‘ಬಾಬರಿ ಕಟ್ಟಡ ನೆಲಸಮಗೊಳಿಸಿ ಎಂದು ನಾವು ಕರಸೇವಕರನ್ನು ಪ್ರಚೋದಿಸಲಿಲ್ಲ. ಬದಲಿಗೆ, ಅಂಥದ್ದೊಂದು ಕೃತ್ಯ ಎಸಗುವುದು ಬೇಡ ಎಂದೇ ಘೋಷಣೆ ಕೂಗಿ, ವಿವಾದಿತ ಕಟ್ಟಡ ರಕ್ಷಿಸುವ ಯತ್ನ ಮಾಡಿದೆವು’ ಎಂದು ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮಾಜಿ ಉಪ ಪ್ರಧಾನಿ ಎಲ್.ಕೆ. ಆಡ್ವಾಣಿ, ಬಿಜೆಪಿ ನಾಯಕರಾದ ಮುರಳಿ ಮನೋಹರ ಜೋಷಿ, ವಿನಯ್ ಕಟಿಯಾರ್, ಸಾಧಿ್ವ ರಿತಂಬರಾ, ಉಮಾಭಾರತಿ ಸೇರಿ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಮಾಡಿದ್ದ ಪ್ರತಿಪಾದನೆಗಳಿಗೀಗ ಅಧಿಕೃತ ಮಾನ್ಯತೆ ಸಿಕ್ಕಂತಾಗಿದೆ. 48 ಆರೋಪಿಗಳನ್ನು ನಿದೋಷಿಗಳು (16 ಮಂದಿ ಮೃತಪಟ್ಟಿದ್ದಾರೆ) ಎಂದು ಲಖನೌ ಸಿಬಿಐ ವಿಶೇಷ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ತಮ್ಮ 2300 ಪುಟಗಳ ತೀರ್ಪಿನಲ್ಲಿ ಸಾರಿರುವುದರಿಂದ ರಾಮಮಂದಿರ ಪರ ಹೋರಾಟಗಾರರು ನ್ಯಾಯಾಲಯದಲ್ಲಿ ಮತ್ತೊಂದು ಸುತ್ತಿನ ದಿಗ್ವಿಜಯ ಸಾಧಿಸಿದಂತಾಗಿದೆ.
* ಸಿಆರ್​ಪಿಸಿ 437(ಎ) ಸೆಕ್ಷನ್ ಅನ್ವಯ ಪ್ರಕ್ರಿಯಾ ಅವಶ್ಯತೆಗಾಗಿ ಆರೋಪಿಗಳಿಗೆ ತಲಾ 50 ಸಾವಿರ ರೂಪಾಯಿ ಮೌಲ್ಯದ ಬಾಂಡ್ ಸಂದಾಯ ಮಾಡಲು ಸೂಚಿಸಿದ ಕೋರ್ಟ್.
* ವೃತ್ತಪತ್ರಿಕೆಗಳ ವರದಿಯನ್ನು ಸಾಕ್ಷಿ ಎಂದು ಪರಿಗಣಿಸಲು ನಕಾರ.
* ಹಿಂದಿ ಭಾಷೆಯಲ್ಲಿರುವ 2,300 ಪುಟಗಳ ಸುದೀರ್ಘ ತೀರ್ಪ.
* ತೀರ್ಪಿನ ಮುಖ್ಯಭಾಗವನ್ನು ಐದು ನಿಮಿಷದಲ್ಲಿ ಓದಿದ ನ್ಯಾಯಾಧೀಶ.
