ಚಂಡೀಗಢ:ಖ್ಯಾತ ಕುಸ್ತಿಪಟು ಬಬಿತಾ ಫೋಗಟ್‌ ಅವರ ಕುಟುಂಬದಲ್ಲಿ ಒಂದು ನಡೆಯಬಾರದ ಘಟನೆ ನಡೆದಿದೆ. ಕುಸ್ತಿ ಆಟದಲ್ಲಿ ಸೋತೆನೆಂಬ ನಿರಾಶೆಯಿಂದಾಗಿ ಬಬಿತಾ ಅವರ ಸೋದರ ಸಂಬಂಧಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹರಿಯಾಣದ ಬಲಾಲಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ರಿತಿಕಾ ಆತ್ಮಹತ್ಯೆಗೆ ಶರಣಾದ ಯುವತಿ. ಆಕೆ ರಾಜಸ್ಥಾನದ ಭರತ್ಪುರದ ಲೋಹಗರ್​ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಳು. ಮಾರ್ಚ್​ 12ರಿಂದ 14ರವರೆಗೆ ಕುಸ್ತಿ ಪಂದ್ಯಾವಳಿ ನಡೆದಿತ್ತು. ಆದರೆ ಅಂತಿಮ ಪಂದ್ಯದಲ್ಲಿ ರಿತಿಕಾ ಕೇವಲ ಒಂದು ಅಂಕದಿಂದ ಸೋಲುಂಡಿದ್ದಾಳೆ.
ಸೋಲಿನ ಬಗ್ಗೆ ಅತಿಯಾಗಿ ಬೇಸರಗೊಂಡಿದ್ದ ರಿತಿಕಾ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ. ಮಾರ್ಚ್​ 15ರಂದು ರಾತ್ರಿ 11ರ ಸಮಯಕ್ಕೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಜೊಮ್ಯಾಟೋ ಪ್ರಕರಣ: ಬೆಂಗಳೂರಿನಿಂದ ನಾಪತ್ತೆಯಾದ ಹಿತೇಶಾ! ಎಫ್​ಐಆರ್​ ದಾಖಲಾಗುತ್ತಿದ್ದಂತೆ ಮನೆಗೆ ಬೀಗ!

ಅಪ್ಪ ಅಮ್ಮನಿಗೆ ಕನ್ನಡದಲ್ಲೇ ವಿಷ್​ ಮಾಡಿದ ಅನುಷ್ಕಾ ಶೆಟ್ಟಿ! ನಿಜವಾದ ಕನ್ನಡ ಪ್ರೇಮವೆಂದರೆ ಇದೇ ಎಂದ ನೆಟ್ಟಿಗರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − ten =
Remember me
