ನವದೆಹಲಿ:ಏಕದಿನ ವಿಶ್ವಕಪ್‌ 2023 ಮುಗಿದ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಾಮ್‌ ನಾಯಕತ್ವ ತ್ಯಜಿಸುವ ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿಯೊಂದು ಕ್ರಿಕೆಟ್​​ ವಲಯದಲ್ಲಿ ಹರಿದಾಡುತ್ತಿದೆ.
ವಿಶ್ವಕಪ್‌ 2023ರಲ್ಲಿ ಆಡಲು ಭಾರತಕ್ಕೆ ಬಂದಿಳಿದ ಪಾಕಿಸ್ತಾನ ಕ್ರಿಕೆಟ್‌ ತಂಡ ಈವರೆಗೆ ಮಿಶ್ರ ಫಲಿತಾಂಶ ಪಡೆದಿದೆ. ಲೀಗ್‌ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಬಾಬರ್‌ ಅಜಾಮ್‌ ಬಳಗದ ಸೆಮೀಸ್‌ ಹಾದಿ ಬಹುತೇಕ ಅಸಾಧ್ಯ ಎಂಬಂತಾಗಿದೆ. ಕಳಪೆ ಪ್ರದರ್ಶನದಿಂದಾಗಿ ತಮ್ಮ ದೇಶದ ಹಿರಿಯ ಆಟಗಾರರು ಹಾಗೂ ಅಭಿಮಾನಿಗಳ ಕಟು ಟೀಕೆಗಳಿಂದ ನಾಯಕ ಬಾಬರ್‌ ಹಾಗೂ ತಂಡದ ಆಟಗಾರರು ಬೇಸತ್ತಿದ್ದಾರೆ. ಹೀಗಾಗಿ ರಾಜೀನಾಮೆ ಹೇಳಲು ಬಾಬರ್‌ ಮುಂದಾಗಿದ್ದಾರೆಂದು ಮೂಲಗಳು ತಿಳಿಸಿವೆ.  ಕೆಲವು ಆಪ್ತರು ಎಲ್ಲಾ ಮೂರು ಸ್ವರೂಪಗಳಲ್ಲಿ ನಾಯಕತ್ವದಿಂದ ಕೆಳಗಿಳಿಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಲೀಗ್ ಪಂದ್ಯಕ್ಕೂ ಮುನ್ನ ತಮ್ಮ ಮೇಲಿನ ಟೀಕೆಗಳನ್ನು ಉದ್ದೇಶಿಸಿ ಮಾತನಾಡಿದ ಬಾಬರ್, “ಪ್ರತಿಯೊಬ್ಬರೂ ತಮ್ಮದೇ ಆದ ದೃಷ್ಟಿಕೋನ ಹೊಂದಿರುತ್ತಾರೆ. ಆದರೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಯಾರಾದರೂ ನನಗೆ ಸಲಹೆ ನೀಡಬೇಕೆಂದು ಬಯಸಿದರೆ, ಎಲ್ಲರಲ್ಲೂ ನನ್ನ ಮೊಬೈಲ್‌ ಸಂಖ್ಯೆ ಇದೆ. ಟಿವಿ ಮುಂದೆ ಬಂದು ಸಲಹೆ ನೀಡುವುದು ಸುಲಭ. ಅದರ ಬದಲು ನನಗೆ ಅವರು ನೇರವಾಗಿ ಸಂದೇಶ ಕಳುಹಿಸಬಹುದು” ಎಂದು ಬಾಬರ್ ಹೇಳಿದ್ದಾರೆ.
کل کا میچ اہم ہے ، پلاننگ کے تحت کھیلیں گے، فخر زمان 20سے30اوورز رہے تو ہدف تک پہنچ سکتے ہیں، اسی طرح ہماری ٹیم میں افتخار اور محمد رضوان بھی ہیں، ورلڈکپ میں میری اور ٹیم کی پرفارمنس کی وجہ سےسوال اٹھایاجارہاہے، تین سال سے کپتانی کررہاہوں، مجھ پر کوئی دباؤ نہیں ہے،بابراعظم…pic.twitter.com/hqOUn3RTW9
— ARY NEWS (@ARYNEWSOFFICIAL)November 10, 2023

ಕಳೆದ ಮೂರು ವರ್ಷಗಳಿಂದ ನಾನು ನನ್ನ ತಂಡದ ನಾಯಕನಾಗಿದ್ದೇನೆ. ನಾನು ವಿಶ್ವಕಪ್‌ನಲ್ಲಿ ನಾನು ಮಾಡಬೇಕಾದ ರೀತಿಯಲ್ಲಿ ಪ್ರದರ್ಶನ ನೀಡಲಿಲ್ಲ, ಅದಕ್ಕಾಗಿಯೇ ನಾನು ಒತ್ತಡದಲ್ಲಿದ್ದೇನೆ ಎಂದು ಜನರು ಹೇಳುತ್ತಿದ್ದಾರೆ. ನಾನು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ನಾನು ಪ್ರದರ್ಶನ ನೀಡುತ್ತಿದ್ದವನು ಮತ್ತು ನಾನು ನಾಯಕನಾಗಿದ್ದೆ. ” ಎಂದು ಬಾಬರ್ ಹೇಳಿದ್ದಾರೆ.
ಜಿಯೋ ಸೂಪರ್‌ (Geo Super) ವರದಿಯ ಪ್ರಕಾರ, ಏಕದಿನ ವಿಶ್ವಕಪ್ ಬಳಿಕ ಏಕದಿನ ಮತ್ತು ಟಿ20 ನಾಯಕತ್ವಕ್ಕೆ ಬಾಬರ್ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು‌ ವರದಿ ಬಹಿರಂಗಪಡಿಸಿದೆ. ಈ ಸಂಬಂಧ ಅವರು ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಮತ್ತು ಅವರ ನಿಕಟವರ್ತಿಗಳ ಮಾರ್ಗದರ್ಶನ ಕೋರಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 18 =
Remember me