ಐತಿಹಾಸಿಕ ತೀರ್ಪಿನ ಪ್ರಮುಖ ಅಂಶಗಳು1. ಆರೋಪಿಗಳು ಕೋಮುಗಲಭೆಗೆ ಪ್ರಚೋದನೆ ನೀಡಿದ್ದಾರೆ ಅಥವಾ ಅದರಲ್ಲಿ ಭಾಗಿಯಾಗಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ದಾಖಲಾಗಿದ್ದರೂ, ಅದಕ್ಕೆ ನೀಡಿರುವ ಸಾಕ್ಷ್ಯಗಳು ತೃಪ್ತಿಕರವಾಗಿಲ್ಲ.2. ಬಾಬರಿ ಕಟ್ಟಡ ಧ್ವಂಸಗೊಳ್ಳುತ್ತಿದ್ದ ವೇಳೆ ಆಡ್ವಾಣಿ, ಜೋಷಿ, ಸಾಧಿ್ವ ರಿತಂಬರಾ, ಉಮಾಭಾರತಿ, ಕಟಿಯಾರ್, ಆಚಾರ್ಯ ಧಮೇಂದ್ರ ದೇವ್ ಸೇರಿ ಪ್ರಮುಖರು ವೇದಿಕೆಯಲ್ಲಿ ಕುಳಿತಿದ್ದರೆಂದು ಸಾಕ್ಷ್ಯಗಳು ಹೇಳುತ್ತವೆ. ಈ ಎಲ್ಲ ಸಾಕ್ಷ್ಯಗಳನ್ನು ವಿಸõತವಾಗಿ ಅಧ್ಯಯನ ಮಾಡಲಾಗಿದೆ. ಆದರೆ, ಕಟ್ಟಡ ಕೆಡವಲು ಪ್ರಚೋದಿಸಿದ್ದಾರೆ ಎಂಬ ಆರೋಪ ಪುಷ್ಟೀಕರಿಸುವ ನಿಖರ ಸಾಕ್ಷ್ಯಗಳಿಲ್ಲ.3. ಡಿ.6, 1992ರ ಅಪರಾಹ್ನ 12 ಗಂಟೆ ವೇಳೆಗೆ ಬಾಬರಿ ಕಟ್ಟಡ ಸುತ್ತಮುತ್ತ ಎಲ್ಲವೂ ಸಹಜವಾಗಿತ್ತು. ವಿಶ್ವ ಹಿಂದು ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಕರಸೇವೆ ಹೇಗೆ ಸಾಗಲಿದೆ ಎಂಬ ವಿವರಣೆ ನೀಡುತ್ತಿದ್ದರು. ಕೆಲ ಕರಸೇವಕರು ಹಠಾತ್ತನೆ ಆಕ್ರೋಶಗೊಂಡು ಬಾಬರಿ ಕಟ್ಟಡದ ಮೇಲೆ ಕಲ್ಲುತೂರಾಟ ನಡೆಸಲು ಮುಂದಾದರು. ಕೆಲವರು ಬ್ಯಾರಿಕೇಡ್​ಗಳನ್ನು ಮುರಿದರು, ಮತ್ತೆ ಕೆಲವರು ಕಟ್ಟಡದ ಮೇಲೆ ಕುಳಿತರು. ಇದನ್ನು ನೋಡಿದ ಸಿಂಘಾಲ್, ‘ಕರಸೇವಕರೆಲ್ಲರೂ ದಯವಿಟ್ಟು ಕೆಳಗಿಳಿದು ಬನ್ನಿ’ ಎಂದು ವಿನಂತಿಸಿಕೊಂಡರು. ಆದರೆ ಹಾಗೆ ಹೇಳಿದ್ದಕ್ಕೆ ಪ್ರತಿಯಾಗಿ, ಅವರೆಲ್ಲರೂ ಸಿಂಘಾಲ್ ಮೇಲೆ ದಾಳಿ ನಡೆಸಲು ಮುಂದಾದರು.4. ಆರೆಸ್ಸೆಸ್ ಮತ್ತು ವಿಎಚ್​ಪಿಯ ಸ್ವಯಂಸೇವಕರು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಕಾಳಜಿ ವಹಿಸಿದ್ದರು ಮತ್ತು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಪ್ರಕಟಣೆಗಳನ್ನು ಮಾಡುತ್ತಿದ್ದರು ಎಂಬುದಾಗಿ ಪುರಾವೆಗಳು ಹೇಳುತ್ತವೆ. ಮಹಿಳೆಯರು, ವೃದ್ಧರು, ಮಾಧ್ಯಮ ಮಂದಿಗೆ ಕೂರುವ ವ್ಯವಸ್ಥೆಯನ್ನೂ ಅವರೇ ಮಾಡುತ್ತಿದ್ದರು. ಇವೆಲ್ಲವನ್ನು