ನವದೆಹಲಿ:ಮಂಗ ಮಾಂಸಾಹಾರಿಯೇ? ಅಲ್ಲ ಎಂದು ಅನೇಕರು ಹೇಳಬಹುದು. ಇನ್ನೂ ಕೆಲ ಪ್ರಾಣಿಗಳ ವರ್ತನೆ ತಿಳಿದವರು ಕೋತಿಗಳು ಹೇನು ಮುಂತಾದ ಸಣ್ಣ ಕೀಟಗಳನ್ನು ತಿನ್ನುತ್ತವೆ. ಆದರೆ ಈ ಜಾತಿಯ ಕೋತಿಗಳು ಮಾತ್ರ ಅತೀ ಹೆಚ್ಚು ಹಿಂಸಾತ್ಮಕ ವರ್ತನೆಯನ್ನು ತೋರುತ್ತವೆ. ಇಲ್ಲೊಂದು ವಿಡಿಯೋದಲ್ಲಿ ಕೋತಿಯೊಂದು ಜಿಂಕೆಯನ್ನು ಹಿಡಿದು ಕೆಳಕ್ಕೆ ಬೀಳಿಸಿ ರಸ್ತೆಯ ಬದಿಯಲ್ಲೇ ಜೀವಂತವಾಗಿ ತಿನ್ನುತ್ತಿರುವುದನ್ನು ಕಾಣಬಹುದು.
ಅಂದ ಹಾಗೆ ಈ ಕೋತಿಗಳ ಜಾತಿಯ ಹೆಸರು ಬಬೂನ್​ ಎಂದು. ಇವು ಪಕ್ಕಾ ಬೇಟೆಗಾರ ಕೋತಿಗಳು. ಇವು ನಿರ್ದಯಿ ಪ್ರಾಣಿಗಳಾಗಿದ್ದು ತಮ್ಮ ಬೇಟೆಯ ಮೇಲೆ ಚೂರೂ ಕರುಣೆ ತೋರದೇ ಜೀವಂತವಾಗಿಯೇ ತಿಂದು ಬಿಡುತ್ತವೆ. ಈ ಬಬೂನ್​ಗಳು ಕೆಲವೊಂದು ಬಾರಿ ಸಿಂಹದ ಮರಿಗಳನ್ನೂ ಕಿಡ್ನಾಪ್​ ಮಾಡಿ ಮರದ ಮೇಲೆ ತೆಗೆದುಕೊಂಡು ಹೋಗುತ್ತವೆ. ಅಲ್ಲಿ ಅವುಗಳೊಂದಿಗೆ ಮನಸ್ಸಿಗೆ ಬಂದಂತೆ ಆಟವಾಡಿ ಮೇಲಿನಿಂದ ಎಸೆದು ಕೊಲ್ಲುತ್ತವೆ. ನಂತರ ಅವನ್ನೇ ತಿನ್ನುತ್ತವೆ. ಅಷ್ಟು ಕ್ರೂರಿ ಈ ಬಬೂನ್​ಗಳು.

https://twitter.com/TerrifyingNatur/status/1659462332937043968?ref_src=twsrc%5Etfw%7Ctwcamp%5Etweetembed%7Ctwterm%5E1659462332937043968%7Ctwgr%5E33e63887df4e02447ea3357a20b1c03f69ed38cc%7Ctwcon%5Es1_c10&ref_url=https%3A%2F%2Fwww.latestly.com%2Fsocially%2Fsocial-viral%2Fmonkey-eats-deer-alive-on-roadside-watch-monkey-hunt-kill-and-eat-poor-animal-horrifying-old-video-goes-viral-again-5139791.html
ಈ ವಿಡಿಯೋವನ್ನು Terrifying Nature ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು ನಾನಾ ರೀತಿಯ ಕಾಮೆಂಟ್​ಗಳು ಕಂಡುಬಂದಿವೆ. ಅನೇಕ ಜನರು ಮಂಗನ ಈ ಕ್ರೂರ ರೂಪಕ್ಕೆ ಭಯ ಬಿದ್ದಿದ್ದು ಪ್ರಕೃತಿಯ ಭಯಾನಕ ರೂಪಕ್ಕೆ ದಂಗಾಗಿದ್ದಾರೆ. ಒಬ್ಬರಂತೂ ಪ್ರಾಣಿಗಳನ್ನು ಗುಂಡಿಟ್ಟು ಕೊಲ್ಲುವುದು ಇದಕ್ಕಿಂತ ಬಹು ಸೌಮ್ಯ ವಿಧಾನ ಎಂದು ಬರೆದಿದ್ದಾರೆ. ಇನ್ನೊಬ್ಬರು ಕಾಡಿನಲ್ಲಿ ಬೇರೆ ಆಹಾರವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 18 =
Remember me
