ಇಡುಕ್ಕಿ:ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ನವಜಾತ ಶಿಶು ಮರಣ ಹೊಂದಿದರಿಂದ ಮನನೊಂದು ತಾಯಿ ಮತ್ತು ಹಿರಿಯ ಮಗ ಬಾವಿಗೆ ಹಾರಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಇಡುಕ್ಕಿ ಜಿಲ್ಲೆಯ ಉಪ್ಪುಥರಾ ಪಂಚಾಯಿತಿಯ ಕೈಥಪಥಲ ಎಂಬಲ್ಲಿ ನಡೆದಿದೆ.
ಮಗು ಮೃತಪಟ್ಟ ಘಟನೆಯಿಂದ ತಾಯಿ ತುಂಬಾ ಮನನೊಂದಿದ್ದಳು ಎಂದು ಆಕೆಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮದ್ವೆ ಮೆರವಣಿಗೆಯಲ್ಲಿ ಪೊಲೀಸ್​ ಅಧಿಕಾರಿಯನ್ನು ಎಳ್ಕೊಂಡು ಮುತ್ತಿಟ್ಟ ಯುವಕ! ಮುಂದೇನಾಯ್ತು ನೀವೇ ನೋಡಿ…
ಮೃತಳನ್ನು ಲಿಜಿ (38) ಎಂದು ಗುರುತಿಸಲಾಗಿದೆ. ತನ್ನ 7 ವರ್ಷದ ಮಗ ಲಿನ್​ ಟಾಮ್​ ಜತೆ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಇಂದು (ಮಾ.16) ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ. ಆಕೆಯ ಸಂಬಂಧಿಕರು ಚರ್ಚ್​ಗೆ ಹೋಗಿದ್ದ ಸಂದರ್ಭದಲ್ಲಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
ಸಂಬಂಧಿಕರು ಚರ್ಚ್​ನಿಂದ ಮನೆಗೆ ಬಂದು ನೋಡಿದಾಗ ಯಾರು ಇಲ್ಲದಿರುವುದನ್ನು ಗಮನಿಸಿ ಹುಡುಕಾಡಿದಾಗ ಇಬ್ಬರು ಬಾವಿಯಲ್ಲಿ ಶವವಾಗಿ ಪತ್ತೆಯಾದರು. ಲಿಜಿ ಅವರ 28 ದಿನಗಳ ಕಿರಿಯ ಮಗು ನಿನ್ನೆ ಎದೆಹಾಲು ಸೇವಿಸುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಕೇಸ್​ ಏನಾಯ್ತು? ತನಿಖಾಧಿಕಾರಿಗಳಿಗೆ ಹೈಕೋರ್ಟ್​ ಶಾಕ್​!

ಇಡಿ ಇಕ್ಕಳದಲ್ಲಿ ಕವಿತಾ: ಹೈದರಾಬಾದ್​ನಲ್ಲಿ ರಾರಾಜಿಸುತ್ತಿದೆ ಬಿ.ಎಲ್​. ಸಂತೋಷ್​ “ಬೇಕಾಗಿದ್ದಾರೆ” ಪೋಸ್ಟರ್​

ನಾಳೆ ತೆರೆಗೆ ಅಪ್ಪಲಿಸಲಿದೆ ಕಬ್ಜ: ಸಿನಿಮಾ ತಂಡದಿಂದ ಟೆಂಪಲ್​ ರನ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × five =
Remember me