ಪರಿಶೀಲಿಸಿದಾಗ, ವಿವಾದಿತ ಕಟ್ಟಡವನ್ನು ಕೆಡವುವ ಉದ್ದೇಶ ಆ ಸ್ವಯಂಸೇವಕರಲ್ಲಿತ್ತು ಎಂದನಿಸುವುದಿಲ್ಲ.5. ಕರಸೇವಕರ ಒಂದು ಗುಂಪು ಉದ್ರಿಕ್ತಗೊಂಡಿತ್ತು ಮತ್ತು ಅವರು ಖಂಡಿತವಾಗಿಯೂ ಗೂಂಡಾಗಳಾಗಿದ್ದರು. ಆ ಗುಂಪಿನಲ್ಲಿದ್ದವರು ನಿಜವಾಗಿಯೂ ಭಗವಾನ್ ಶ್ರೀರಾಮನ ಭಕ್ತರಾಗಿದ್ದಿದ್ದರೆ, ‘ವಿವಾದಿತ ಕಟ್ಟಡದ ಕೆಳಗೆ ರಾಮಲಲ್ಲಾನ ಮೂರ್ತಿಯೂ ಇದೆ. ಅದನ್ನು ನಾವು ರಕ್ಷಿಸಬೇಕು’ ಎಂಬ ಸಿಂಘಾಲ್ ಮಾತಿಗೆ ಬೆಲೆ ಕೊಡುತ್ತಿದ್ದರು.6. ಪ್ರಾಸಿಕ್ಯೂಷನ್ ಸಾಕ್ಷ್ಯಗಳು ತಮ್ಮ ಹೇಳಿಕೆಯಲ್ಲಿ, ಕೆಲವು ಆರೋಪಿಗಳು, ಬಾಬರಿ ಕಟ್ಟಡವನ್ನು ನಾಶಗೊಳಿಸಲು ಕಟ್ಟಡಕ್ಕೆ ಮತ್ತೊಮ್ಮೆ ಬಿಗಿಯಾದ ಹೊಡೆತ ನೀಡಿ ಎಂದು ಘೋಷಣೆ ಹಾಕುತ್ತಿದ್ದುದರ ಬಗ್ಗೆ ವಿವರಿಸಿವೆ. ಆ ದಿನದಂದು ಲಕ್ಷಕ್ಕಿಂತಲೂ ಹೆಚ್ಚು ಕರಸೇವಕರು ಆ ಕಟ್ಟಡದ ಸುತ್ತಮುತ್ತ ಜಮಾವಣೆಗೊಂಡಿದ್ದರು ಎಂದು ಚಾರ್ಜ್​ಶೀಟ್​ನಲ್ಲಿದೆ. ಆದರೆ, ಇಲ್ಲಿ ಹೆಸರಿಸಲಾದ ಆರೋಪಿಗಳು ಮೇಲೆ ಹೇಳಲಾದ ಘೋಷಣೆ ಕೂಗುತ್ತಿದ್ದರೆಂಬುದಕ್ಕೆ ದಾಖಲೆ ಅಥವಾ ಧ್ವನಿಮಾದರಿಗಳನ್ನು ನೀಡಲಾಗಿಲ್ಲ.7 . ಡಿ.6ರಂದು ಆರೋಪಿತ ವ್ಯಕ್ತಿಗಳು ಏನೆಲ್ಲ ಭಾಷಣ ಮಾಡಿದರು ಎಂಬುದನ್ನು ಪುರಾವೆಗಳೊಂದಿಗೆ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿಯಾಗಿಲ್ಲ. ಕೋರ್ಟ್ ಮುಂದೆ ಪ್ರಸ್ತುಪಡಿಸಿದ ಕ್ಯಾಸೆಟ್​ಗಳು, ವಿಡಿಯೋಗಳು ನಕಲಿ ಎನ್ನುವುದನ್ನು ಸಂಬಂಧಪಟ್ಟ ಸಾಕ್ಷಿದಾರರೇ ಒಪ್ಪಿಕೊಂಡಿದ್ದಾರೆ.8. ಅಯೋಧ್ಯೆ ನಿವಾಸಿಗರು ಕೂಡ ಹೆಸರಿಸಲಾದ ಆರೋಪಿಗಳು ಕಟ್ಟಡ ಕೆಡವಲು ಉದ್ರಿಕ್ತ ಗುಂಪನ್ನು ಪ್ರಚೋದಿಸಿದರು ಎಂಬ ಸಾಕ್ಷಿ ನುಡಿದಿಲ್ಲ. ಬಹುಪಾಲು ಸಾಕ್ಷಿಗಳು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯವಲ್ಲ. ಪರಿಸ್ಥಿತಿ ಕೈಮೀರಿ ಹಠಾತ್ತನೆ ನಡೆಸಲಾದ ಕೃತ್ಯ ಎಂದು ಹೇಳಿಕೆಗಳಿಂದ ಭಾಸವಾಗುತ್ತದೆ.9. ಘಟನೆ ವೇಳೆ ಅಯೋಧ್ಯೆಯಲ್ಲಿ ನಿಯೋಜನೆಗೊಂಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಂಜುಗುಪ್ತಾ ಹೇಳಿಕೆ ಇಲ್ಲಿ ಮಹತ್ವದ್ದು. ಕೆಲ ದರೋಡೆಕೋರರು ಮತ್ತು ದುಷ್ಕರ್ವಿುಗಳು ಕರಸೇವಕರ ಮಧ್ಯೆ ಸೇರಿಕೊಂಡಿದ್ದರು ಎಂದು ಕೋರ್ಟ್​ನಲ್ಲಿ ಅವರು ಸಾಕ್ಷ್ಯ ಹೇಳಿದ್ದಾರೆ. ಈ ಕೃತ್ಯದಲ್ಲಿ ಸಮಾಜವಿರೋಧಿ ಶಕ್ತಿಗಳ ಕೈವಾಡ ಎದ್ದುಕಾಣುತ್ತಿದೆ.10. ಆರೋಪಿಗಳು ಸಮಾಜವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸಿ ಕಟ್ಟಡ ಧ್ವಂಸಗೊಳಿಸಿದರು ಎಂದು ಚಾರ್ಜ್​ಶೀಟ್​ನಲ್ಲಿ ದಾಖಲಿಸಲಾಗಿದೆ. ಆದರೆ, ಇದನ್ನು ಸಾಬೀತುಪಡಿಸಲು ಚಾರ್ಜ್​ಶೀಟ್​ನಲ್ಲಿ ಯಾವುದೇ ಪುರಾವೆ ಕೊಟ್ಟಿಲ್ಲ.11. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153 (ಎ) ಪ್ರಕಾರ ಯಾವ ಆರೋಪಿ ಏನು ಭಾಷಣ ಮಾಡಿದ ಮತ್ತು ಭಾಷಣದ ಯಾವ ಅಂಶ ಎರಡು ಗುಂಪುಗಳ ನಡುವಿನ ಸಂಘರ್ಷಕ್ಕೆ ಕಾರಣವಾಯಿತು ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕಾಗುತ್ತದೆ. ಆರೋಪಿಗಳು ಪ್ರಚೋದನಕಾರಿ ಭಾಷಣ ಮಾಡಿದ್ದರು ಎನ್ನುವುದರ ಆಧಾರದ ಮೇಲೆ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಘೋಷಿಸಲಾಗುವುದಿಲ್ಲ.12. ಆರೋಪಿಗಳು ಪ್ರಚೋದನಕಾರಿ ಘೋಷಣೆ ಕೂಗಿದರು ಎನ್ನಲಾಗಿದೆ. ಆದರೆ, ನಿರ್ದಿಷ್ಟ ಆರೋಪಿ ಮಾಡಿದ್ದ ಘೋಷಣೆ ಹಾಗೂ ಕೋರ್ಟ್ ಮುಂದೆ ಪ್ರಸ್ತುತಪಡಿಸಲಾದ ಧ್ವನಿಮಾದರಿಗಳನ್ನು ಪರಿಶೀಲಿಸಿದಾಗ ಅವು ಒಂದಕ್ಕೊಂದು ಹೊಂದಾಣಿಕೆಯಾಗದಿರುವುದು ಸ್ಪಷ್ಟವಾಗುತ್ತದೆ.13. ಡಿ.6ರಂದು ಅಯೋಧ್ಯೆಯಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು ಎಂದು ಗುಪ್ತಚರ ವರದಿಗಳಿದ್ದವು. ಆದರೆ, ಸ್ಥಳೀಯಾಡಳಿತ ಆ ಬಗ್ಗೆ ಹೆಚ್ಚಿನ ಗಮನವನ್ನೇ ನೀಡಲಿಲ್ಲ.14. ಆರೋಪಿಗಳ ವಿರುದ್ಧದ ವಿಡಿಯೋ ಕ್ಯಾಸೆಟ್​ಗಳನ್ನು ಸೀಲ್ ಮಾಡಲಾಗಿಲ್ಲ ಮತ್ತು ಅವು ಸ್ಪಷ್ಟವಾಗಿಲ್ಲ ಕೂಡ. ಹೀಗಾಗಿ ಕೇವಲ ವಿಡಿಯೋ ಕ್ಯಾಸೆಟ್​ಗಳನ್ನು ಅವಲಂಬಿಸಿ ತಪ್ಪಿತಸ್ಥರು ಎಂದು ಹೇಳಲಾಗುವುದಿಲ್ಲ.15. ಘಟನೆಗೆ ಮುನ್ನ ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ಸಭೆಯೊಂದು