ಮುಂಬೈ:ಕರೊನಾ ಕೆಲವು ಜನರಲ್ಲಿ ಮಾನವೀಯತೆ, ಸಂಬಂಧಗಳನ್ನೂ ಮರೆಸಿಬಿಟ್ಟಿದೆ. ಕಣ್ಣೆದುರೇ ನರಳಾಡುತ್ತಿದ್ದರೂ ಸಹಾಯ ಮಾಡದೆ, ದೂರ ಉಳಿಯುವಂತೆ ಮಾಡಿಸಿಬಿಟ್ಟಿದೆ. ಅದೇ ರೀತಿಯ ವರ್ತನೆಯಿಂದಾಗಿ ಇನ್ನೂ ವರ್ಷ ಪೂರೈಸದ ಮಗು ತಾಯಿ ಶವದೊಂದಿಗೆ ಎರಡು ದಿನ ಕಳೆದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪುಣೆಯ ಪಿಂಪ್ರಿ ಚಿಂಚ್ವಾಡಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸರಸ್ವತಿ ರಾಜೇಶ್ ಕುಮಾರ್ (29) ಹೆಸರಿನ ಮಹಿಳೆ ಮನೆ ಬಾಗಿಲು ಹಾಕಿಕೊಂಡಿದ್ದು, ಒಳಗೇ ಮೃತಳಾಗಿದ್ದಾಳೆ. ಆಕೆ ಕಳೆದ ಶನಿವಾರದಂದೇ ಮೃತಳಾಗಿದ್ದಾಳೆ. ಸರಸ್ವತಿ ಮೃತಳಾದ ವಿಚಾರ ಕುಟುಂಬಸ್ಥರಿಗೆ ತಿಳಿದುಬಂದಿದೆಯಾದರೂ ಕರೊನಾ ಭಯದಿಂದ ಅವರ್ಯಾರೂ ಆಕೆಯ ಮನೆ ಬಳಿಯೂ ಸುಳಿದಿಲ್ಲ. ಎರಡು ದಿನವಾದ ಮೇಲೆ ಅಂದರೆ ಸೋಮವಾರ ಮನೆಯಿಂದ ದುರ್ವಾಸನೆ ಬರಲಾರಂಭಿಸಿದೆ. ಅದನ್ನು ಸಹಿಸಲಾಗದ ಮನೆ ಮಾಲೀಕ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ.
ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಸರಸ್ವತಿ ಶವ ಬಿದ್ದಿದ್ದರೆ ಅದರ ಪಕ್ಕದಲ್ಲಿ ಆಕೆಯ ವರ್ಷ ತುಂಬದ ಮಗ ಮಲಗಿರುವುದು ಕಂಡು ಬಂದಿದೆ. ಎರಡು ದಿನಗಳಿಂದ ಊಟ ತಿಂಡಿಯಿಲ್ಲದ ಮಗು ಅಲ್ಲೇ ಸುಸ್ತಾಗಿ ಮಲಗಿತ್ತು. ಅದನ್ನು ಕಂಡ ಗ್ರಾಮಸ್ಥರು ಮಗುವಿಗೂ ಕರೊನಾ ಇರಬಹುದು ಎನ್ನುವ ಭಯದಿಂದ ಮಗುವನ್ನು ಮುಟ್ಟಲೂ ಮುಂದಾಗಿಲ್ಲ. ಆದರೆ ಸ್ಥಳಕ್ಕೆ ಬಂದಿದ್ದ ಸುಶೀಲಾ ಮತ್ತು ರೇಖಾ ಹೆಸರಿನ ಮಹಿಳಾ ಪೊಲೀಸರು ಮಗುವನ್ನು ಎತ್ತಿಕೊಂಡು ಅದಕ್ಕೆ ಹಾಲು ಕುಡಿಸಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಮಗುವಿನ ಕರೊನಾ ವರದಿ ನೆಗೆಟಿವ್​ ಬಂದಿದೆ.
ಸರಸ್ವತಿ ಗಂಡ ರಾಜೇಶ್​ ಉತ್ತರ ಪ್ರದೇಶಕ್ಕೆ ಕೆಲಸದ ನಿಮಿತ್ತ ಹೋಗಿರುವುದಾಗಿ ತಿಳಿದುಬಂದಿದೆ. ಆತನನ್ನು ವಾಪಾಸು ಕರೆಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸರಸ್ವತಿ ಶವದ ಮರಣೋತ್ತರ ಪರೀಕ್ಷೆ ಬಂದ ನಂತರ ಆಕೆಯ ಸಾವಿಗೆ ನಿಜ ಕಾರಣ ತಿಳಿದುಬರಲಿದೆ. (ಏಜನ್ಸೀಸ್​)
ಆ್ಯಂಕರ್ ಅರುಣ ಬಡಿಗೇರ ತಂದೆ-ತಾಯಿಯನ್ನು ಬಲಿ ತೆಗೆದುಕೊಂಡ ಕರೊನಾ

ಭಾರತದಲ್ಲಿ ಕರೊನಾ ಮಹಾಸ್ಫೋಟ! ಒಂದೇ ದಿನ 4 ಲಕ್ಷಕ್ಕೂ ಅಧಿಕ ಪ್ರಕರಣ ದೃಢ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 12 =
Remember me
