ನವದೆಹಲಿ:ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನ ಅರವಿಂದ್ ಕೇಜ್ರಿವಾಲ್​ ಅವರಂತೆಯೇ ವೇಷ ಧರಿಸಿದ್ದ ಪುಟ್ಟ ಮಗುವಿನ ಫೋಟೋ ಕೂಡ ಸಿಕ್ಕಾಪಟೆ ವೈರಲ್​ ಆಗಿತ್ತು.
ಅರವಿಂದ್ ಕೇಜ್ರಿವಾಲ್​ರಂತೆ ತಲೆಗೆ ಕಪ್ಪು ಮಫ್ಲರ್ ಕಟ್ಟಿಕೊಂಡು, ಆಪ್​ ಟೊಪ್ಪಿ ಹಾಕಿಕೊಂಡು, ಕೇಜ್ರಿವಾಲ್​ ಧರಿಸುವ ತರಹದ್ದೇ ಕನ್ನಡಕ ಹಾಕಿಕೊಂಡು, ಸಾಲದ್ದಕ್ಕೆ ಮೀಸೆಯನ್ನೂ ಬಳಿದುಕೊಂಡು ದೆಹಲಿಯ ಆಪ್​ ಕಚೇರಿ ಎದುರು ಅಂದು ಸಂಭ್ರಮಾಚರಣೆಯ ಹೊತ್ತಲ್ಲಿ ಪಾಲ್ಗೊಂಡಿದ್ದ ಪುಟ್ಟ ಬಾಲಕ ಇಂಟರ್​ನೆಟ್​ನಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದ.
ಇದೇ ಮಫ್ಲರ್​ ಬೇಬಿ, ಚೋಟಾ ಕೇಜ್ರಿವಾಲ್​ ಇಂದು ಕೂಡ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅರವಿಂದ್​ ಕೇಜ್ರಿವಾಲ್​ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾನೆ. ಆದರೆ ವಿಶೇಷವೆಂದರೆ ಆತ ಸುಮ್ಮನೆ ಬಂದಿಲ್ಲ.
ಚುನಾವಣಾ ಫಲಿತಾಂಶದ ದಿನ ಈ ಬಾಲಕನ ವೇಷಕ್ಕೆ ಜನ ಭಲೇ ಎಂದಿದ್ದರು. ಒಂದೇ ದಿನದಲ್ಲಿ ಇವನ ಪ್ರಸಿದ್ಧಿಯನ್ನು ಗುರುತಿಸಿದ ಆಮ್ ಆದ್ಮಿ ಪಕ್ಷ, ಅರವಿಂದ್​ ಕೇಜ್ರಿವಾಲ್​ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಾಲಕನಿಗೆ ಅಧಿಕೃತ ಆಹ್ವಾನ ನೀಡಿತ್ತು.
ಇಂದು ಕೂಡ ಅರವಿಂದ್ ಕೇಜ್ರಿವಾಲ್​ ಅವರ ವೇಷದಲ್ಲಿಯೇ ಈತ ಬಂದಿದ್ದಾನೆ. ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ವೇದಿಕೆ ಸುತ್ತಮುತ್ತ ಓಡಾಡಿದ್ದಾನೆ. ಕೆಲವರು ಇವನೊಟ್ಟಿಗೆ ಸೆಲ್ಫೀ, ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಲಿಟ್ಲ್​ ಮಫ್ಲರ್​ಮನ್​, ಬೇಬಿ ಅರವಿಂದ್ ಕೇಜ್ರಿವಾಲ್​ ಎಂದು ಆತನನ್ನು ಕರೆಯುತ್ತಿದ್ದಾರೆ.ಆಪ್​ ಸಂಸದ ರಾಘವ್​ ಚಾಧಾ ಕೂಡ ಪುಟ್ಟ ಹುಡುಗನೊಂದಿಗೆ ಫೋಟೋ ತೆಗೆದುಕೊಂಡು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + four =
Remember me