ನಡೆದು, ಅಲ್ಲಿ ಬಾಬರಿ ಕಟ್ಟಡ ನೆಲಸಮಗೊಳಿಸುವ ಒಳಸಂಚನ್ನು ರೂಪಿಸಲಾಯಿತು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ. ಆದರೆ, ಇಲ್ಲಿಯೂ ಪೂರಕ ಸಾಕ್ಷ್ಯ ಒದಗಿಸುವಲ್ಲಿ ಪ್ರಾಸಿಕ್ಯೂಷನ್ ಸಫಲವಾಗಿಲ್ಲ.16. ಆರೋಪಿಗಳು ಕಟ್ಟಡ ಕೆಡವುವ ಕೃತ್ಯದಲ್ಲಿ ಭಾಗಿದಾರರು ಎಂಬುದಕ್ಕೆ ಫೋಟೋಗಳನ್ನು ಸಲ್ಲಿಸಲಾಗಿದೆ. ಈ ಫೋಟೋಗಳ ನೆಗೆಟಿವ್​ಗಳೂ ಇದೆ ಎಂದು ಹೇಳಲಾದರೂ, ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿಬಿಐಗೆ ಸಾಧ್ಯವಾಗಿಲ್ಲ.17. ಎವಿಡೆನ್ಸ್ ಆಕ್ಟ್ (ಸಾಕ್ಷ್ಯ ಕಾಯ್ದೆ)ನ ನಿಯಮಗಳನ್ನು ಸಿಬಿಐ ಅನುಸರಿಸಲೇ ಇಲ್ಲ. ಹೀಗಾಗಿ ಎಲ್ಲ ಆರೋಪಿಗಳನ್ನು ಸಾಕ್ಷ್ಯ, ಪುರಾವೆ ಮತ್ತು ದಾಖಲೆಗಳ ಕೊರತೆಯಿಂದಾಗಿ ನಿದೋಷಿಗಳು ಎಂದು ಖುಲಾಸೆಗೊಳಿಸಲಾಗಿದೆ.18. ಸಾಧಿ್ವ ರುತಂಬರಾ ಕರಸೇವಕರನ್ನು ಪ್ರಚೋದಿಸಿದರು ಎಂದು ಸಿಬಿಐ ಹೇಳಿದೆ. ಆದರೆ ಭಾಷಣದ ಟೇಪ್​ಗಳನ್ನು ಸೀಲ್ ಮಾಡಲಾಗಿಲ್ಲ. ಅಲ್ಲದೆ, ಭಾಷಣದ ಪ್ರಿಂಟ್​ಔಟ್ ಪ್ರತಿಗಳನ್ನು ಪುರಾವೆಗಳು ಎಂದು ಸಲ್ಲಿಸಲಾಗಿದೆ. ಇದನ್ನು ಸಾಕ್ಷ್ಯ ಎಂದು ಒಪು್ಪವುದಾದರೂ ಹೇಗೆ?19. ವಿಶ್ವ ಹಿಂದು ಪರಿಷತ್ ಈ ಕೃತ್ಯದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾದಂತೆ ಕಾಣುತ್ತಿಲ್ಲ. ಕೆಲ ಅಪರಿಚಿತ ವ್ಯಕ್ತಿಗಳು ಕಟ್ಟಡದ ಮೇಲೆ ಕಲ್ಲುತೂರಾಟ ನಡೆಸಿದರು.20. 16ನೇ ಶತಮಾನದ ಬಾಬ್ರಿ ಕಟ್ಟಡ ಧ್ವಂಸ ಪೂರ್ವಯೋಜಿತವಲ್ಲ. ಇದು ಸಮಾಜ ಘಾತುಕ ಶಕ್ತಿಗಳು ಸ್ವಯಂಪ್ರೇರಿತವಾಗಿ ನಡೆಸಿದ ಆಕಸ್ಮಿಕ ಕೃತ್ಯ. ಇದರಲ್ಲಿ ಆಪಾದಿತರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದರೆಂಬುದನ್ನು ನಿಸ್ಸಂಶಯವಾಗಿ ಸಾಬೀತು ಪಡಿಸುವ ಪುರಾವೆ ಇಲ್ಲ.
ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳು ನಿರ್ದೋಷಿಗಳು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:4 × four =
Remember me
