ಲಖನೌ:ಎಲ್ಲರನ್ನು ನಂಬಬಾರದು ಎನ್ನುತ್ತಾರೆ. ಅದರಲ್ಲೂ ಆನ್​ಲೈನ್​ನಲ್ಲಿ ಪರಿಚಯವಾಗುವವರನ್ನು ನಂಬುವಾಗಲಂತೂ ಸಾಕಷ್ಟು ಬಾರಿ ಯೋಚಿಸಬೇಕಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಡೋಂಗಿ ಬಾಬಾ, ಆನ್​ಲೈನ್​ ಪರಿಚಯಗಳಿಂದಲೇ ಬರೋಬ್ಬರಿ ಐದು ಮದುವೆಯಾಗಿದ್ದು, 32 ಯುವತಿಯರೊಂದಿಗೆ ಚಾಟಿಂಗ್ ಮಾಡಿರುವ ಘಟನೆ ನಡೆದಿದೆ. ಆತ ತನ್ನ ಅತ್ತಿಗೆಯ ಮೇಲೇ ರೇಪ್​ ಮಾಡಿದ್ದ ಎನ್ನುವುದೂ ಇದೀಗ ಬಯಲಿಗೆ ಬಂದಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಶಾದಿ ಡಾಟ್​ ಕಾಂನಲ್ಲಿ ಲಕ್ಕಿ ಪಾಂಡೆ ಎನ್ನುವ ಹೆಸರಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಹೆಣ್ಣು ಮಕ್ಕಳೊಂದಿಗೆ ಕನೆಕ್ಟ್​ ಆಗುತ್ತಿದ್ದ. ಕೇವಲ 8ನೇ ತರಗತಿವರೆಗೆ ಓದಿದ್ದ ಆತ ಆನ್​ಲೈನ್​ನಲ್ಲಿ ತಾನೊಬ್ಬ ಬಿಎಸ್ಸಿ ಗ್ರಾಜುಯೇಟ್​, ಶಿಕ್ಷಕ ಎಂದೆಲ್ಲ ಹೇಳಿಕೊಳ್ಳುತ್ತಿದ್ದ. ಯುವತಿಯರನ್ನು ಬಲೆಗೆ ಬೀಳಿಸಿಕೊಂಡು ಇದುವರೆಗೆ ಐದು ಮದುವೆಯಾಗಿದ್ದಾನೆ. ಐದನೇ ಹೆಂಡತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರಿಂದಾಗಿ ಆತನ ನಿಜಾಂಶ ಹೊರಬಿದ್ದಿದೆ.
ಈ ಲಕ್ಕಿ ಪಾಂಡೆಯ ನಿಜವಾದ ಹೆಸರು ಅನುಜ್ ಚೇತನ್ ಕ್ಯಾಥೇರಿಯಾ. ಈತ 2016ರಲ್ಲಿ ತನ್ನ ಅತ್ತಿಗೆಯನ್ನೇ ರೇಪ್​ ಮಾಡಿ ಅರೆಸ್ಟ್ ಆಗಿದ್ದ. ಸದ್ಯ ಮಾ ಕಾಮಾಖ್ಯಾ ಬಂಜಾರೆ ಬಾಬಾ ಕಲ್ಯಾಣ್ ಸೇವಾ ಟ್ರಸ್ಟ್ ಹೆಸರಿನ ಟ್ರಸ್ಟ್​ ನಡೆಸುತ್ತಿದ್ದ ಆತ ಅಲ್ಲಿಗೆ ಬರುತ್ತಿದ್ದ ಅಮಾಯಕ ಹೆಣ್ಣು ಮಕ್ಕಳನ್ನೂ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. 2005ರಲ್ಲಿ ಮೊದಲನೇ, 2010ರಲ್ಲಿ ಎರಡನೇ ಹಾಗೂ 2014ರಲ್ಲಿ ಮೂರನೇ ಮದುವೆಯಾಗಿದ್ದ. ಅದಾದ ನಂತರ ಮೂರನೇ ಹೆಂಡತಿಯ ಕಸಿನ್​ ಅನ್ನೇ ಮದುವೆಯಾಗಿದ್ದ. ಈತನ ನಿಜ ವಿಚಾರ ಗೊತ್ತಾದ ನಂತರ ಆಕೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದಾದ ನಂತರ ಮತ್ತೊಂದು ಮದುವೆಯಾಗಿದ್ದಾನೆ. ಆ ಹೆಂಡತಿಗೆ ಆತ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಅನುಜ್​ ಆರನೇ ಮದುವೆಯಾಗಲು ತಯಾರಿ ನಡೆಸುತ್ತಿದ್ದದ್ದೂ ಇದೀಗ ತಿಳಿದುಬಂದಿದೆ.
ಶಾದಿ ಡಾಟ್​ ಕಾಮ್​ನಲ್ಲಿ ಈ ಲಕ್ಕಿ ಪಾಂಡೆ ಬರೋಬ್ಬರಿ 32 ಯುವತಿಯರೊಂದಿಗೆ ಸಂಪರ್ಕದಲ್ಲಿದ್ದ ಎನ್ನುವುದು ತಿಳಿದುಬಂದಿದೆ. ಅವರೆಲ್ಲರ ಮಾಹಿತಿ ಕಲೆ ಹಾಕಿರುವ ಪೊಲೀಸರು ಈತನ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದಾನೆ. (ಏಜೆನ್ಸೀಸ್)
ಕೋವಿಶೀಲ್ಡ್​ ಕೊಟ್ಟ 5 ನಿಮಿಷಗಳೊಳಗೆ ಕೊವ್ಯಾಕ್ಸಿನ್! ಇಬ್ಬರು ನರ್ಸ್​ಗಳು ಸೇರಿ ಮಾಡಿದ ಅವಾಂತರ…

ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + six =
Remember me
