ಯುಎಸ್​ನ ಮಹಿಳೆಯೋರ್ವರು ತನ್ನ ಮಗನಿಗೆ ಸ್ಕೈ ಎಂದು ಹೆಸರಿಟ್ಟಿದ್ದಾರೆ. ಆದರೆ ಇದರ ಹಿಂದೊಂದು ಕಾರಣವಂತೂ ಖಂಡಿತ ಇದೆ.
ಯುಎಸ್​ನ ಗ್ನೆಲಾನಿಲ್​ ಎಂಬ ಪುಟ್ಟ ಪ್ರದೇಶದಿಂದ ಕ್ರಿಸ್ಟಲ್​ ಹಿಕ್ಸ್​ ಎಂಬ ಗರ್ಭಿಣಿಯನ್ನು ವಿಮಾನದಲ್ಲಿ ಅಲಸ್ಕಾದಲ್ಲಿರುವ ಅಂಕರೇಜ್​​ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಕೆ ವಿಮಾನ ಹತ್ತಿದ ಒಂದು ತಾಸಿನಲ್ಲಿಯೇ, ಹೆರಿಗೆಯಾಗಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
ಕ್ರಿಸ್ಟಲ್​ ಹಿಕ್ಸ್​ ಮೊದಲ ಬಾರಿ ವಿಮಾನ ಹತ್ತಿದ್ದರು ಹಾಗೂ ಆಗಲೇ ಮಗುವಿಗೂ ಜನ್ಮ ನೀಡಿದ್ದಾರೆ. ಇದು ಸಂಪೂರ್ಣ ಹೊಸ ಅನುಭವ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ನನಗೆ ವಿಮಾನದ ಮೇಲೆ ಹೆರಿಗೆಯಾಗಿದ್ದು ತುಂಬ ನಾಚಿಕೆ ತಂದಿದೆ ಎಂದೂ ಕೂಡ ತಿಳಿಸಿದ್ದಾರೆ.ಇದನ್ನೂ ಓದಿ:ಮೋದಿ, ಟ್ರಂಪ್​ಗಿಂತ ಫೇಮಸ್​ ಆಗ್ಬಿಟ್ಟಿದ್ದಾರಂತೆ ಸುಶಾಂತ್​ …
ನಂತರ ಹಿಕ್ಸ್​ ಹಾಗೂ ಆಕೆಯ ಮಗನನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆರಿಗೆಗೆ ಇನ್ನೂ ಒಂದು ತಿಂಗಳು ಬಾಕಿ ಇದ್ದಾಗಲೇ ಹಿಕ್ಸ್​ ಮಗುವಿಗೆ ಜನ್ಮ ನೀಡಿದ್ದಾರೆ. ಹಾಗಾಗಿ ಮಗುವನ್ನು ಆಕ್ಸಿಜನ್​ ಸಪೋರ್ಟ್​ನಲ್ಲಿ ಇಡಲಾಗಿದೆ.
ಆಕಾಶ ಮಧ್ಯೆ, ವಿಮಾನದಲ್ಲಿ ಹುಟ್ಟಿದ ಮಗುವಿಗೆ ಅಷ್ಟೇ ವಿಶಿಷ್ಟವಾಗಿ ಸ್ಕೈ ಎಂದು ಈಕೆ ಹೆಸರಿಟ್ಟಿದ್ದಾರೆ. ಆದರೆ ಮಗುವಿನ ಜನ್ಮಸ್ಥಳದ ಹೆಸರನ್ನು ಬರ್ತ್​ ಸರ್ಟಿಫಿಕೇಟ್​​ನಲ್ಲಿ ಉಲ್ಲೇಖಿಸುವಾಗ ತುಂಬ ಗೊಂದಲಕ್ಕೀಡಾಗಿದ್ದರು. ಆಕಾಶ ಎಂದಾಗಲೀ, ವಿಮಾನವೆಂದಾಗಲೀ ಬರೆಯಲಾಗದು ಎಂಬ ಕಾರಣಕ್ಕೆ ಅಂಕರೇಜ್​​ ಆಸ್ಪತ್ರೆ ಎಂದು ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್​)
VIDEO: ಹಾಡಹಗಲಲ್ಲೇ ಪ್ರೇಯಸಿಯನ್ನು ಸಿನಿಮೀಯ ಸ್ಟೈಲ್​​ನಲ್ಲಿ ಕಿಡ್ನಾಪ್​ ಮಾಡಿದ ಯುವಕ; ದೃಶ್ಯ ನೋಡಿ ಬೆಚ್ಚಿಬಿದ್ದ ಕೋಲಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
