೂಪಾಯಿಯವರೆಗೆ ವ್ಯಾಪಾರವಾಗುತ್ತಿತ್ತಂತೆ ಆದರೆ ಇದೀಗ ದಿನಕ್ಕೆ ಕೇವಲ 1 ಸಾವಿರ ರೂಪಾಯಿ ವ್ಯಾಪಾರವಾಗುತ್ತಿದೆಯಂತೆ. (ಏಜೆನ್ಸೀಸ್)
‘ಕ್ಷೇತ್ರಕ್ಕೆ ಅಪ್ಪ ಮಕ್ಕಳು ಏನ್ಮಾಡಿದಾರೆ?’ ಶಾಸಕ ಹಾಗೂ ಸಂಸದರ ವಿರುದ್ದ ಬುಸುಗುಟ್ಟಿದ ಎಂಟಿಬಿ ನಾಗರಾಜ್

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − ten =
Remember me
