ಪ್ರಾಣಿಗಳ ವಿನೋದ ಭರಿತ ಆಟವನ್ನು ನೋಡುವುದೇ ಚೆಂದ. ಅದರಲ್ಲೂ ಆನೆ ಮರಿಗಳ ಆಟ ನೋಡ ನೋಡುತ್ತಲೇ ನಗೆಯುಕ್ಕಿಸುವಂತಿರುತ್ತದೆ.ಮಕ್ಕಳ ಆಟದಲ್ಲಿ ಆನೆ, ಆನೆಮರಿಗಳ ಆಟಿಕೆಗಳದ್ದೇ ಪಾರುಪತ್ಯವಿರುತ್ತದೆ. ಕಥೆ, ಹಾಡುಗಳಲ್ಲೂ ಕೂಡ. ಉದಾಹರಣೆಗೆ, ಆನೆ ಬಂತೊಂದಾನೆ… ಹಾಡು.ಮಕ್ಕಳಿಗೆ ಸಮಾಧಾನ ಮಾಡಿಸುತ್ತ, ಊಟ ಮಾಡಿಸುವ ತಾಯಿ ಹೇಳುವ ಹಾಡುಗಳಲ್ಲಿ ಆನೆಯೇ ನಾಯಕ. ಆನೆ ಏನು ಮಾಡಿದರೂ ಚೆಂದ. ಅದಕ್ಕೊಂದು ಉದಾಹರಣೆ ಈ ದೃಶ್ಯಾವಳಿಯಲ್ಲಿದೆ ನೋಡಿ.ಇಲ್ಲಿ ಆನೆ ಮರಿಯೊಂದು ಯಾರೂ ನೋಡುತ್ತಿಲ್ಲವೆಂಬಂತೆ ತನ್ನ ಪಾಡಿಗೆ ತಾನು ಮಣ್ಣಿನ ಸ್ನಾನ ಮಾಡಿ ಆನಂದಿಸುತ್ತಿರುವಂತಿದೆ.
Baby Elephant enjoying mud bath @ Bandhavgarh !!Play time apart , it also helps with Thermoregulation, providing sunscreen or even soothing insects bites ! No doubt why they are one of the most intelligent creatures!@RavindraIfs@ParveenKaswan@rameshpandeyifs@minforestmppic.twitter.com/erhpKD1xf8
— Bandhavgarh Tiger Reserve (@BandhavgarhTig2)May 21, 2020

ಈ ದೃಶ್ಯಾವಳಿಯನ್ನು ಬಂದವ್​ಗಢ್ ಟೈಗರ್ ರಿಸರ್ವ್ ಟ್ವಿಟರ್ ತನ್ನ ಖಾತೆಯಲ್ಲಿ ಹಂಚಿಕೊಂಡಿದೆ. “ಮಣ್ಣಿನ ಸ್ನಾನವನ್ನು ಆನಂದಿಸುತ್ತಿರುವ ಆನೆ ಮರಿ’ ಎಂದು ಈ ವಿಡಿಯೋಗೆ ಶೀರ್ಷಿಕೆ ಇದೆ.ಈ ಮಣ್ಣಿನ ಸ್ನಾನ ಪ್ರಾಣಿಗಳಿಗೆ ತುಂಬ ಪ್ರಯೋಜನಕಾರಿಯಾಗಿದೆ ಇದು ಉಷ್ಣ ನಿಯಂತ್ರಣಕ್ಕೆ, ಸೊಳ್ಳೆ ಕಡಿತದಿಂದ ಪಾರಾಗಲು ಕೂಡ ಸಹಾಯ ಮಾಡುತ್ತದೆ. ಆದ್ದರಿಂದಲೇ ಆನೆ ಅತ್ಯಂತ ಬುದ್ಧಿವಂತ ಜೀವಿಗಳಲ್ಲಿ ಒಂದು ಎಂಬುದರಲ್ಲಿ ಸಂದೇಹವಿಲ್ಲ!” ಎಂದು ಈ ಪೋಸ್ಟ್​​ನಲ್ಲಿ ವಿವರಿಸಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಸಾವಿರಾರು ಬಾರಿ ವೀಕ್ಷಿಸಲಾಗಿದೆ.ಪ್ರಾಣಿಗಳ ವಿಡಿಯೊ ಮನಕ್ಕೆ ಮುದ ನೀಡುವಂತಿರುತ್ತವೆ. ಅದು ಒತ್ತಡದಿಂದ ಮುಕ್ತವಾಗಿಸುತ್ತದೆ. ಮಕ್ಕಳು ಯಾವಾಗಲೂ ಮಣ್ಣಿನಾಟವನ್ನು ಇಷ್ಟಪಡುತ್ತಾರೆ. ಈ ಆನೆಯ ವಿಡಿಯೋ ಅದೇ ಪರಿಕಲ್ಪನೆಯನ್ನು ಬಿಂಬಿಸುವಂತಿದೆ. ಮಕ್ಕಳು ಹೊರಗೆ ಆಡುವಾಗ ಬಟ್ಟೆ ಕೊಳಕಾದರೆ ಪೋಷಕರು ಬೇಸರಗೊಳ್ಳುತ್ತಾರೆ. ಆದರೆ ಈ ಆನೆಗೆ ಅಂತಹ ಯಾವುದೇ ಸಮಸ್ಯೆಗಳಿಲ್ಲ. ಮಣ್ಣಿನ ಸ್ನಾನವನ್ನು ಆನಂದಿಸುತ್ತಿರುವಂತಿದೆ.
ಶೀಘ್ರವೇ ಬರಲಿದೆ ಉದ್ಯಮಶೀಲತಾ ಕೌಶಲಗಳ ಮೇಲೆ ಬೆಳಕು ಚೆಲ್ಲುವ ಡಿಟಿಎಚ್ ಚಾನೆಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
