ದೌಸಾ:ಆಸ್ಪತ್ರೆಯೊಂದರಲ್ಲಿ ಗಣೇಶನ ಮುಖವನ್ನು ಹೋಲುವ ಶಿಶು ಜನಿಸಿರುವ ಅಪರೂಪದ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ.ಹೆರಿಗೆಯ ಸಮಯದಲ್ಲಿ ಸಹಾಯ ಮಾಡಿದ ಆಸ್ಪತ್ರೆಯ ಸಿಬ್ಬಂದಿ, ನವಜಾತ ಶಿಶುವಿನ ವೈಶಿಷ್ಟ್ಯಗಳನ್ನು ನೋಡಿ ಆಶ್ಚರ್ಯಚಕಿತರಾಗಿದ್ದು, ಮಗುವಿಗೆ ಗಣೇಶನಂತೆಯೇ ಸೊಂಡಿಲು ಮತ್ತು ಇತರ ಅಸಾಮಾನ್ಯ ಲಕ್ಷಣಗಳಿವೆ. ದುರದೃಷ್ಟವಶಾತ್​ ಮಗು ಜನಿಸಿದ 20 ನಿಮಿಷಗಳ ನಂತರ ಮೃತಪಟ್ಟಿದ್ದು ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.ಇದನ್ನೂ ಓದಿ:ಕೋಣೆಯಲ್ಲಿ ಮಲಗಿದ್ದ ತಾಯಿ, 2 ಮಕ್ಕಳ ಗಂಟಲು ಸೀಳಿ ಭೀಕರ ಹತ್ಯೆಅಲ್ವಾರ್ ಜಿಲ್ಲೆಯ ಮಹಿಳೆಯೊಬ್ಬರು ಜುಲೈ 31ರಂದು ರಾತ್ರಿ 9.30 ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ‘ದೈವಿಕ’ ಮಗುವನ್ನುನೋಡಲು ಹಲವಾರು ಜನರು ಸ್ಥಳದ ಜಮಾಯಿಸಿದ್ದರು. ಈ ಕುರಿತು ಮಾತನಾಡಿರುವ ದೌಸಾ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಡಾ.ಶಿವರಾಮ್ ಮೀನಾ ಮಾತನಾಡಿ, ಆನುವಂಶಿಕತೆ ಹೊರತು ಪಡಿಸಿದರೆ ಕ್ರೋಮೋಸೋಮುಗಳು ಅಸ್ವಸ್ಥತೆಗಳಿಂದಾಗಿ ವಿಚಿತ್ರವಾದ, ವೈಶಿಷ್ಟ್ಯತೆ ಹೊಂದಿರುವ ಶಿಶುಗಳು ಜನಿಸುವ ನಿದರ್ಶನಗಳಿವೆ. ಪ್ರತಿ ಗರ್ಭಿಣಿ ಮಹಿಳೆ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಅಗತ್ಯ ಎಂದು ಹೇಳಿದ್ದಾರೆ.ಅಲ್ಲದೇ, ಗರ್ಭಿಣಿಯರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಆರೋಗ್ಯ ಕೇಂದ್ರಗಳು ಮತ್ತು ಅಂಗನವಾಡಿ ಕೇಂದ್ರಗಳ ಮೂಲಕ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಗರ್ಭಿಣಿಯರು ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಹಾಗೂ ತಮ್ಮ ಶಿಶುಗಳ ರಕ್ಷಣೆ ಮಾಡಬೇಕು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 3 =
Remember me
