ಚೆನ್ನೈ: ಅರಣ್ಯದಲ್ಲಿ ಅನಾರೋಗ್ಯಕ್ಕೀಡಾಗಿ ಸಾಯುತ್ತಿದ್ದ ಆನೆಯನ್ನು ರಕ್ಷಿಸಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಶ್ಲಾಘಿಸಿ ಐಎಫ್‌ಎಸ್ ಅಧಿಕಾರಿ ಸುಪ್ರಿಯಾ ಸಾಹು ಟ್ವೀಟ್ ಮಾಡಿದ್ದಾರೆ. ವೈರಲ್ ಆಗುತ್ತಿರುವ ಈ ಟ್ವೀಟ್ ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ . ಮೂಕ ಜೀವಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶ್ಲಾಘನೆಯ ಸುರಿಮಳೆಗರೆಯುತ್ತಿದ್ದಾರೆ. ಈ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಸಂಗಾತಿ ಹುಡುಕುತ್ತಿದ್ದ ಯುವಕನಿಗೆ ಪೊಲೀಸರು ಕೊಟ್ಟ ಉತ್ತರ ಹೀಗಿದೆ ನೋಡಿ..
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹೇಳಿರುವಂತೆ , ಆನೆ ಕಾಡಿನಲ್ಲಿ ಬಿದ್ದಿದೆ. ಎದ್ದೇಳಲು ಸಾಧ್ಯವಾಗುತ್ತಿಲ್ಲ. ತಾಯಿ ಆನೆಯ ಅಸಹಾಯಕತೆ ಕಂಡು ಮರಿ ಆನೆ ದಿಕ್ಕುತೋಚದೆ ಆಹಾರ, ನೀರು ತ್ಯಜಿಸಿ ಅದರ ಪಕ್ಕದಲ್ಲಿಯೇ ಮಲುಗಿದೆ.
ಕಡೆಗೆ ಅದು ಹೇಗೋ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಮತ್ತು ಮರಿ ಆನೆಯನ್ನು ಕಂಡು ಚಿಕಿತ್ಸೆ ನೀಡಿದ್ದಾರೆ. ಕ್ರೇನ್ ಸಹಾಯದಿಂದ ನಿತ್ರಾಣಗೊಂಡಿದ್ದ ಆನೆಯನ್ನು ಮೇಲೆತ್ತಿ ಚಿಕಿತ್ಸೆ ನೀಡಿದ್ದಾದರೆ.ದಿನವಿಡೀ ಹಾರೈಕೆ ಮಾಡಿದ ನಂತರ ಆನೆ ಸ್ವಲ್ಪ ಚೇತರಿಸಿಕೊಂಡಿದೆ. ಇದು ಮರಿ ಆನೆಯಲ್ಲಿ ಆತಂಕವನ್ನು ಕಡಿಮೆ ಮಾಡಿದೆ.
ಈ ವಿಷಯಗಳನ್ನು ಹಂಚಿಕೊಂಡ ಸುಪ್ರಿಯಾ ಸಾಹು, ಪ್ರಸ್ತುತ ಎರಡು ಆನೆಗಳು ಸುರಕ್ಷಿತವಾಗಿವೆ. ತಾಯಿ ಆನೆ ಮಗುವಿಗೆ ಶುಶ್ರೂಷೆ ಮಾಡುತ್ತಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಇನ್ನೂ ಕೆಲವು ದಿನ ತಾಯಿ ಆನೆಯನ್ನು ಜಾಗರೂಕತೆಯಿಂದ ನೋಡಿಕೊಳ್ಳಬೇಕು ಎಂದಿದ್ದಾರೆ.
ಆನೆಯನ್ನು ರಕ್ಷಿಸಿದ ಸಿಎಫ್ ರಾಮಸುಬ್ರಮಣ್ಯಂ, ಡಿಎಫ್ ಒ ಜಯರಾಜ್, ಪಶು ವೈದ್ಯಾಧಿಕಾರಿಗಳಾದ ಡಾ. ರಾಜೇಶ್, ಡಾ. ರೇಂಜ್ ಆಫೀಸರ್ ಗಳಾದ ಅರುಣ್, ತಿರುಮುರುಗನ್ ಮತ್ತಿತರರಿಗೆ ಪ್ರಿಯಾಂಕಾ ಧನ್ಯವಾದ ಅರ್ಪಿಸಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಅರಣ್ಯಾಧಿಕಾರಿಗಳನ್ನು ಹೊಗಳುತ್ತಿದ್ದಾರೆ. ಅವರ ಕಾರ್ಯ ಸ್ಪೂರ್ತಿದಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಕಾಡುಗಳು ಮತ್ತು ವನ್ಯಜೀವಿಗಳು ಅತ್ಯಗತ್ಯ ಎಂದು ಕೆಲವರು ನಂಬುತ್ತಾರೆ. ಅವುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆನೆ ಶೀಘ್ರ ಗುಣಮುಖವಾಗಿರುವುದಕ್ಕೆ ವೈದ್ಯರಿಂದಲೂ ಪ್ರಶಂಸೆಯ ಸುರಿಮಳೆಯಾಗಿದೆ.
ಇತ್ತೀಚೆಗೆ ಇದೇ ರೀತಿ ಗುಂಡಿಗೆ ಬಿದ್ದಿದ್ದ ಕಾಡಾನೆಯನ್ನು ತಮಿಳುನಾಡು ಅಧಿಕಾರಿಗಳು ರಕ್ಷಿಸಿದ್ದರು.
ನೆಲದ ಮೇಲೆ ಮಲಗುವುದು ಉತ್ತಮವೇ? ಆಯುರ್ವೇದ ಹೇಳಿದ ಸತ್ಯ ಇದೇ ನೋಡಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 9 =
Remember me
